ರಾಜ್ಯ ರಾಜಕಾರಣದಲ್ಲಿ ಕಳೆದೆರಡು ದಿನಗಳಿಂದ ರೌಡಿಗಳ ಜೊತೆ ಬಿಜೆಪಿ ಗುರುತಿಸಿಕೊಂಡಿದ್ದ ಬಿಜೆಪಿ ಈಗ ಅಕ್ಷರಶಃ ರಾಷ್ಟ್ರಮಟ್ಟದಲ್ಲಿ ಮುಖಭಂಗ ಅನುಭವಿಸುವಂತಾಗಿದೆ.
ಒಂದೆಡೆ ಪೊಲೀಸರಿಗೂ ಸಿಗದ ಕ್ರಿಮಿನಲ್ ಹಿನ್ನೆಲೆಯುಳ್ಳ ಸೈಲೆಂಟ್ ಸುನೀಲ್ ರಕ್ತದಾನ ಶಿಬಿರವೊಂದರಲ್ಲಿ ಭಾಗವಹಿಸಿದ್ದ. ಇದೇ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವು ಮುಖಂಡರು ವೇದಿಕೆ ಹಂಚಿಕೊಂಡಿದ್ದನ್ನು ಕಾಂಗ್ರೆಸ್ ಪಕ್ಷವು ಉಗ್ರವಾಗಿ ಟೀಕಿಸಿ, ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದೆ.
ಸಿಸಿಬಿಯವರು ಹುಡುಕುತ್ತಿರುವ ರೌಡಿ ಶೀಟರ್ ಪೊಲೀಸರಿಗೆ ಸಿಗುವುದಿಲ್ಲ, ಆದರೆ ಬಿಜೆಪಿ ನಾಯಕರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಾರೆ.
ಅಂದರೆ ಬಿಜೆಪಿ ಕ್ರಿಮಿನಲ್ ಅಪರಾಧಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆ.
ಬಿಜೆಪಿ ಭ್ರಷ್ಟಾಚಾರ, ಕ್ರಿಮಿನಲ್ ಅಪರಾಧಗಳನ್ನು ತೊಳೆಯುವ ವಾಷಿಂಗ್ ಮಷಿನ್ ಆಗಿದೆ!
– @PriyankKharge pic.twitter.com/bMzpiHIuug— Karnataka Congress (@INCKarnataka) November 29, 2022
“>
ಸಿಸಿಬಿ ಮೋಸ್ಟ್ ವಾಂಟೆಡ್ ಸೈಲೆಂಟ್ ಸುನೀಲ್ ಜೊತೆಗೆ ಬಿಜೆಪಿ ಸಂಸದರು ಹಾಗೂ ಶಾಸಕರು ವೇದಿಕೆ ಹಂಚಿಕೊಂಡಿದ್ದು ಇದೀಗ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಲು ಪ್ರತಿಪಕ್ಷ ಕಾಂಗ್ರೆಸ್ ಗೆ ಒಂದು ಅಸ್ತ್ರ ಸಿಕ್ಕಂತಾಗಿದೆ. ಈ ನಿಟ್ಟಿನಲ್ಲಿ ಡ್ಯಾಮೇಜ್ ಕಂಟ್ರೋಲ್‌ಗೆ ಬಿಜೆಪಿ ಮುಖಂಡರು ಮುಂದಾಗಿದ್ದಾರೆ.
ಗಡಿಪಾರು ಆಗಿದ್ದ ವ್ಯಕ್ತಿಯನ್ನೇ ಪಕ್ಷದ ರಾಷ್ಟ್ರಾಧ್ಯಕ್ಷನನ್ನಾಗಿ ಮಾಡಿದ್ದ ಬಿಜೆಪಿಗೆ ಪುಡಿ ರೌಡಿಗಳೆಲ್ಲ ದೇವರುಗಳಂತೆ ಕಾಣುವುದು ಸಹಜ ವಿಚಾರವೇ ಎಂದು ಕಾಂಗ್ರೆಸ್ ಟೀಕೆ ಮಾಡಿದೆ.
ಬಿಜೆಪಿ ನಾಯಕರು ಕ್ರಿಮಿನಲ್ ಸಖ್ಯದ ಬಗ್ಗೆ ಕಿಡಿಕಾರಿರುವ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ, ಪೊಲೀಸರಿಗೂ ಸಿಗದ ಕ್ರಿಮಿನಲ್ ಗಳು ಬಿಜೆಪಿಯ ನಾಯಕರಿಗೆ ಸಿಗುತ್ತಾರೆ. ನೂರಾರು ಅಪರಾಧಗಳನ್ನು ಮಾಡಿ ಕೊನೆಗೆ ಬಿಜೆಪಿಯ ಶಾಲನ್ನು ಹಾಕಿಕೊಂಡರೇ ಸಾಕು, ಅವರ ಪಾಪವೆಲ್ಲ ಪರಿಹಾರವಾಗುತ್ತದೆ. ಈಗ ಪಾಪ ಪರಿಹಾರಕ್ಕೆ ವಾರಾಣಾಸಿಗೆ ಹೋಗಬೇಕಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.




