Friday, November 20, 2026

ಪ್ರಾಯೋಗಿಕ ಆವೃತ್ತಿ

ಸಿರಿಧಾನ್ಯ ಉತ್ಪನ್ನ ಮಾರಾಟಗಾರರು-ಖರೀದಿದಾರರ ಸಮ್ಮೇಳನ : ಕಾರ್ಯಾಗಾರ

ಮಂಡ್ಯ ಜಿಲ್ಲಾಡಳಿತ, ಜಿ.ಪಂ., ನಬಾರ್ಡ್, ಕೃಷಿ ಇಲಾಖೆ ಹಾಗೂ ವಿಕಸನ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಮಂಡ್ಯನಗರ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಡಿ.14ಮತ್ತು 15ರಂದು ಖರೀದಿದಾರರು- ಮಾರಾಟಗಾರರ ಸಮ್ಮೇಳನ ಮತ್ತು ಸಿರಿಧಾನ್ಯ ಸಂಸ್ಕರಣೆ, ಮೌಲ್ಯ ಸರಪಳಿ ಕುರಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋ‍ಷ್ಠಿಯಲ್ಲಿ ಮಾತನಾಡಿದ ಅವರು, ಈ ಮೇಳದಲ್ಲಿ ಆಹಾರ ಮೇಳ ಹಾಗೂ ಸಿರಿಧಾನ್ಯ ಸಂಸ್ಕರಣೆ, ಮೌಲ್ಯವರ್ಧನೆ ಕುರಿತು ಕಾರ್ಯಾಗಾರ ಹಾಗೂ ವಿವಿಧ ಉತ್ಪನ್ನಗಳ ಮೇಳದಲ್ಲಿ ಪ್ರದರ್ಶನ ಮತ್ತು ಮಾರಾಟವಿರುತ್ತದೆ ಎಂದು ಹೇಳಿದರು.

ಪ್ರಮುಖವಾಗಿ ರಾಗಿ-ಸಿರಿಧಾನ್ಯಗಳು ಅವುಗಳ ಉಪ ಉತ್ಪನ್ನಗಳು, ದೇಸಿ, ಅಕ್ಕಿ, ಬೆಲ್ಲ- ಬೆಲ್ಲದ ಇತರೆ ಉತ್ಪನ್ನಗಳು, ತರಕಾರಿಗಳು, ಹಣ್ಣುಗಳು, ಅಡುಗೆ ಎಣ್ಣೆ, ಎಣ್ಣೆ ಕಾಳುಗಳು, ಹಪ್ಪಳ, ಉಪ್ಪಿನಕಾಯಿ, ಗಾರ್ಮೆಂಟ್ಸ್ ಉಡುಗೆಗಳು ಹೀಗೆ ವಿವಿಧ ವೈವಿಧ್ಯೆ  ಉತ್ಪನ್ನಗಳ ಪ್ರದರ್ಶನ ಮಾರಾಟ ಇರುತ್ತದೆ. ಪ್ರತಿದಿನ 500ಕ್ಕೂ ಹೆಚ್ಚು ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.

ವಿವಿಧ ಇಲಾಖೆಗಳು, ನಬಾರ್ಡ್, ಸಂಪನ್ಮೂಲ ಸಂಸ್ಥೆಗಳ ಸಹಯೋಗದಲ್ಲಿ ಮಂಡ್ಯ ಜಿಲ್ಲೆಯಲ್ಲಿ 25ಕ್ಕೂ ಹೆಚ್ಚು ರೈತ ಉತ್ಪಾದಕ ಕಂಪನಿಗಳನ್ನು ರಚಿಸಲಾಗಿದೆ. ಈ ಎರಡೂ ದಿನಗಳ ಸಮ್ಮೇಳನದಲ್ಲಿ ಮಂಡ್ಯ ಹಾಗೂ ಅಕ್ಕಪಕ್ಕದ ಜಿಲ್ಲೆಗಳಿಂದ ಸುಮಾರು 50ಕ್ಕೂ ಹೆಚ್ಚು ರೈತ ಉತ್ಪಾದಕರ ಕಂಪನಿಯ ಪ್ರತಿನಿಧಿಗಳು ಭಾಗವಹಿಸುವರು ಎಂದು ಹೇಳಿದರು.

ಸ್ವ ಸಹಾಯ ಸಂಘ-ಆಹಾರ ಸಂಸ್ಕರಣೆದಾರರು ಪ್ರಗತಿಪರ ರೈತ ಉತ್ಪಾದಕರ ಕಂಪನಿಗಳು-ಸ್ವಸಹಾಯ ಸಂಘ ಮೌಲ್ಯವರ್ಧನೆಯಲ್ಲಿ ತೊಡಗಿರುವವರಿಗೆ ಕಲ್ಪಿಸುವುದು, ಉತ್ಪಾದಕರು-ಖರೀದಿದಾರರ ಹಾಗೂ ಈ ಸಮ್ಮೇಳನದ ಮೂಲಕ ಮಾರುಕಟ್ಟೆ, ಸಂಪರ್ಕ ನಡುವೆ ಸಮನ್ವಯತೆ ಸಾಧಿಸುವುದು ಮತ್ತು ಉತ್ಪಾದಕರಲ್ಲಿ ಆತ್ಮವಿಶ್ವಾಸ ತುಂಬುವುದು ಈ ಸಮ್ಮೇಳನದ ಉದ್ದೇಶವಾಗಿದೆ ಎಂದರು.

ಗೋಷ್ಠಿಯಲ್ಲಿ ಕೃಷಿ ಇಲಾಖೆ ಉಪನಿರ್ದೇಶಕರಾದ ಸೌಮ್ಯಶ್ರೀ, ಮಮತಾ, ತೋಟಗಾರಿಕೆ ಉಪ ನಿರ್ದೇಶಕ ಮಂಜುನಾಥ್, ನಬಾರ್ಡ್ ಉಪ ನಿರ್ದೇಶಕಿ ಹರ್ಷಿತಾ ಮತ್ತಿತರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ