Friday, November 20, 2026

ಪ್ರಾಯೋಗಿಕ ಆವೃತ್ತಿ

ಜಾತ್ಯಾತೀತ ನಾಯಕ ಅಟಲ್‌ ಬಿಹಾರಿ ವಾಜಪೇಯಿ : ಅಶೋಕ್ ಜಯರಾಂ

ವಿಶ್ವ ಕಂಡ ಜಾತ್ಯಾತೀತ ನಾಯಕ ಅಟಲ್‌ ಬಿಹಾರಿ ವಾಜಪೇಯಿ ಅವರು ಆದರ್ಶ ವ್ಯಕ್ತಿತ್ವದವರಾಗಿದ್ದರು, ಭಾರತದ ಅಭಿವೃದ್ಧಿಯ ಕನಸುಗಾರರಾಗಿ, ವೈಜ್ಞಾನಿಕ, ವಿಜ್ಞಾನ ಅಭಿವೃದ್ದಿಗೆ ಹೆಚ್ಚು ಮಹತ್ವ ನೀಡಿದ್ದರು ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಅಶೋಕ್ ಜಯರಾಂ ಹೇಳಿದರು.

ಮಂಡ್ಯ ನಗರದ ಸ್ವರ್ಣಸಂದ್ರ ಬಡಾವಣೆಯ ಡಾ.ಶ್ರೀಶಿವಕುಮಾರ ಮಹಾಸ್ವಾಮೀಜಿ ಉದ್ಯಾನವನದಲ್ಲಿ ಎಸ್. ಡಿ.ಜಯರಾಮ್ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ನಡೆದ ಮಂಡ್ಯ ಸ್ವಚ್ಛ ಸಾರ್ವಜನಿಕ ಉದ್ಯಾನವನ 8ನೇ ಅಭಿಯಾನದಲ್ಲಿ ಶ್ರಮದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶದ ಅಜಾತಶತ್ರು, ಭಾರತರತ್ನ ಮಾಜಿ ಪ್ರಧಾನಮಂತ್ರಿ ಅಟೆಲ್‌ಬಿಹಾರಿ ವಾಜಪೇಯಿ ಅವರ ಜನ್ಮದಿನ ಇಂದು, ಅವರ ಸ್ಮರಣಾರ್ಥ ಸಾರ್ವಜನಿಕ ಉದ್ಯಾನವನದಲ್ಲಿ 8ನೇ ಶ್ರಮದಾನ ಮಾಡಲುವ ಮೂಲಕ ಪ್ಲಾಸ್ಟಿಕ್, ತಂಬಾಕು, ಮಧ್ಯಪಾನ ಮುಕ್ತ ಉದ್ಯಾನವನ ಮಾಡಲು ಶ್ರಮಿಸಲಾಗುತ್ತಿದೆ ಎಂದರು.

ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸಾರ್ವಜನಿಕ ಉದ್ಯಾನವನಗಳು ಜನೋಪಯೋಗಿಯಾಗಬೇಕಿದೆ. ಸ್ವಚ್ಛತೆಯಿಂದ ಕೂಡಿರಲು ಸ್ಥಳೀಯ ನಾಗರಿಕರು, ಯುವ ಸಮುದಾಯ, ವಾಯು ವಿಹಾರಿಗಳು ಜಾಗೃತಿ ವಹಿಸಬೇಕಿದೆ, ಎಲ್ಲಾ ಉದ್ಯಾನವನಗಳನ್ನು ಪ್ಲಾಸ್ಟಿಕ್, ತಂಬಾಕು, ಮದ್ಯಪಾನ ಮುಕ್ತ ಉದ್ಯಾನವನ ವಲಯ ಎಂದು ಘೋಷಿಸಲು ನಗರಸಭೆಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಉದ್ಯಾನವನದ ಒಳಗೆ ಹಾಗೂ ಹೊರಗಿನ ರಸ್ತೆ ಬದಿಯಲ್ಲಿ ಸ್ವಚ್ಚತಾ ಕಾರ್ಯ ನಡೆಸಿದ ಕಾರ್ಯಕರ್ತರು, ನರ್ಸಿಂಗ್ ವಿದ್ಯಾರ್ಥಿಗಳು, ನಾಗರೀಕರು, ಪ್ಲಾಸ್ಟಿಕ್ ಮುಕ್ತ ಪ್ರದೇಶದ ಬಗ್ಗೆ ಜನಜಾಗೃತಿ ಮೂಡಿಸಿದರು. ಬಳಿಕ ಪರಮಪೂಜ್ಯ ಸಿದ್ದಗಂಗಾಶ್ರೀಗಳ ಭಾವಚಿತ್ರವಿರುವ ಪ್ಯಾಕೆಟ್ ಕ್ಯಾಲೆಂಡರ್ ಬಿಡುಗಡೆ ಮಾಡಿ ನಾಗರೀಕರಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸಿದ್ದಗಂಗಾಶ್ರೀ ಸೇವಾ ಸಮಿತಿ ಅಧ್ಯಕ್ಷ ಎಂ.ಆರ್.ಮಂಜುನಾಥ್, ಕಾಯಕಯೋಗಿ ಫೌಂಡೇಶನ್ ಅಧ್ಯಕ್ಷ ಎಂ.ಶಿವಕುಮಾರ್, ಬಿಜೆಪಿ ಮುಖಂಡ ಹನುಮಂತು, ಮಂಜು, ಕೆಂಪಯ್ಯ, ಅನಿಲ್, ರವಿ, ಮಧು ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ