ರಾಷ್ಟ್ರಕವಿ ಕುವೆಂಪು ಅವರ ಹುಟ್ಟುಹಬ್ಬದ ಅಂಗವಾಗಿ ಡಿ.28ರಂದು ಸಂಜೆ 6.30ಗಂಟೆಗೆ ನೆಲದನಿ ಬಳಗದ ವತಿಯಿಂದ ಮಂಡ್ಯನಗರದ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ರಂಗ ಹೃದಯ ಹಾಸನ ಪ್ರಸ್ತುತಪಡಿಸುವ ನೈಜ ಘಟನೆ ಆಧರಿಸಿದ ಏಕವ್ಯಕ್ತಿ ಅಭಿನಯದ “ತಾಯಿಯಾಗುವುದೆಂದರೆ” ನಾಟಕ ಪ್ರದರ್ಶನ ನಡೆಯಲಿದೆ.
ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ ನಾಟಕದಲ್ಲಿ ಪೂಜಾ ರಘುನಂದನ್ ಅಭಿನಯಿಸಲಿದ್ದಾರೆ. ಈ ನಾಟಕವು ”ತಾಯ್ತತನ ಮತ್ತು ಕರಳು ಬಳ್ಳಿಗಳ ಭಾವನೆ”ಗಳನ್ನು ಒಳಗೊಂಡ ಅದ್ಭುತ ರಂಗ ಪ್ರಯೋಗವಾಗಿದೆ. ಪ್ರವೇಶ ಉಚಿತವಾಗಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ವೀಕ್ಷಣೆ ಮಾಡುವಂತೆ ನೆಲದನಿ ಬಳಗದ ಎಂ.ಸಿ.ಲಂಕೇಶ್ ಮಂಗಲ ಮನವಿ ಮಾಡಿದ್ದಾರೆ.




