Thursday, November 19, 2026

ಪ್ರಾಯೋಗಿಕ ಆವೃತ್ತಿ

ಶಾಲಾ ವಾಹನ ಚಾಲಕನಿಂದ ಅತ್ಯಾಚಾರ

ಕೆಲವು ದಿನಗಳ ಅಂತರದಲ್ಲಿ ಬೆಂಗಳೂರಿನಲ್ಲಿ ಎರಡನೇ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ನ.29ರಂದು ಡ್ರಾಪ್ ಕೊಡುವ ನೆಪದಲ್ಲಿ ಮಹಿಳೆಯನ್ನು ಶಾಲಾ ವಾಹನಕ್ಕೆ ಹತ್ತಿಸಿಕೊಂಡ ಚಾಲಕ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಸಂತ್ರಸ್ತೆಯ ದೂರಿನ ಮೇರೆಗೆ ಚಂದ್ರಲೇಔಟ್ ಠಾಣಾ ಪೊಲೀಸರು ಆರೋಪಿ ಶಿವಕುಮಾರ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

“ಕೆಲಸ ಮುಗಿಸಿ ನಾಯಂಡಹಳ್ಳಿ ವೃತ್ತದ ಬಳಿ ಮಹಿಳೆ ಬಸ್‌ಗೆ ಕಾಯುತ್ತಿದ್ದರು. ಆ ವೇಳೆಯಲ್ಲಿ ಶಾಲಾ ಮಕ್ಕಳನ್ನು ಮನೆಗೆ ಬಿಟ್ಟು ವಾಪಸ್ ಬರುತ್ತಿದ್ದ ಬಸ್‌ಗೆ ಮಹಿಳೆ ಕೈ ಅಡ್ಡ ಹಾಕಿದ್ದಾರೆ. ಈ ವೇಳೆ ಚಾಲಕ ಬಸ್ ನಿಲ್ಲಿಸಿದಾಗ ಮಹಿಳೆ ಪ್ರಯಾಣಿಕರು ಯಾರೂ ಇಲ್ಲ ನಾನು ಬರಲ್ಲ ಎಂದಿದ್ದಾಳೆ. ಆಗ ಚಾಲಕ ಮುಂದಿನ ನಿಲ್ದಾಣದಲ್ಲಿ ಪ್ಯಾಸೆಂಜರ್ ಹತ್ತುತ್ತಾರೆ ಎಂದಿದ್ದಾನೆ. ಚಾಲಕನ ಮಾತನ್ನು ನಂಬಿ ಮಹಿಳೆ ಬಸ್‌ ಹತ್ತಿದ್ದಾರೆ. ಆಗ ಚಾಲಕ ಬಸ್ಸನ್ನು ಬೇರೆ ಮಾರ್ಗದಲ್ಲಿ ಚಲಾಯಿಸಿ ಈ ಕೃತ್ಯ ಎಸಗಿದ್ದಾನೆ” ಎಂದು ಪೊಲೀಸ್ ರು ತಿಳಿಸಿದ್ದಾರೆ.

‘ಅನುಮಾನಗೊಂಡ ಮಹಿಳೆ ತನ್ನ ಮಗನಿಗೆ ಕಾಲ್ ಮಾಡಿದ್ದು ಶಾಲಾ ಬಸ್‌ ಫೋಟೋ ಕೂಡ ಕಳಿಸಿದ್ದಾರೆ. ಆದರೆ, ಆಕೆಯ ಮಗ ಬರುವ ವೇಳೆಗಾಗಲೀ, ನಾಗಭೂವಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಆರೋಪಿ ಮಹಿಳೆ ಮೇಲೆ ಆತ್ಯಾಚಾರ ಎಸಗಿದ್ದಾನೆ’ ಎಂದು ತಿಳಿದು ಬಂದಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ