ಕುಸ್ತಿ ಗ್ರಾಮೀಣ ಭಾಗದ ದೇಶಿ ಕ್ರೀಡೆಯಾಗಿದ್ದು, ಗ್ರಾಮೀಣ ಕ್ರೀಡೆಯನ್ನು ಪ್ರೋತ್ಸಾಹಿಸುವುದರ ಮೂಲಕ ಉಳಿಸಿ ಬೆಳೆಸಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.
ಮಳವಳ್ಳಿ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಆವರಣದಲ್ಲಿ ಶ್ರೀರಾಮರೂಢಸ್ವಾಮಿ ಮಠದ ಹತ್ತು ಜನಗಳ ಗರಡಿ ವತಿಯಿಂದ ಸಿಡಿ ಹಬ್ಬದ ಅಂಗವಾಗಿ 30 ಜೊತೆ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ತನ್ನದೇ ಆದ ಇತಿಹಾಸ ಹೊಂದಿರುವ ಕುಸ್ತಿ ಪಂದ್ಯಾವಳಿಯನ್ನು ಮಳವಳ್ಳಿಯಲ್ಲಿ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು, ಮನರಂಜನೆ , ದೈಹಿಕ ಮಾನಸಿಕ ಸದೃಡತೆಗೆ ಕುಸ್ತಿ ಪಂದ್ಯಾವಳಿ ಸಹಕಾರಿಯಾಗಿದೆ ಎಂದರು.
ರಾಜರು ದಸರಾ ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಮನರಂಜನೆ ಪೂರಕವಾಗಿ ಹಮ್ಮಿಕೊಳ್ಳುತ್ತಿದ್ದ ಕುಸ್ತಿ ಕೀಡೆಯನ್ನು ಇಂದಿಗೂ ಉಳಿಸಿ ಬೆಳೆಸುಕೊಂಡು ಬಂದಿರುವುದು ಹೆಮ್ಮೆಯ ವಿಷಯವಾಗಿದ್ದು, ಯುವ ಜನರು ಇನ್ನೂ ಹೆಚ್ಚಿನ ಸಂಖ್ಯೆ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಪೂರ್ವ ತಯಾರಿಯನ್ನು ನಡೆಸಿಕೊಳ್ಳಬೇಕೆಂದು ತಿಳಿಸಿದರು.
ಶಾಸಕ ಡಾ. ಕೆ.ಅನ್ನದಾನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಕುಸ್ತಿಪಟುಗಳು ಕ್ರೀಡೆಯನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಬೇಕು, ಸೋಲು ಗೆಲುವನ್ನು ಸಮಾನಾಗಿ ಸ್ವೀಕರಿಸುವುದರ ಮೂಲಕ ಕ್ರೀಡೆಗೆ ಗೌರವಸಲ್ಲಿಸಬೇಕು, ಮಳವಳ್ಳಿ ಸಿಡಿಹಬ್ಬದಂದು ಮನರಂಜನೆಯ ಭಾಗವಾಗಿ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿ ನಿರಂತರವಾಗಿ ನಡೆಯಲಿ ಎಂದು ಆಶೀಸಿದರು.
ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪೈಲ್ವಾನರು ಎದುರಾಳಿಗಳ ವಿರುದ್ದ ಗೆಲುವಿಗಾಗಿ ಸೆಣಸಿದ್ದು ವೀಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು.
ಕುಸ್ತಿ ಪಂದ್ಯಾವಳಿಯಲ್ಲಿ 30 ಜೊತೆ ಪೈಲ್ವಾನರು ಭಾಗವಹಿಸಿ ಕುಸ್ತಿ ಪಂದ್ಯಾವಳಿಯಲ್ಲಿ ಸೆಣದಾಡಿದರು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ರಾಧನಾರಾಜು, ಉಪಾಧ್ಯಕ್ಷ ಪ್ರಶಾಂತ್, ಟಿಎಪಿಸಿಎಂಎಸ್ ಅಧ್ಯಕ್ಷ ದ್ಯಾಪೇಗೌಡ, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ರವಿ ಕಂಸಾಗರ, ಬಿಜೆಪಿ ಮುಖಂ ಮುನಿರಾಜು, ಪೇಲ್ವನ್ರಾದ ರಾಮು, ಮಂಜಣ್ಣ ರವಿ, ಕಂಬರಾಜು, ಶಿವಕುಮಾರ್ ಅಣ್ಣೆಯಪ್ಪ, ಗಂಗರಾಜೇಅರಸ್, ಪುಟ್ಟಸ್ವಾಮಿ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪುಟ್ಟಸ್ವಾಮಿ ಲಿಂಗರಾಜು, ರೋಹಿತ್ಗೌಡ ಸೇರಿದಂತೆ ಇತರರು ಇದ್ದರು.




