Sunday, November 22, 2026

ಪ್ರಾಯೋಗಿಕ ಆವೃತ್ತಿ

ಜಗತ್ತು ದೇವರ ಸೃಷ್ಟಿಯಾದರೆ, ಜಾತಿ – ಧರ್ಮ ಮನುಷ್ಯನ ಸೃಷ್ಟಿ : ಚಂದ್ರಶೇಖರನಾಥ ಸ್ವಾಮೀಜಿ

ಜಗತ್ತು ದೇವರ ಸೃಷ್ಟಿಯಾದರೆ, ಜಾತಿ- ಧರ್ಮ ಮನುಷ್ಯನ ಸೃಷ್ಟಿಯಾಗಿದೆ. ಮನುಜ ಒಳ್ಳೆಯದಾಗಿ ಆಲೋಚಿ ಸಿದರೆ ಸಮಾಜ ಸುಂದರವಾಗಿ ಕಾಣಲಿದೆ, ಕೆಟ್ಟದ್ದಾಗಿ ಚಿಂತಿಸಿದರೆ ಬೇಧ ಭಾವ ಮೂಡಲಿದೆ, ಮೊದಲು ಮನ ಸ್ಸಿನ ಅಂತ ಕರಣ ಶುದ್ಧವಾಗಿರಬೇಕು, ಧರ್ಮದ ಆಚರಣೆ ಸೀಮಿತವಾಗಿದ್ದರೆ ಸಮಾಜದಲ್ಲಿ ದ್ವೇಷ ಅಸೂಯೆ ಇರಲಾರದು ಎಂದು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಸಲಹೆ ನೀಡಿದರು.

ಮಂಡ್ಯ ಮುಸ್ಲಿಂ ಒಕ್ಕೂಟದ ಸಹಯೋಗದಲ್ಲಿ ಮಂಡ್ಯನಗರದ ಕರ್ನಾಟಕ ಸಂಘದ ಕೆ ವಿ ಎಸ್ ಶತಮಾನೋತ್ಸವ ಭವನದಲ್ಲಿ ನಡೆದ ‘ಕೆಡಕು ಮುಕ್ತ ಸಮಾಜ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

ಧರ್ಮದ ಕಟ್ಟುಪಾಡು ಏನೇ ಇರಲಿ, ಧರ್ಮದ ಆಚರಣೆಯನ್ನು ಮನೆಯೊಳಗೆ ಆಚರಿಸಿ, ನಾಲ್ಕು ಗೋಡೆಯೊಳಗೆ ಸೀಮಿತಗೊಳಿಸಬೇಕು. ಸಮಾಜದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಇರಲಿ.
ಸಮಾಜದಲ್ಲಿ ಪ್ರತಿಯೊಬ್ಬರು ಪರಮಾತ್ಮನ ಮಕ್ಕಳು, ವಂಚನೆ ಇಲ್ಲದ, ಭೇದ ಭಾವ ಮನಸ್ಥಿತಿ ಇರದ ಋಷಿ, ಮುನಿ, ಸಾಧು, ಸಂತರು, ಸೂಫಿಗಳ ಭಾವನೆ ಜನರ ಮನಸ್ಸಿನಲ್ಲೂ ಇರಬೇಕೆಂದರು.

ಸಿಎಸ್ಐ ಸಾಡೇ ಸ್ಮಾರಕ ಚರ್ಚ್ ನ ಮುಖ್ಯಸ್ಥ ರೆವರೆಂಡ್ ಗ್ರೇಟ್ ಫುಲ್ ಜಯಶೇಖರ್ ಮಾತನಾಡಿ, ಮಾನವನ ಸ್ವಾರ್ಥದಿಂದ ಜಾತಿ ಧರ್ಮದ ಹೆಸರಿನಲ್ಲಿ ಕಚ್ಚಾಟ ನಡೆಯುತ್ತಿದೆ, ಜನರ ಮನಸ್ಸಿನಲ್ಲಿ ದ್ವೇಷ ಮೂಡಿರುವುದಕ್ಕೆ ಸಂಕುಚಿತ ಮನೋಭಾವ ಕಾರಣವಾಗಿದೆ. ಪ್ರಸ್ತುತ ಸಮಾಜಕ್ಕೆ ಪರಸ್ಪರ ಪ್ರೀತಿಯ ಅಗತ್ಯತೆ ಬೇಕಾಗಿದೆ. ಮತ್ಸರ ತೊರೆದು ಸಂಬಂಧಗಳ ನವೀಕರಣ ಆಗಬೇಕಾಗಿದೆ ಎಂದರು.

ಜಮಾತೆ ಇಸ್ಲಾಂ ಹಿಂದ್ ಕರ್ನಾಟಕ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಹಮ್ಮದ್, ಅಮೀದ್ ಉಲ್ ಹುಸೇನ್, ರೆಹಮತ್ ಉಲ್ಲಾ ಶರೀಫ್, ಮೀರ್ ಆರಿಫ್ ಉಪಸ್ಥಿತರಿದ್ದರು. ಜುಮಲ್ ತನ್ವೀರ್ ಸ್ವಾಗತಿಸಿದರು, ವಕೀಲ ನದೀಮ್ ವಂದಿಸಿದರು, ಫಾರೂಕ್ ಅಹಮದ್ ಕುರಾನ್ ಪಠಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ