ಬಿಜೆಪಿ ಪಕ್ಷದಿಂದ ಮಾತ್ರ ದೇಶದ ಪ್ರಗತಿ ಮತ್ತು ಜನಪರ ಯೋಜನೆ ಜಾರಿ ಸಾಧ್ಯ. ಹಾಗಾಗಿ ಬಿಜೆಪಿ ಬೆಂಬಲಿಸ ಬೇಕೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮೈಸೂರು ವಿಭಾಗದ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾನಾ ಮನವಿ ಮಾಡಿದರು.
ನಾಗಮಂಗಲ ಪಟ್ಟಣದಲ್ಲಿಂದು 6ನೇ ವಾರ್ಡ್ ನಲ್ಲಿ ‘ಬೂತ್ ವಿಜಯ’ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿದರು.
ನಾಗಮಂಗಲದಲ್ಲಿ ಭಾರತೀಯ ಜನತಾ ಪಕ್ಷ ಶಕ್ತಿಯುತವಾಗಿದೆ. ಬೂತ್ ಮಟ್ಟದ ಸಮಿತಿಯ ಸದಸ್ಯರೆಲ್ಲರೂ ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಬಿಜೆಪಿ ಪಕ್ಷದ ಅಭಿವೃದ್ಧಿ ಕಾರ್ಯಗಳ ಬಗ್ಗೆ, ಕೇಂದ್ರದಲ್ಲಿ ಮೋದಿ ಹಾಗೂ ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಮಾಡಿದ ಜನಪರ ಕೆಲಸ, ದೇಶದ ಪ್ರಗತಿಯ ಹೆಜ್ಜೆಗಳ ಬಗ್ಗೆ ಮನವರಿಕೆ ಮಾಡಿಕೊಡುವಂತೆ ತಿಳಿಸಿದರು.
ಮಂಡ್ಯದಲ್ಲಿ ನಡೆದ ಜನಸಂಕಲ್ಪ ಸಮಾವೇಶಕ್ಕೆ ಬಂದ ಜನ ಸಾಗರ ನೋಡಿ ಬಿಜೆಪಿಗೆ ಮಂಡ್ಯದಲ್ಲಿ ಗೆಲುವಿನ ಭರವಸೆ ಹೆಚ್ಚಿಸಿವೆ.ನಾಗಮಂಗಲದಲ್ಲಿ ಮಲ್ಲಿಕಾರ್ಜುನ್ (ಫೈಟರ್ ರವಿ)ರವರು ಗ್ರಾಮಗಳಲ್ಲಿ ಸುತ್ತಿ ಬಿಜೆಪಿ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ.ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದರು.
ಕಾರ್ಯಕ್ರಮದ ಅದ್ಯಕ್ಷತೆ ಬೂತ್ ಮುಖಂಡ ಜಗದೀಶ್ ವಹಿಸಿದ್ದು, ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ತಾಲ್ಲೂಕು ಅಧ್ಯಕ್ಷ ಸೋಮಶೇಖರ್, ಫೈಟರ್ ರವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.




