Saturday, November 21, 2026

ಪ್ರಾಯೋಗಿಕ ಆವೃತ್ತಿ

ರೈತ ಸಭಾಂಗಣ ನವೀಕರಣಕ್ಕೆ ರೈತ ಹಿತರಕ್ಷಣಾ ಸಮಿತಿ ಮನವಿ

ಮಂಡ್ಯ ಜಿಲ್ಲೆಯ ಐತಿಹಾಸಿಕ ಕೇಂದ್ರವಾದ ಮಂಡ್ಯನಗರದ ರೈತ ಸಭಾಂಗಣವನ್ನು ಆಧುನಿಕವಾಗಿ ನವೀಕರಣಗೊಳಿಸಿ, ಅದರ ಸೌಂದರ್ಯವನ್ನು ಹಾಗೇಯೇ ಉಳಿಸಿಕೊಳ್ಳಬೇಕೆಂದು ಮಂಡ್ಯ ಜಿಲ್ಲೆ ರೈತ ಹಿತರಕ್ಷಣಾ ಸಮಿತಿಯು ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಉಮ್ಮಡಹಳ್ಳಿ ಶೇಖರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದೆ.

ಮಂಡ್ಯ ನಗರದಲ್ಲಿ 60-70 ರ ದಶಕದಲ್ಲಿ ಮಂಡ್ಯ ಜಿಲ್ಲೆಯ ಗೌರವಾನ್ವಿತ ಸಹಕಾರಿ ಧುರೀಣರಿಂದ ಸ್ಥಾಪಿತವಾದ ರಾಜ್ಯದ ಹೆಸರಾಂತ ಐತಿಹಾಸಿಕ ರೈತ ಸಭಾಂಗಣ ಇಂದು ತುಂಬಾ ಶೋಚನೀಯ ಸ್ಥಿತಿಯಲ್ಲಿ ಹಾಳಾಗಿದೆ.

ಜಿಲ್ಲೆಯ ಪಾರಂಪರಿಕ ಹೆಸರಿಗೆ ಸೇರಿರುವ ಸಭಾಂಗಣದ ಈ ಸ್ಥಿತಿ ಮಂಡ್ಯ ಜಿಲ್ಲೆಗೆ, ರೈತರಿಗೆ, ಆರ್.ಎ.ಪಿ.ಸಿ.ಎಂ.ಎಸ್. ಸಂಸ್ಥೆಗೆ ತುಂಬಾ ಅಗೌರವ ತರುವಂತ ವಿಷಯವಾಗಿದೆ, ಇಲ್ಲಿಗೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಹೆಸರಾಂತ ಗಣ್ಯರು ಭೇಟಿ ನೀಡಿ ಸಭಾಂಗಣದ ವಿನ್ಯಾಸ, ಸೌಂದರ್ಯವನ್ನು ಪ್ರಶಂಸಿದ್ದಾರೆ. ಆದ್ದರಿಂದ ಇದರ ಮೂಲ ಸೌಂದರ್ಯವನ್ನು ಸಂರಕ್ಷಿಸಬೇಕೆಂದರು.

ಮಂಡ್ಯ ಜಿಲ್ಲೆಯ ಗೌರವದ ಸಂಕೇತವಾಗಿರುವ ಸಭಾಂಗಣವನ್ನು ಮನಶೇತನಗೊಳಿಸಿ ಉಳಿಸುವುದು ಸಂಘದ ಆಡಳಿತ ಮಂಡಳಿಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಕೋರಿದರು.

ಈ  ಸಂದರ್ಭದಲ್ಲಿ ರ್‍ಯತ ನಾಯಕಿ ಸುನಂದಾ ಜಯರಾಂ, ಮುಖಂಡರಾದ ಬೋರಲಿಂಗೇಗೌಡ, ಇಂಡುವಾಳು ಚಂದ್ರಶೇಖರ್, ತಗ್ಗಹಳ್ಳಿ ವೆಂಕಟೇಶ್, ತೂಬಿನಕೆರೆ ಲಿಂಗರಾಜು, ಮದ್ದೇಗೌಡ, ಕೆ.ಎಸ್.ಸುಧೀರ್ ಕುಮಾರ್,  ಮಂಗಲ ಲಂಕೇಶ್ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ