Thursday, November 19, 2026

ಪ್ರಾಯೋಗಿಕ ಆವೃತ್ತಿ

ಸ್ಕ್ಯಾನಿಂಗ್ ಲೋಪ : ಮದ್ದೂರಿನ ಡಿ2 ಡಯಗ್ನೋಸ್ಟಿಕ್ ಸೆಂಟರ್ ಗೆ 15 ಲಕ್ಷ ರೂ.ದಂಡ

ಗರ್ಭೀಣಿ ಮಹಿಳೆಯೊಬ್ಬರ ಸ್ಕ್ಯಾನಿಂಗ್ ನಲ್ಲಿ ಭ್ರೂಣದ ಅಸಹಜ ಬೆಳವಣಿಗೆಯನ್ನು ಪತ್ತೆ ಹಚ್ಚದೇ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಮದ್ದೂರು ಪಟ್ಟಣದ ಡಿ2 ಡಯಗ್ನೋಸ್ಟಿಕ್ ಸೆಂಟರ್ ಗೆ 15 ಲಕ್ಷ ರೂ. ದಂಡ ವಿಧಿಸಿ ಮಂಡ್ಯ ಜಿಲ್ಲಾ ಗ್ರಾಹಕರ ವೇದಿಕೆ ಆದೇಶ ಹೊರಡಿಸಿದೆ.

ಕಳೆದ 3 ವರ್ಷಗಳ ಹಿಂದೆ ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ಗ್ರಾಮದ ಮಹೇಶ್ ಎಂಬುವವರ ಪತ್ನಿ ಸಿಂಧೂಶ್ರೀ( 25) ಎಂಬುವರು ಮದ್ದೂರಿನ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ ಡಿ2 ಡಯಗ್ನೋಸ್ಟಿಕ್ ಸೆಂಟರ್ ಗೆ ತನ್ನ 5ನೇ ತಿಂಗಳ ಗರ್ಭದ ಭ್ರೂಣದ ಬೆಳೆವಣಿಗೆಯನ್ನು ತಿಳಿದುಕೊಳ್ಳಲು ಸ್ಕ್ಯಾನಿಂಗ್ ಗೆ ಹೋಗಿದ್ದರು.

ಆಗ ಸ್ಕ್ಯಾನಿಂಗ್ ಮಾಡಿದ ಡಾ.ದೀಪಕ್ ಗೌತಮ್ ಎಂಬ ವೈದ್ಯರು, ಭ್ರೂಣವು ಸಹಜವಾಗಿಯೇ ಇದೆ ಎಂದು ವರದಿ ನೀಡಿದ್ದರು. ಆದರೆ ಸಿಂಧೂಶ್ರೀ ಅವರಿಗೆ ಜನಿಸಿದ ಹೆಣ್ಣು ಮಗು ಅಸಹಜತೆಯಿಂದ ಕೂಡಿತ್ತು. ಇದರಿಂದಾಗಿ ಮನನೊಂದ ಸಿಂಧೂಶ್ರೀ ಕುಟುಂಬದವರು ಸ್ಕ್ಯಾನಿಂಗ್ ಸೆಂಟರ್ ಹಾಗೂ ವೈದ್ಯರ ವಿರುದ್ಧ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.

ಇದನ್ನೂ ಓದಿರಿ : ಮದ್ದೂರು | ಪೋಷಕರ ನೆಮ್ಮದಿ ಕಿತ್ತು ಕೊಂಡ ದೋಷಪೂರಿತ ಸ್ಕ್ಯಾನಿಂಗ್ ವರದಿ

ಈ ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷರಾದ ಸಿ.ಎಂ.ಚಂಚಲ ಅವರು ಸ್ಕ್ಯಾನಿಂಗ್ ಸೆಂಟರ್ ರ ವೈದ್ಯರ ನಿರ್ಲಕ್ಷ್ಯ ಸಾಬೀತಾದ ಹಿನ್ನೆಲೆಯಲ್ಲಿ, ನೊಂದ ಗರ್ಭೀಣಿ ಮಹಿಳೆಗೆ 15 ಲಕ್ಷ ರೂ. ದಂಡ ಪಾವತಿಸುವಂತೆ ಆದೇಶಿಸಿದ್ದಾರೆ. ನೊಂದ ಗರ್ಭೀಣಿ ಮಹಿಳೆ ಪರವಾಗಿ ನ್ಯಾಯವಾದಿ ಮಂಡ್ಯದ ಆರ್.ಜಗನ್ನಾಥ್ ವಾದ ಮಂಡಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ