ಕ್ಷತ್ರಿಯ ಮರಾಠ ಸಮುದಾಯವನ್ನು 2(ಎ) ಗೆ ಸೇರ್ಪಡೆಗೊಳಿಸಬೇಕೆಂದು ಆಗ್ರಹಿಸಿ ಮಂಡ್ಯ ಜಿಲ್ಲಾಧಿಕಾರಿ ಹೆಚ್.ಎನ್.ಗೋಪಾಲಕೃಷ್ಣ ಅವರಿಗ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ವತಿಯಿಂದ ಮನವಿ ಸಲ್ಲಿಸಲಾಯಿತು.
ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸಿ ₹ 100 ಕೋಟಿ ನೀಡಿರುವುದು ಸ್ವಾಗತಾರ್ಹ, ಕರ್ನಾಟಕ ರಾಜ್ಯದಲ್ಲಿ ಸುಮಾರು 40 ಲಕ್ಷ ಮರಾಠ ಜನಾಂಗವು ಇದ್ದು, ಇವರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಹಿಂದುಳಿದಿದೆ, ಈ ಸಮುದಾಯದಲ್ಲಿ ಸುಮಾರು 33 ಪಂಗಡಗಳಿದ್ದು, ಇದರ ಪೈಕಿ 27 ಪಂಗಡಗಳನ್ನು ಈಗಾಗಲೇ ಪ್ರವರ್ಗ 2(ಎ)ಗೆ ಸೇರ್ಪಡಿಸಲಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದರು.
27 ಪಂಗಡವನ್ನು 2ಎ ಗೆ ಸೇರಿಸುವ ಸಂದರ್ಭದಲ್ಲಿ ಕ್ಷತ್ರಿಯ ಮರಾಠ ಸಮಾಜವನ್ನು ಸೇರಿಸದೇ ಇರುವುದು ಬಹಳ ಶೋಚನೀಯದ ವಿಷಯ. ಆಗಿಂದ್ದಾಗೆ ಬದಲಾದ ಸರ್ಕಾರಗಳಿಂದ ನಿರ್ಧಾರವು ವಿಳಂಬವಾಗಿದೆ. ಈಗಲಾದರೂ ಕೃತಿಯ ಮರಾಠ ಜನಾಂಗದ ಜ್ವಲಂತ ಸಮಸ್ಯೆಗಳನ್ನು ಅರಿತು ತಮ್ಮ ಅವಾಗಹನೆಗೆ ತೆಗೆದುಕೊಂಡು ಜನಾಂಗದ ಜ್ವಲಂತ ಸಮಸ್ಯೆಯನ್ನು ಬಗೆಹರಿಸಬೇಕು. ಅಲ್ಲದೇ0 ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕ ಹಾಗೂ ರಾಜಕೀಯವಾಗಿ ಅಭಿವೃದ್ಧಿ ಹೊಂದಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಪರಿಷತ್ ಅಧ್ಯಕ್ಷ ಸುರೇಶ್ ರಾವ್ ಸಲಗಕರ್, ಅಂಬಾಜಿ ರಾವ್, ರಾಜೇಶ್, ಭಕ್ತ ವತ್ಸಲ, ಹನುಮಂತರಾವ್ ಮತ್ತಿತರರು ಉಪಸ್ಥಿತರಿದ್ದರು.




