Wednesday, April 24, 2024

ಪ್ರಾಯೋಗಿಕ ಆವೃತ್ತಿ

ನೆನಪಿಸುತ್ತಿದೆ……..

ವಿವೇಕಾನಂದ ಎಚ್.ಕೆ.

ನೆನಪಿಸುತ್ತಿದೆ ನನ್ನ ಕಣ್ಣುಗಳು,
ದೃಷ್ಟಿ ಮಂಜಾಗುವ ಮುನ್ನ,
ಸೃಷ್ಟಿಯ ಸೌಂದರ್ಯವನ್ನು ನೋಡೆಂದು…..

ನೆನಪಿಸುತ್ತಿದೆ ನನ್ನ ಕಿವಿಗಳು,
ಕಿವುಡಾಗುವ ಮುನ್ನ,
ಇಂಪಾದ ಸಂಗೀತವನ್ನು ಆಲಿಸೆಂದು…….

ನೆನಪಿಸುತ್ತಿದೆ ನನ್ನ ಮೂಗು,
ವಾಸನೆ ಕಳೆದುಕೊಳ್ಳುವ ಮುನ್ನ, ಸುವಾಸನೆಯ ಪರಿಮಳವನ್ನು ಅಘ್ರಾಣಿಸೆಂದು…..

ನೆನಪಿಸುತ್ತಿದೆ ನನ್ನ ನಾಲಿಗೆ,
ನಿರ್ಜೀವವಾಗುವ ಮುನ್ನ ,
ಸವಿರುಚಿಯನ್ನು ಆಸ್ವಾಧಿಸೆಂದು……

ನೆನಪಿಸುತ್ತಿದೆ ನನ್ನ ಬಾಯಿ,
ಮೌನವಾಗುವ ಮುನ್ನ,
ಹಿತವಚನ ನುಡಿಯೆಂದು….

ನೆನಪಿಸುತ್ತಿದೆ ನನ್ನ ಕೈಗಳು,
ಬರಿದಾಗುವ ಮುನ್ನ,
ದಾನ ನೀಡೆಂದು..‌‌…..

ನೆನಪಿಸುತ್ತಿದೆ ನನ್ನ ಬೆರಳುಗಳು,
ತಟಸ್ಥವಾಗುವ ಮುನ್ನ,
ಅತ್ಯುತ್ತಮವಾದ ಸಂದೇಶಗಳನ್ನು ಬರೆಯುತ್ತಿರೆಂದು….

ನೆನಪಿಸುತ್ತಿದೆ ನನ್ನ ಕಾಲುಗಳು,
ನಿಲ್ಲುವ ಮುನ್ನ,
ದೂರ ಬಹುದೂರ ನಡೆಯೆಂದು……

ನೆಪಪಿಸುತ್ತಿದೆ ನನ್ನ ಮೆದುಳು,
ನಿಷ್ಕ್ರಿಯವಾಗುವ ಮುನ್ನ,
ಎಲ್ಲವನ್ನೂ ಯೋಚಿಸಿ ಕಾರ್ಯಗತ ಮಾಡೆಂದು…..

ನೆನಪಿಸುತ್ತಿದೆ ನನ್ನ ಹೃದಯ,
ಸ್ಥಬ್ಧವಾಗುವ ಮುನ್ನ,
ಪ್ರೀತಿಯನ್ನು ಎಲ್ಲರಿಗೂ ಹಂಚೆಂದು……….

ನೆನಪಿಸುತ್ತಿದೆ ನನ್ನ ಮನಸ್ಸು,
ಮುದುಡುವ ಮುನ್ನ,
ವಿಶಾಲವಾಗಿ ವ್ಯಾಪಿಸಸಂದು…. ‌‌‌‌

ನೆನಪಿಸುತ್ತಿದೆ ನನ್ನ ಭಾವನೆಗಳು,
ಕರಗಿ ಹೋಗುವ ಮುನ್ನ,
ನನ್ನ ಜನರ ಮನಸ್ಸನ್ನು ವಿಶಾಲಗೊಳಿಸಿ ಸಮಾಜವನ್ನು ಪ್ರಬುದ್ದತೆಯೆಡೆಗೆ ಮುನ್ನಡೆಸೆಂದು……….

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!