Friday, November 20, 2026

ಪ್ರಾಯೋಗಿಕ ಆವೃತ್ತಿ

ಮಕ್ಕಳಿಗೆ ಐದು ಮೊಟ್ಟೆ ನೀಡಿ : ಎರಡನೇ ಆಡಳಿತ ಸುಧಾರಣಾ ಆಯೋಗ

ಕರ್ನಾಟಕ ಎರಡನೇ ಆಡಳಿತ ಸುಧಾರಣಾ ಆಯೋಗದ 4 ಮತ್ತು 5ನೇ ವರದಿಗಳನ್ನು ಆಯೋಗದ ಅಧ್ಯಕ್ಷ ಟಿ ಎಂ ವಿಜಯ ಭಾಸ್ಕರ್ ಅವರು ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಗೃಹ ಇಲಾಖೆ ಎಸಿಎಸ್ ರಜನೀಶ್ ಗೋಯಲ್ ಹಾಗೂ ಪ್ರಸನ್ನ ಕುಮಾರ್ ಹಾಜರಿದ್ದರು.

ಆಯೋಗದ ವರದಿಯ ಶಿಫಾರಸುಗಳು

ಸರ್ಕಾರಿ ಶಾಲಾ ಕಟ್ಟಡದಿಂದ 300 ಮೀಟರ್ ಅಂತರದಲ್ಲಿರುವ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 6,307 ಅಂಗನವಾಡಿ ಕೇಂದ್ರಗಳನ್ನು ಕೊಠಡಿ ಲಭ್ಯವಿದ್ದಲ್ಲಿ ಹತ್ತಿರದ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಬಹುದು.

6 ತಿಂಗಳಿಂದ 3 ವರ್ಷ ವಯಸ್ಸಿನ ತೀವ್ರ ಅಪೌಷ್ಠಿಕತೆ ಮತ್ತು ಸಾಧಾರಣ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಈಗ ವಾರಕ್ಕೆ 2 ಮೊಟ್ಟೆಗಳನ್ನು ನೀಡುತ್ತಿದ್ದು ಇದನ್ನು 5 ಮೊಟ್ಟೆಗಳಿಗೆ ಹೆಚ್ಚಿಸಬಹುದು ಮತ್ತು ಸಾಮಾನ್ಯ ಮಕ್ಕಳಿಗೂ ಸಹ ವಾರಕ್ಕೆ 2 ಮೊಟ್ಟೆಗಳನ್ನು ನೀಡಬಹುದು.

ಲೋಕಸೇವಾ ಆಯೋಗಗಳ ಪೈಕಿ ಕೇರಳ ರಾಜ್ಯವು ಜಿಲ್ಲಾಮಟ್ಟದ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ಇದನ್ನು ಹೊರತುಪಡಿಸಿ, ಉತ್ತರ ಪ್ರದೇಶವೂ ಸೇರಿದಂತೆ ಇತರ ರಾಜ್ಯಗಳಲ್ಲಿ ಸದಸ್ಯರ ಸಂಖ್ಯೆ 8 ಅಥವಾ ಅದಕ್ಕಿಂತ ಕಡಿಮೆ ಇರುತ್ತಾರೆ. ಆದುದರಿಂದ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಸೇರಿದಂತೆ ಸದಸ್ಯರ ಸಂಖ್ಯೆಯನ್ನು 14 ರಿಂದ 8ಕ್ಕೆ ಇಳಿಸಲು ಶಿಫಾರಸು ಮಾಡಲಾಗಿದೆ.

ನೇಮಕಾತಿಗೆ ಮೊದಲು ಆಯೋಗವು ದಾಖಲಾತಿಗಳ ನೈಜತೆಯನ್ನು ಪರಿಶೀಲನೆ ಮಾಡುವುದನ್ನು ಕೈಬಿಟ್ಟು ಸಂಬಂಧಿಸಿದ ಇಲಾಖೆಗಳು ತ್ವರಿತಗೊಳಿಸಬಹುದು. ದಾಖಲೆಗಳ ನೈಜತೆ ಪರಿಶೀಲನೆ ಮಾಡುವುದರಿಂದ ಆಯ್ಕೆಯನ್ನು ತ್ವರಿತಗೊಳಿಸಹುದು.

ಹರಿಯಾಣ, ರಾಜಸ್ಥಾನ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಪುದುಚೇರಿ ಸೇರಿದಂತೆ ಸುಮಾರು 5 ರಾಜ್ಯಗಳು, ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ ಒದಗಿಸುತ್ತವೆ. ಕರ್ನಾಟಕದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.5 ರಿಂದ ಶೇ.10ರಷ್ಟು ಎನ್‌ಆರ್‌ಐ ಕೋಟಾ ಸೃಜಿಸಬಹುದು. ಅವರಿಗೆ ಹೆಚ್ಚಿನ ಶುಲ್ಕವನ್ನು ವಿಧಿಸಬಹುದು. ಆಯಾ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯ ಅಭಿವೃದ್ಧಿಗಾಗಿ ಈ ಮೊತ್ತವನ್ನು ಬಳಸಬಹುದು.

ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಕ್ರೀಡಾ ಪ್ರಾಧಿಕಾರ ಹಾಗೂ ಜಿಲ್ಲಾ ಕ್ರೀಡಾಭಿವೃದ್ಧಿ ನಿಧಿಯನ್ನು ಸಿಎಸ್‌ಆರ್ ಫಂಡ್‌ನ್ನು ಸಂಗ್ರಹಿಸಲು ಮತ್ತು ಕ್ರೀಡೆಗಳನ್ನು ಅಭಿವೃದ್ಧಿಪಡಿಸಲು ಸ್ಥಾಪಿಸುವುದು.

ಬಿಬಿಎಂಪಿ ಕಾಯಿದೆ, ಕರ್ನಾಟಕ ಮಹಾನಗರ ಪಾಲಿಕೆ ಕಾಯಿದೆ, ಕರ್ನಾಟಕ ಪೌರಾಡಳಿತ ಕಾಯಿದೆ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (GS & PR) ಕಾಯಿದೆಗಳನ್ನು (ಉದಾ: ಬಿಬಿಎಂಪಿ ಕಾಯಿದೆ 2020ರ ಕಲಂ 143 (1), KGSPR ಕಾಯಿದೆಯ ಕಲಂ-200) ತಿದ್ದುಪಡಿ ಮಾಡಿ ಆಸ್ತಿ ತೆರಿಗೆಯ ಶೇ.1 ಪ್ರಮಾಣದಲ್ಲಿ ಕ್ರೀಡಾ ಸೆಸ್ ಅನ್ನು ವಿಧಿಸಬಹುದು ಎಂದು ಸರ್ಕಾರಕ್ಕೆ ಸಲಹೆ ನೀಡಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ