Wednesday, May 15, 2024

ಪ್ರಾಯೋಗಿಕ ಆವೃತ್ತಿ

”ಕಾಲೇಜ್ ಸ್ಟೂಡೆಂಟ್” ವೇಷದಲ್ಲಿ ರ್‍ಯಾಗಿಂಗ್ ಭೇದಿಸಿದ ”ಲೇಡಿ ಕಾನ್ಸ್ ಟೇಬಲ್”

”ಕಾಲೇಜು ಸ್ಟೂಡೆಂಟ್” ವೇಷದಲ್ಲಿ ಬರೋಬ್ಬರಿ 3 ತಿಂಗಳು ಕಾಲೇಜಿಗೆ ಹೋಗಿ ಕ್ಯಾಂಪಸ್​ನಲ್ಲಿ ನಡೆಯುತ್ತಿದ್ದ ರ‍್ಯಾಗಿಂಗ್ ​ ಪ್ರಕರಣವನ್ನು ಸಿನಿಮೀಯ ರೀತಿಯಲ್ಲಿ ಭೇದಿಸುವಲ್ಲಿ ”ಲೇಡಿ ಕಾನ್ಸ್​ಟೇಬಲ್”​ ಯಶಸ್ವಿಯಾಗಿದ್ದಾರೆ.

ಮಧ್ಯಪ್ರದೇಶದ ಭೋಪಲ್ ನ  24 ವರ್ಷದ ಮಹಿಳಾ ಪೊಲೀಸ್‌ ಕಾನ್ಸ್‌ ಸ್ಟೇಬಲ್‌ ಶಾಲಿನಿ ಚೌಹಾಣ್ ಈ ಸಾಹಸ ಮಾಡಿ ಯಶಸ್ವಿಯಾಗಿದ್ದಾರೆ.

ಘಟನೆಯ ವಿವರ 

ಮಧ್ಯಪ್ರದೇಶದ ಇಂದೋರ್​ ನಗರದಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕ ಮೆಡಿಕಲ್ ಕಾಲೇಜಿನಲ್ಲಿ ನಡೆಯುತ್ತಿದ್ದ ರ‍್ಯಾಂಗಿಂಗ್​ ಮಟ್ಟ ಹಾಕಲು ಪೊಲೀಸ್‌ ಕಾನ್ಸ್‌ ಸ್ಟೇಬಲ್‌ ಶಾಲಿನಿ ಚೌಹಾಣ್ ಎಂಬುವರು ಮೂರು ತಿಂಗಳು ಯಾರಿಗೂ ಒಂದು ಸಣ್ಣ ಅನುಮಾನ ಬರದಂತೆ ವಿದ್ಯಾರ್ಥಿಯಾಗಿ ನಟಿಸಿದರು.

ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡುತ್ತಿದ್ದ 11 ಹಿರಿಯ ವಿದ್ಯಾರ್ಥಿಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ಜೂನಿಯರ್ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡುತ್ತಿದ್ದ ಹಿರಿಯ ವಿದ್ಯಾರ್ಥಿಗಳನ್ನು ಕಾಲೇಜು ಹಾಗೂ ಹಾಸ್ಟೆಲ್​ನಿಂದ ಮೂರು ತಿಂಗಳು ಕಾಲ ಅಮಾನತು ಮಾಡಲಾಗಿದೆ.

ತಲೆದಿಂಬುಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯ 

ಈ ಕಾಲೇಜಿನಲ್ಲಿ ರ‍್ಯಾಗಿಂಗ್ ನಡೆಯುತ್ತಿರುವ ಬಗ್ಗೆ ತಮಗೆ ಅನಾಮಧೇಯ ದೂರುಗಳು ಬರುತ್ತಿದ್ದವು. ಅಶ್ಲೀಲ ಕೃತ್ಯಗಳು ಎಸಗುವಂತೆ ತಮ್ಮನ್ನು ಒತ್ತಾಯಪಡಿಸಲಾಗುತ್ತದೆ. ತಲೆದಿಂಬುಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ರೀತಿಯಲ್ಲಿ ನಟಿಸುವಂತೆ ಬಲವಂತ ಮಾಡಲಾಗುತ್ತಿದೆ ಎಂಬ ದೂರುಗಳು ಬರುತ್ತಿದ್ದವು ಎಂದು ಅಲ್ಲಿನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇಂತಹ ಘಟನೆಗಳನ್ನು ಗುಪ್ತವಾಗಿ ಪತ್ತೆ ಹಚ್ಚಲು ಯೋಜನೆ ರೂಪಿಸಿದ ಪೊಲೀಸ್ ಅಧಿಕಾರಿಗಳು, ಕ್ಯಾಂಪಸ್​ಗೆ ತೆರಳಿ ವಿಚಾರಣೆ ಮಾಡಿದ್ದರು. ಆದರೂ ಸಹ ವಿದ್ಯಾರ್ಥಿಗಳು ಹೆದರಿಕೊಂಡು ದೂರು ನೀಡಲು ಮುಂದೆ ಬಂದಿರಲಿಲ್ಲ. ಕೊನೆಗೆ ಪೊಲೀಸ್ ಕಾನ್ಸ್​ಟೇಬಲ್ ಶಾಲಿನಿ ಅವರನ್ನು ವಿದ್ಯಾರ್ಥಿಯಂತೆ ಪ್ರತಿದಿನ ಕಾಲೇಜಿಗೆ ಕಳುಹಿಸುವ ಪ್ಲಾನ್ ರೂಪಿಸಲಾಯಿತು.

ಶಾಲಿನಿ ಅವರಿಗೆ ಪ್ರತಿನಿತ್ಯ ವಿದ್ಯಾರ್ಥಿಯ ಸೋಗಿನಲ್ಲಿ ಕಾಲೇಜಿಗೆ ಹೋಗುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು. ಅದರಂತೆ ಶಾಲಿನಿ ಪ್ರತಿನಿತ್ಯ ವಿದ್ಯಾರ್ಥಿಯಂತೆ ಯೂನಿಫಾರ್ಮ್ ತೊಟ್ಟು ಕಾಲೇಜಿಗೆ ಹೋಗುತ್ತಿದ್ದರು. ಎಲ್ಲರಂತೆ ಡ್ರೆಸ್-ಬ್ಯಾಗ್ ಹಾಕಿಹೊಂಡು ಕಾಲೇಜಿಗೆ ಹೋಗಿ ಪಾಠ ಕೇಳುವುದು. ಸ್ನೇಹಿತೆಯರೊಂದಿಗೆ ಕೂತು ಮಾತಾಡುವುದು, ಕ್ಲಾಸ್​ಗೆ ಬಂಕ್‌ ಹೊಡೆದು ಕ್ಯಾಂಟೀನ್‌ ನಲ್ಲಿ ಕಾಲ ಕಳೆಯುವುದು. ಹೀಗೆ ವಿದ್ಯಾರ್ಥಿಗಳು ಏನೆಲ್ಲ ಮಾಡುತ್ತಿದ್ದರೂ ಅದನ್ನೇ ಶಾಲಿನಿ ಮಾಡುತ್ತಿದ್ದರು. ಆದರೆ ಒಂದು ಸಣ್ಣ ಅನುಮಾನ ಬರದಂತೆ ಆ್ಯಕ್ಟಿಂಗ್ ಮಾಡುತ್ತಿದ್ದರು. ಕೊನೆಗೆ ರ್‍ಯಾಗಿಂಗ್ ಬಗ್ಗೆ ಒಂದೊಂದೆ ವಿಚಾರಗಳನ್ನು ಕಲೆ ಹಾಕಿದರು ಆಗ ಅಲ್ಲಿ 11 ಹಿರಿಯ ವಿದ್ಯಾರ್ಥಿಗಳು ರ್‍ಯಾಗಿಂಗ್ ನಲ್ಲಿ ತೊಡಗಿರುವುದು ತಿಳಿದು ಬಂತು.

ಹಲವು ಬಾರಿ ಪೊಲೀಸರಿಗೆ ದೂರು ಬಂದಿದ್ದವು

ಕಾನ್ಸ್ ಟೇಬಲ್ ಶಾಲಿನಿ ಅವರ ಮೇಲಾಧಿಕಾರಿ ಇನ್ಸ್ ಪೆಕ್ಟರ್ ತೆಹಜೀಬ್ ಕಾಜಿ ಮಾಧ್ಯಮಗಳೊಂದಿಗೆ ಮಾತನಾಡಿ, ಇಂದೋರ್‌ನ ಮಹಾತ್ಮ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ ಕಳೆದ ಕೆಲ ತಿಂಗಳಿನಿಂದ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡುತ್ತಿದ್ದರು. ಹಲವು ಬಾರಿ ಈ ಬಗ್ಗೆ ಪೊಲೀಸರಿಗೆ ಈ ಬಗ್ಗೆ ದೂರುಗಳು ಬಂದಿದ್ದವು.

ಮೊದಲ ವರ್ಷದ ವಿದ್ಯಾರ್ಥಿಗಳನ್ನು ಅಸಭ್ಯವಾಗಿ ವರ್ತಿಸುವಂತೆ ಹಾಗೂ ತಲೆದಿಂಬಿನ ಜೊತೆ ಲೈಂಗಿಕವಾಗಿ ವರ್ತಿಸುವಂತೆ ರ್‍ಯಾಗಿಂಗ್ ನೀಡಲಾಗುತ್ತಿತ್ತು. ಆದರೆ ವಿದ್ಯಾರ್ಥಿಗಳು ನಮ್ಮ ಮುಂದೆ ಬಂದು ಮಾತಾನಾಡಲು ಹಿಂಜರಿಯುತ್ತಿದ್ದರು. ನಮ್ಮನ್ನು ಪೊಲೀಸ್‌ ಬಟ್ಟೆಯಲ್ಲಿ ನೋಡಿದಾಗ ವಿದ್ಯಾರ್ಥಿಗಳು ಹೆದರಿ ಯಾವುದೇ ಮಾಹಿತಿ ನೀಡುತ್ತಿರಲಿಲ್ಲ,  ಹೀಗಾಗಿ ನಾವು ಈ ರೀತಿ ಪೊಲೀಸ್‌ ಕಾರ್ಯಾಚರಣೆಗೆ ಇಳಿಯಲು ಯೋಜನೆ ಮಾಡಿದೆವು ಎಂದು ವಿವರಿಸಿದರು.

ಸಂಶಯ ಬಂದಾಗ ಮಾತು ಬದಲಿಸುತ್ತಿದ್ದ ಕಾನ್ಸ್ ಟೇಬಲ್ ಶಾಲಿನಿ

ಮಾರುವೇ‍ಷದ ಕಾರ್ಯಾಚರಣೆ ಬಗ್ಗೆ ಅನುಭವವನ್ನು ಹಂಚಿಕೊಂಡ ಶಾಲಿನಿ,  ನನ್ನ ಬಳಿ ಬ್ಯಾಗ್‌, ಯೂನಿಫಾರಂ, ಪುಸ್ತಕಗಳಿದ್ದವು. ಅಲ್ಲದೇ ವಿದ್ಯಾರ್ಥಿಗಳಂತೆ ಕಾಣುತ್ತಿದ್ದೆ. ನಾನು ಪ್ರತಿದಿನ ಕಾಲೇಜಿಗೆ ಹೋಗಬೇಕಿತ್ತು. ಮುಕ್ತವಾಗಿ ನನ್ನ ಬಗ್ಗೆ ಮಾತಾನಾಡುತ್ತಾ, ರ‍್ಯಾಗಿಂಗ್ ಘಟನೆಗಳನ್ನು ಕೇಳುತ್ತಾ ಹೋದೆ. ನನ್ನ ಬಗ್ಗೆ ಸಂಶಯದ ಪ್ರಶ್ನೆ ಕೇಳುವಾಗ ನಾನು ಮಾತು ಬದಲಾಯಿಸುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!