ಕಾಂಗ್ರೆಸ್ ಪಕ್ಷದ “ಪ್ರಜಾಧ್ವನಿ” ಯಾತ್ರೆಗೆ ಸಿದ್ಧವಾಗಿರುವ ಬಸ್ ಗೆ ಕೆಪಿಸಿಸಿ ಕಚೇರಿ ಮುಂಭಾಗ ಇಂದು ಪೂಜೆ ಸಲ್ಲಿಸಿ, ರಾಜ್ಯವನ್ನು ಭ್ರಷ್ಟಾಚಾರ, ದುರಾಡಳಿತ, ದ್ವೇಷ ರಾಜಕಾರಣದಿಂದ ಮುಕ್ತಗೊಳಿಸುವ ನಮ್ಮ ಅಭಿಯಾನಕ್ಕೆ ಚಾಲನೆ ನೀಡಿದೆವು ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅಭಿವೃದ್ಧಿಯನ್ನು ಕಡೆಗಣಿಸಿರುವ ಬಿಜೆಪಿ ಸರ್ಕಾರದ “ಪಾಪದ ಪುರಾಣ” ಬಯಲಾಗಿದೆ. “ಪ್ರಜಾಧ್ವನಿ” ಏರಿಸೋಣ ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕೈ ಜೋಡಿಸೋಣ, ಈ ಐತಿಹಾಸಿಕ ಯಾತ್ರೆಯಲ್ಲಿ ಪಾಲ್ಗೊಳ್ಳಿ. ನಿಮ್ಮ ಸಲಹೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು 9537224224 ಸಂಖ್ಯೆಗೆ ಕರೆ ಮಾಡಿ ಅಥವಾ prajadhwani.com ಗೆ ಭೇಟಿ ಕೊಡಿ ಎಂದು ಸಿದ್ದರಾಮಯ್ಯ ನಾಡಿನ ಜನತೆಗೆ ಟ್ವೀಟ್ ಮೂಲಕ ಕರೆ ನೀಡಿದ್ದಾರೆ.

ಭ್ರಷ್ಟಾಚಾರದ ಸೋಂಕು ಹರಡಿಸಿದ ಬಿಜೆಪಿ ಸರ್ಕಾರದಿಂದ ನಮ್ಮ ನಾಡು ಹಿಂಪಡೆಯಲು “ಪ್ರಜಾಧ್ವನಿ” ಏರಿಸೋಣ. ಕರುನಾಡಿನ ಘನತೆ, ವೈಭವ ಹೆಚ್ಚಿಸಲು ಕೈಜೋಡಿಸೋಣ! ಈ ಐತಿಹಾಸಿಕ ಯಾತ್ರೆಯಲ್ಲಿ ಪಾಲ್ಗೊಳ್ಳಿ ಎಂದು ಅವರು ಮನವಿ ಮಾಡಿದ್ದಾರೆ.
40% ಕಮಿಷನ್ ಹಗರಣ, ಪಿಎಸ್‌ಐ ನೇಮಕಾತಿ ಹಗರಣ, ಪೊಲೀಸ್ ವರ್ಗಾವಣೆಯಲ್ಲಿ ಭ್ರಷ್ಟಾಚಾರ, ದ್ವೇಷ ರಾಜಕೀಯ, ದುರಾಡಳಿತದ ಮೂಲಕ ರಾಜ್ಯವನ್ನು ಸಾಲದ ಸುಳಿಗೆ ತಳ್ಳಿರುವ ಬಿಜೆಪಿ ಸರ್ಕಾರದ “ಪಾಪದ ಪುರಾಣ” ಎಂಬ ಆರೋಪ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರಿದ್ದರು.




