Sunday, May 19, 2024

ಪ್ರಾಯೋಗಿಕ ಆವೃತ್ತಿ

ಹಂಸಲೇಖ ಜನ್ಮದಿನ | ಅವರು ಬರೆದ ಪದಗುಚ್ಚ… ಶೂದ್ರ ನುಡಿಕಟ್ಟುಗಳು…ಹೇಗಿವೆ ಗೊತ್ತಾ ?

✍️ ನಾಗೇಗವ್ಡ ಕೀಲಾರ ಶಿವಲಿಂಗಯ್ಯ

(ಜೂ.23 ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (ಗಂಗರಾಜು) ಅವರ ಜನ್ಮದಿನ, ಈ ಸಂದರ್ಭದಲ್ಲಿ ನಾಗೇಗವ್ಡ ಕೀಲಾರ ಶಿವಲಿಂಗಯ್ಯ ಅವರು ಹಂಸಲೇಖ ಅವರ ಸಾಹಿತ್ಯದ ವಿಶೇಷತೆಯನ್ನು ಮೆಲಕು ಹಾಕಿದ್ದಾರೆ)

ಹಂಸಲೇಖ ಬರೆದ ಸಾಕಷ್ಟು ಹಾಡುಗಳ ಪದಗುಚ್ಚHamsalekha expressions
ನಾವೆಲ್ಲರೂ ನಮ್ಮೂರುಗಳಲ್ಲಿ ಸರ್ವೇಸಾಧಾರಣ ಬಳಸುವ ಪದಗಳು

“ರಾಗಿಹೊಲದಾಗೆ ಖಾಲಿ ಗುಡಿಸಲು , “

“ಒಂದು ನೆಲ್ಲು ಚೆಲ್ಲಿದರೆ “

“ಇದು ಅವರೆಯ ಹೂವೋ “

“ಅವನೆಡೆಯೋ ದಾರೀಲಿ ಗರಿಕೇನು ಹುಟ್ಟಲ್ಲ “

“ನಮ್ಮೂರ ಬಳಗ ಕೇಳಿದೆಯ
ಕಾವೇರಿ ನದಿಯ ಕಂಗಳು ನಾ
ಸಹ್ಯಾದ್ರಿ ಸಿರಿಯಾ ಬಂಧುವು ನಾ
ಗಾಂಧಿಯಿದ್ದ ದೇಶ ನನ್ನದು
ಬುದ್ಧನಿದ್ದ ಭೂಮಿ ನನ್ನದು”

ಹೀಗೇ ಹುಡುಕಿ ಹೆಕ್ಕಿ ತಂದ ಪದಗುಚ್ಚಗಳು ಒಂದು ಹೊಸ ಅಲೆಯನ್ನೇ ಎಬ್ಬಿಸಿ ಕರ್ನಾಟಕದ ಮೂಲಮೂಲೆಗೂ ಜನಸಾಮಾನ್ಯರನ್ನ ತಲುಪಿವೆ

ಹಾಗೆಯೇ ಹಂಸಲೇಖ ಬರೆದ ಬಹಳ ಹಾಡುಗಳಲ್ಲಿ ಹೆಣ್ಣಿನ ಮೇಲೆ ಗಂಡು ಹೇರುವ moral values ಮುರಿದಿದಾರೆ (ಕೆಲವು exceptions ಹೊರತಾಗಿ)

ಈ ಹಾಡೇ ನೋಡಿ ಯಾರು ಯಾರಿಗೆ ಕಲಿಸುತಿದ್ದಾರೆ ಯಾರಿಂದ ಯಾರಿಗೆ ಮಾತು ಬಂದಿದೆ ಅಂತ ಒಮ್ಮೆ ನೋಡಿ 

ರಾಗಿ ಹೊಲದಾಗೆ ಖಾಲಿ ಗುಡಿಸಲು

ಗುಡಿಸಲಿಗೆ ಹೋದೆ ಮಾತನಾಡಲು

ನನ್ನ ಪತಿರಾಯರಿಗೆ ತಿನಿಸಲು

ತುಂಬಾ ಹೊಸ ಮಾತು ಕಳಿಸಿ ಕೊಟ್ಟಳಮ್ಮ!!

ಜೇನ್ನು ತುಪ್ಪ ತೊಟ್ಟು ಕೊಡು ಎಂದಳಮ್ಮ!!

ಹೊರನೋಟಕ್ಕೆ ಕಮಾನು ಡಾರ್ಲಿಂಗ್ ಅತಿರೇಖದ ಹಾಡಾಗಿ ಕಂಡರೂ, ಅಂತರಂಗದಲ್ಲಿ ಹೊಸತು ಏನನೋ ಹೇಳುವ ತವಕ ಇದೆ

ಉದಯಶಂಕರ್ ಇಡೀ ಸಾಹಿತ್ಯದಲ್ಲಿ existing social boundaries ಮುರಿದಿರೋದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ

ಅವರ ಪದಗುಚ್ಚಗಳೂ ನಾವು ಗ್ರಾಮೀಣ ಪ್ರದೇಶದವರಿಗೆ ಎಲ್ಲ ಹೊಸತೆ, ಇದೇ ಕಾರಣಕ್ಕೆ ಹಂಸ್ ರನ್ನು ಉದಯಶಂಕರ್ ಜತೆ ಹೋಲಿಸಿ ಹಂಸಲೇಖ ರನ್ನ ಧ್ವಂಸಲೇಖ ಅಂದವರೆಷ್ಟೋ ಜನ ಇದಾರೆ

ಅಂದರೆ ನಾವು ದಿನನಿತ್ಯ ಬಳಸುವ ಶೂದ್ರ ನುಡಿಗಟ್ಟುಗಳು, ವ್ಯಾಲ್ಯು ಸಿಸ್ಟಮ್ ಹಾಡುಗಳಾದರೆ ಒಳಗೆ ಆಳದಲ್ಲಿ ಯಥಾಸ್ಥಿತಿವಾದಿಗಳಿಗೆ ನಡುಕ

ಈಗ ಹಂಸ್ ಜತೆ ಉದಯಶಂಕರ್ ಹೋಲಿಕೆ ಯಾಕೆ ಅನ್ನುವವರು ಇದೇ ಹೋಲಿಕೆ ತಿರುಗಮುರುಗವಾಗಿದ್ದಾಗ ಸುಮ್ಮನಿರುವುದರ ಹಿಂದಿರುವ ಕಲ್ಚರಲ್ ಪಾಲಿಟಿಕ್ಸ್ ಯಾವುದು ಎಂದು ನಾವು ಯೋಚಿಸಬೇಕು

ಉದಯಶಂಕರ್ ಇಡೀ ಸಾಹಿತ್ಯದಲ್ಲಿ ‘ಪೂಜಿಸಲೆಂದೇ ಹೂಗಳ ತಂದೆ’ ತರಹದ ಹಾಡುಗಳೇ ಜಾಸ್ತಿ

ಸಿನೆಮಾ ಸಾಹಿತ್ಯ ಸಂಧರ್ಭಕ್ಕೆ ತಕ್ಕ ಹಾಗೆ ಅನ್ನುವ ವಾದ ಕೂಡ ಇದೆ , ಹಾಗಾಗಿ ಅವರ ಇಡೀ ಸಿನೆಮಾ ಸಾಹಿತ್ಯದಲ್ಲೇ ನೀವು ಹುಡುಕಿ ನೋಡಿ , ಇರುವ ವ್ಯಾಲ್ಯೂ ಸಿಸ್ಟಮ್ ಹಂಸಲೇಖ ಮುರಿದು ಕಟ್ಟುವ ಬಗೆ ಇನ್ಯಾರಲ್ಲೂ ಕಾಣುವುದು ಅಷ್ಟು ಸುಲಭವಲ್ಲ

ಒಂದೆರಡು ಉದಾಹರಣೆ

ಪ್ರೇಮಕೇ ಒಡವೆಯೇ
ಪ್ರೇಮಕೇ ಮದುವೆಯೇ
ಪ್ರೇಮಕೇ ಶಾಸ್ತೃವೇ
ಪ್ರೇಮಕೇ ಮಂತ್ರವೇ
ಪ್ರೇಮವೇ ದೇವರು
ಸರಿಸಮ ಇಬ್ಬರು ಅದರೆದುರು
ಮನದ ಮದುವೆಇದು ಮರೆಯದಿರು

ರಾಮಾಚಾರಿ

ಒಳ್ಳೆ ದಿನ ಘಳಿಗೆಯ ಕೂಡಿಸಿ, ತೆಂಗು ಬಾಳೆ ಚಪ್ಪರವ ಹಾಕಿಸಿ
ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ

ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು
ಮನ ಸೇರೋ ಮದುವೇನೆ ಸುಖವೆಂದರು

ಇವರಿಬ್ಬರ ಕಾಲಮಾನ ಬೇರೆ ಅನ್ನುವವರು ಕುವೆಂಪುರ ಸಾಹಿತ್ಯ ಆಧಾರಿಸಿದ ಇಷ್ಚಕಾಮ್ಯ ಚಿತ್ರದ ಹಾಡು ನೆನಪಿಸಿಕೊಳ್ಳಿ

ನಾ ನಿನಗೆ… ನೀನೆನಗೆ…. ಜೇನಾಗುವಾ…
ನಾ ನಿನಗೆ… ನೀನೆನಗೆ…. ಜೇನಾಗುವಾ…
ರಸದೇವ ಗಂಗೆಯಲಿ ಮೀನಾಗುವ ಹೂವಾಗುವ… ಹಣ್ಣಾಗುವ…

ಶಾಂತಿಕ್ರಾಂತಿ ಮಧ್ಯರಾತ್ರೀಲಿ ಹಾಡು ಒಮ್ಮೆ ಕೇಳಿ , ಹಂಸ್ ನಮ್ಮ ಪರಂಪರೆಯ ಯಾರನ್ನು ನೆನಪಿಸಿಕೊಳ್ತಾರೆ , ಯಾರನ್ನ exclude ಮಾಡ್ತಾರೇ ಅಂತ, ಆಗ ಸನಾತನಿಗಳು ಯಾಕೆ ಇಷ್ಚ್ ವಿಷಕಾರ್ತಾರೆ ಹಂಸ್ ಅಂತವರ ಮೇಲೆ ಅಂತ ನಿಮಗೆ ತಿಳೀತದೆ. (ಮೊದಲೆನದಾಗಿ ಹೆಣ್ ಮಕ್ಳು ಮಧ್ಯರಾತ್ರಿ ಮನೆಯಿಂದ ಹೊರಗೆ ಹೋಗೋದೆ ಇವತ್ತಿಗೂ ದೊಡ್ಡ ಅಪರಾಧ ಇಂತವರಿಗೆ)

ನಮ್ಮೂರ ಬಳಗ ಕೇಳಿದೆಯ
ಕಾವೇರಿ ನದಿಯ ಕಂಗಳು ನಾ
ಸಹ್ಯಾದ್ರಿ ಸಿರಿಯಾ ಬಂಧುವು ನಾ
ಗಾಂಧಿಯಿದ್ದ ದೇಶ ನನ್ನದು
ಬುದ್ಧನಿದ್ದ ಭೂಮಿ ನನ್ನದು

ಹೆಣ್ಣು ಗಂಡು ಸಮವಾಗುವುದು , ಆಡುಭಾಷೆ ಸಾಹಿತ್ಯದ ಭಾಷೆಯಾಗುವುದು ಇವೆಲ್ಲ ಅಷ್ಟು ಸುಲಭದ ಮೌಲ್ಯವಲ್ಲ ನೋಡಿ

ಅದೊಂದು ಪ್ರತಿರೋಧ , ಅದೊಂದು ಸಾಂಸ್ಕೃತಿಕ ಸಂಘರ್ಷ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!