ಮದ್ದೂರು ತಾಲ್ಲೂಕಿನ ಭಾರತೀನಗರದ ಸಪ್ತಗಿರಿ ಪಾರ್ಟಿ ಹಾಲ್ ನಲ್ಲಿ ಕೃಷಿ ಕೂಲಿಕಾರರ 6ನೇ ಮದ್ದೂರು ತಾಲೂಕು ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಕೂಲಿ ಕಾರ್ಮಿಕರ ಸಂಘದ ರಾಜ್ಯದ್ಯಕ್ಷ ಜಿ.ಎನ್.ನಾಗರಾಜು ಉದ್ಘಾಟಿಸಿದರು.
ಉದ್ಯೋಗ ಖಾತ್ರಿ ಯೋಜನೆ ಉಳಿಸಲು ಕೂಲಿಕಾರರಿಗೆ 200ದಿನ ಕೆಲಸ ಮಾಡಲು ಅನುವು ಮಾಡಿಕೊಡಬೇಕು. ಪ್ರತಿದಿನ 600ರೂ ಕೂಲಿ ನೀಡಬೇಕು. ಎಲ್ಲಾ ಬಡವರಿಗೆ ಮನೆ,ನಿವೇಶನ ಹಕ್ಕುಪತ್ರ,ಆರ್ ಟಿ ಸಿ ನೀಡಬೇಕು ಎಂದರು.
ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾದ್ಯಕ್ಷ ಪುಟ್ಟಮಾದು ಎಲ್ಲಾ ಬಿಪಿಎಲ್ ಕುಟುಂಬಗಳಿಗೆ ಉಚಿತ ವಿದ್ಯುತ್, ಪಡಿತರ ವಿತರಿಸಬೇಕು ಮತ್ತು ಗ್ರಾಮಕ್ಕೊಂದು ಸ್ಮಶಾನ ಕಲ್ಪಿಸಬೇಕು ಹಾಗೂ ಸ್ಮಶಾನವನ್ನು ಅಭಿವೃದ್ಧಿಗೊಳಿಸಲು 1ಲಕ್ಷದವರಗೆ ಸಾಲ ಮಂಜೂರು ಮಾಡಬೇಕು.
ಜಲಜೀವನ್ ಕೈಬಿಟ್ಟು ಪಂಚಾಯತ್ ರಾಜ್ ನಿಯಮದಂತೆ ಕುಡಿಯುವ ನೀರು ಒದಗಿಸಲು ,ಹೆಚ್ಚುತ್ತಿರುವ ಬೆಲೆ ನಿಯಂತ್ರಿಸಲು ಸಾಮಾಜಿಕ ಭದ್ರತಾ ಯೋಜನೆಯಲ್ಲಿ ಸಮಾನ ಪಿಂಚಣಿ ಜಾರಿಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡ ಟಿ.ಯಶ್ವಂತ್,ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಬಸವರಾಜು,ಅನಿತಾ ಅಜಯ್ ಕುಮಾರ್,ಮಂಚೇಗೌಡ,ಟಿ.ಪಿ,ಅರುಣ್, ಶಶಿಕಲಾ ಮತ್ತಿತರರಿದ್ದರು.




