Thursday, November 19, 2026

ಪ್ರಾಯೋಗಿಕ ಆವೃತ್ತಿ

ಫೆ.12ರಂದು ಬಿ.ಎನ್. ದಿನೇಶ್ ಸ್ವಾಭಿಮಾನಿ ಸಮಾವೇಶ

ತಾಪಂ ಮಾಜಿ ಸದಸ್ಯ ಬಿ.ಎನ್. ದಿನೇಶ್(ರಾಜಾಹುಲಿ) ಅವರು ಕೆ.ಆರ್.ಪೇಟೆ ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಶ್ರೀಗವಿರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಫೆ.12ರಂದು ಸ್ವಾಭಿಮಾನಿ ಸಮಾವೇಶವನ್ನು ಹಮ್ಮಿಕೊಂಡಿದ್ದು ಅಭಿಮಾನಿಗಳು ಹಿತೈಷಿಗಳು ಹಾಗೂ ಸ್ನೇಹಿತರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದಿನೇಶ್ ಅಭಿಮಾನಿ ಬಳಗದ ಹರೀಶ್ ಹಾಗೂ ಕೃಷ್ಣೇಗೌಡ ಮನವಿ ಮಾಡಿದರು.

ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಾಹುಲಿ ದಿನೇಶ್ ರಾಜಕೀಯಕ್ಕೆ ಬರುವ ಮುಂಚಿನಿಂದಲೂ ರೈತರಿಗೆ, ಬಡವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಾ ಬಂದಿದ್ದಾರೆ. ತಾ.ಪಂ.ಸದಸ್ಯರಾಗಿ ಸಂತೆಬಾಚಹಳ್ಳಿ ಹೋಬಳಿಯಲ್ಲಿ ಸರ್ಕಾರದ
ಅನುದಾನವನ್ನು ಕಾಯದೇ ತಮ್ಮ ಸ್ವಂತ ಖರ್ಚಿನಲ್ಲಿ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿದ್ದಾರೆ. ಕೊರೋನದ ಸಂಕಷ್ಟದ ಸಮಯದಲ್ಲಿ ಆಶಾ ಕಾರ್ಯಕರ್ತೆಯರಿಗೆ, ನಿರ್ಗತಿಕರಿಗೆ, ಬಡವರಿಗೆ ಪುಡ್ ಕಿಟ್‌ಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು ಎಂದರು.

ವಿವಿಧ ಹಳ್ಳಿಗಳಲ್ಲಿ ಎಡೆಬಿಡದೆ ಸುರಿದ ಬಿರುಗಾಳಿ ಮಳೆಗೆ ಸಾಕಷ್ಟು ಮನೆಗಳು, ಬೆಳೆಗಳು ಹಾನಿಯಾಗಿದ್ದವು. ಅಂತಹ ಮನೆಗಳ ವಾರಸುದಾರನ್ನು ಭೇಟಿ ನೀಡಿ ಸಾಂತ್ವನ ಹೇಳಿ ಧೈರ್ಯ ತುಂಬಿ ಆರ್ಥಿಕ ಸಹಾಯ ಮಾಡಿದ್ದರು. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುವುದು ಸತ್ಯ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ರಾಜಾಹುಲಿ ದಿನೇಶ್ ಅವರನ್ನು ತಾಲೂಕಿನ ಎಲ್ಲಾ
ಮತದಾರರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿ.ಸಿ.ಮಹದೇವ್, ಅಕ್ಕಿಹೆಬ್ಬಾಳುರಾಜು, ಮನು, ಪ್ರಸನ್ನ, ಕೃಷ್ಣೇಗೌಡ, ನಂದೀಶ್, ಸಂತೋಷ್, ಮಂಜು, ಪ್ರಕಾಶ್, ಅನಿಲ್, ಸಂದೀಪ್, ರಾಕೇಶ್, ಹರೀಶ್, ಮನು ಶ್ಯಾರಹಳ್ಳಿ, ಸಾಗರ ಗೊರವಿ ಮತ್ತಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ