Wednesday, June 12, 2024

ಪ್ರಾಯೋಗಿಕ ಆವೃತ್ತಿ

ಯೇಸುದಾಸ್‌ ಜನ್ಮದಿನ : ವೃದ್ಧರಿಗೆ ಪೌಷ್ಠಿಕ ಆಹಾರ ವಿತರಣೆ

ಮಂಡ್ಯ ನಗರದ ಸೇವಾಕಿರಣ ವೃದ್ಧಾಶ್ರಮದಲ್ಲಿ ಜಿಲ್ಲಾ ಗಾಯಕರ ಟ್ರಸ್ಟ್‌ ವತಿಯಿಂದ ಪ್ರಸಿದ್ಧ ಗಾಯಕ ಡಾ.ಕೆ.ಜೆ.ಯೇಸುದಾಸ್‌ ಅವರ 83ನೇ ಜನ್ಮದಿನದ ಅಂಗವಾಗಿ ಗಾನಯಾನ ಮತ್ತು ವೃದ್ಧರಿಗೆ ಪೌಷ್ಠಿಕ ಆಹಾರ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಡಾ.ಚಂದ್ರಶೇಖರ್ ಮಾತನಾಡಿ, ಭಾಷೆ ಗೊತ್ತಿಲ್ಲದಿದ್ದರೂ ಅರ್ಥವಾಗುವುದೆಂದರೆ ಅದು ಸಂಗೀತ ಮಾತ್ರ, ಅದನ್ನು ಆಲಿಸುವುದೇ ಪುಣ್ಯವಾಗಿದೆ. ಯೇಸುದಾಸ್‌ ಅವರು ಕೂಡ ಉತ್ತಮ ಹೆಸರು ಮಾಡಿ ಸಂಗೀತ ದಿಗ್ಗಜರಾಗಿದ್ದಾರೆ, ಅವರ ಹುಟ್ಟು ಹಬ್ಬದ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷದ ವಿಷಯ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಅಶೋಕ್‌ ಜಯರಾಂ ಮಾತನಾಡಿ, ಯೇಸುದಾಸ್‌ ಅವರ ಅಭಿಮಾನಿಯಾಗಿ ಅವರ ಗಾಯನವನ್ನು ಕೇಳಿ ಆನಂದಿಸಿದ್ದೇನೆ, ಅದೇ ಮಾದರಿಯಲ್ಲಿ ವೈದ್ಯರಾದ ಮಾದೇಶ್ ಅವರು ಸಹ ಯೇಸುದಾಸ್‌ ಅವರ ಧ್ವನಿಯಲ್ಲಿಯೇ ಹಾಡುವ ಮೂಲಕ ರಂಜಿಸುತ್ತಿದ್ದಾರೆ, ಅದು ಹೀಗೆ ಮುಂದುವರಿಯಲಿ ಎಂದು ಆಶಿಸಿದರು.

ಡಾ.ಕೆ.ಜೆ.ಯೇಸುದಾಸ್‌ ಅವರ 83ನೇ ಜನ್ಮದಿನದ ಅಂಗವಾಗಿ ಇದೇ ಸಂದರ್ಭದಲ್ಲಿ ಸೇವಾಕಿರಣ ವೃದ್ಧಾಶ್ರಮಕ್ಕೆ ದಿನಸಿ ಪದಾರ್ಥಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಡಾ.ಎಂ.ಮಾದೇಶ್‌, ಮುಖಂಡರಾದ ಅಂಬುಜಮ್ಮ, ನವೀನ್, ನಟರಾಜು, ಹನಿಯಂಬಾಡಿ ಶೇಖರ್ ಇತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!