ಸೈಲೆಂಟ್ ಸುನೀಲ್ ಎಂಬ ರೌಡಿಯ ಸಖ್ಯ ಬೆಳೆಸಿದ ಬಿಜೆಪಿ ಪಕ್ಷವು ರಾಷ್ಟ್ರಮಟ್ಟದಲ್ಲಿ ಈಗ ಅವಮಾನ ಕ್ಕೀಡಾಗಿದೆ. ಇದರಿಂದ ಇತ್ತಿಚೇಗೆ ಬಿಜೆಪಿ ಸೇರಿರುವ ನಾಗಮಂಗಲದ ಮುಖಂಡ ಫೈಟರ್ ರವಿ ಅವರ ವಿರುದ್ಧವು ಇಂತಹದ್ದೆ ಕ್ರಿಮಿನಲ್ ಆರೋಪಗಳು ಕೇಳಿ ಬರುತ್ತಿದ್ದು, ಅವರ ಮುಂದಿನ ರಾಜಕೀಯ ಭವಿಷ್ಯದ ಕಥೆ ಏನು ಎಂಬ ಪ್ರಶ್ನೆಯೆದ್ದಿದೆ.
ರೌಡಿ ಸೈಲೆಂಟ್ ಸುನೀಲ್ ಜೊತೆ ವೇದಿಕೆ ಹಂಚಿಕೊಂಡಿದ್ದ ಬಿಜೆಪಿ ನಾಯಕರ ವಿರುದ್ಧ ಇಡೀ ಕಾಂಗ್ರೆಸ್ ಪಾಳೇಯವೇ ಮುಗಿ ಬಿದ್ದಿದೆ. ಬಿಜೆಪಿ ಪಕ್ಷದ ರೌಡಿಗಳ ಸಖ್ಯದ ಇಂಚಿಂಚು ದೌರ್ಬಲ್ಯಗಳನ್ನು ರಾಜ್ಯದ ಜನರ ಮುಂದಿಡುತ್ತಿದೆ. ಇದರಿಂದ ಮುಖಭಂಗಕ್ಕೀಡಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕ್ರಿಮಿನಲ್ ವ್ಯಕ್ತಿಗಳಿಗೆ ನಮ್ಮ ಪಕ್ಷದದಲ್ಲಿ ಜಾಗವಿಲ್ಲ ಎಂದು ತಿಳಿಸಿದ್ದಾರೆ.
ಅಲ್ಲದೇ ಇತ್ತೀಚೆಗೆ ಬಿಜೆಪಿ ಪಕ್ಷ ಸೇರಿರುವ ನಾಗಮಂಗಲ ವಿಧಾನಸಭಾ ಕ್ಷೇತ್ರದ ಮುಖಂಡ ಪೈಟರ್ ರವಿಯ ಕ್ರಿಮಿನಲ್ ಹಿನ್ನೆಲೆಯ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ, ಒಂದು ವೇಳೆ ಅವರ ಮೇಲೆ ಮೊಕದ್ದಮೆಗಳಿದ್ದರೆ ಅವರಿಗೆ ಪಕ್ಷದಲ್ಲಿ ಜಾಗವಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿಕೆ ನೀಡಿರುವುದು ಪೈಟರ್ ರವಿ ಭವಿಷ್ಯದ ಮೇಲೆ ಕರಿನೆರಳು ಬೀರುವ ಸಾಧ್ಯತೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನನ್ನ ಮೇಲೆ ಯಾವ ಮೊಕದ್ದಮೆಗಳು ಇಲ್ಲ
ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವ ಫೈಟರ್ ರವಿ ನನ್ನ ಮೇಲೆ ಯಾವುದೇ ಕೇಸ್ ಗಳಿಲ್ಲ, ಎಲ್ಲಾ ಕೇಸ್ ಗಳು ಕ್ವಾಷ್ ಆಗಿವೆ. ಇಷ್ಟು ದಿನ ನಾನು ಏಕಾಂಗಿಯಾಗಿದ್ದೆ. ಈಗ ಬಿಜೆಪಿ ಸೇರಿರುವುದರಿಂದ ಹೆಚ್ಚಿನ ಶಕ್ತಿ ಬಂದಿದೆ ಎಂದು ಹೇಳಿಕೊಂಡಿದ್ದರು. ಆದರೆ ಬಿಜೆಪಿಯೂ ಫೈಟರ್ ರವಿ ಹಿನ್ನೆಲೆಯನ್ನು ಕಲೆ ಹಾಕುತ್ತಿದ್ದು, ಮುಂದೇ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಿದೆ.




