Tuesday, November 24, 2026

ಪ್ರಾಯೋಗಿಕ ಆವೃತ್ತಿ

ನಿನ್ನ ಪ್ರೀತಿಸುವುದೆಂದರೆ

✍️ ಚಿದಂಬರ ನರೇಂದ್ರ


ನಿನ್ನ ಪ್ರೀತಿಸುವುದೆಂದರೆ,
ಒಗರು ಹಣ್ಣೊಂದನ್ನ ಚಪ್ಪರಿಸಿ ತಿಂದಂತೆ,
ಕಾಲ, ತನ್ನ ಓಟದ ದಾರಿಯನ್ನ
ಈಗಾಗಲೇ ಓಡಿ ಮುಗಿಸಿರುವಂತೆ,
ಎಲ್ಲ ಒಳ್ಳೆಯದು
ಶುರುವಾಗುವ ಮೊದಲೇ
ಮುಗಿದು ಹೋದಂತೆ.

ನಿನ್ನ ಪ್ರೀತಿಸುವುದೆಂದರೆ,
ಅಪಾಯವೊಂದನ್ನು ಅಪ್ಪಿ ಆಹ್ವಾನಿಸಿದಂತೆ,
ಧೂಳಿನ ಬಿರುಗಾಳಿಯೊಂದು
ಆಕಾಶವನ್ನು ನುಂಗಿ ನೀರು ಕುಡಿದಂತೆ,
ಧೂಮಕೇತುವೊಂದು
ಭೂಮಿಯ ವಾಯು ಪದರವನ್ನು
ಕತ್ತರಿಸಿ ಹೋದಂತೆ.

ಆದರೆ ನಿನ್ನ ಪ್ರೀತಿಸುವುದು
ನನಗಂತೂ ಗೌರವದ ವಿಷಯ,
ಹಿಮ, ಗಾಳಿಗೆ ಹಾರಿ
ವಸಂತಕ್ಕೆ ದಾರಿ ಮಾಡಿಕೊಡುವಂತೆ
ಸಾಧ್ಯವಾದಷ್ಟು ಹೊತ್ತು
ಹೊತ್ತು ನಿಂತಿರುತ್ತೆನೆ ನಿನ್ನ
ನಾನು
ಹಗುರಾಗುವ ತನಕ.

~ Lang Leav

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ