ಚೀನಾ ಭಾರತೀಯ ಯೋಧರ ಮೇಲೆ ದಾಳಿ ಮಾಡಿತು – ಮೌನ, ಚೀನಾ ಭಾರತದ ನೆಲದಲ್ಲಿ ಟೌನ್‌ಶಿಪ್ ನಿರ್ಮಿಸಿತು – ಮೌನ, ಚೀನಾ ಗಡಿಯುದ್ದಕ್ಕೂ ನಿಯಮ ಮೀರಿ ರಸ್ತೆ, ಸೇತುವೆ ನಿರ್ಮಿಸಿದರೂ – ಮೌನ, ಭಾರತದ 26 ಪೆಟ್ರೋಲಿಂಗ್ ಪಾಯಿಂಟ್‌ಗಳನ್ನು ಚೀನಾ ಅತಿಕ್ರಮಿಸಿದೆ – ಮೌನ ಸಕಲ ಸಮಸ್ಯೆಗಳಿಗೂ “ಮೌನ”ವೇ ಮೋದಿಯವರ ಪರಿಹಾರ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ನಲ್ಲಿ ವ್ಯಂಗ್ಯವಾಡಿದೆ.
◆ಚೀನಾ ಭಾರತೀಯ ಯೋಧರ ಮೇಲೆ ದಾಳಿ ಮಾಡಿತು – ಮೌನ
◆ಚೀನಾ ಭಾರತದ ನೆಲದಲ್ಲಿ ಟೌನ್‌ಶಿಪ್ ನಿರ್ಮಿಸಿತು – ಮೌನ
◆ಚೀನಾ ಗಡಿಯುದ್ದಕ್ಕೂ ನಿಯಮ ಮೀರಿ ರಸ್ತೆ, ಸೇತುವೆ ನಿರ್ಮಿಸಿದರೂ – ಮೌನ
◆ಭಾರತದ 26 ಪೆಟ್ರೋಲಿಂಗ್ ಪಾಯಿಂಟ್‌ಗಳನ್ನು ಚೀನಾ ಅತಿಕ್ರಮಿಸಿದೆ – ಮೌನ
ಸಕಲ ಸಮಸ್ಯೆಗಳಿಗೂ “ಮೌನ”ವೇ ಮೋದಿಯವರ ಪರಿಹಾರ!#Vishwaguru_Solutions pic.twitter.com/LKbqF7QsGQ
— Karnataka Congress (@INCKarnataka) February 13, 2023
“>
ವೈಫಲ್ಯಗಳಿಗೆ, ಹಗರಣಗಳಿಗೆ, ಪ್ರಶ್ನೆಗಳಿಗೆ ನರೇಂದ್ರ ಮೋದಿ ಎಂದಿಗೂ ಉತ್ತರದಾಯಿತ್ವದ ಹೊಣೆಗಾರಿಕೆಯನ್ನು ತೋರಲಿಲ್ಲ. ಚೀನಾ ಅತಿಕ್ರಮಣ, ಅದಾನಿ ಹಗರಣ, ಬೆಲೆ ಏರಿಕೆ, ಆರ್ಥಿಕ ದುಃಸ್ಥಿತಿ ಇವುಗಳ ಬಗ್ಗೆ ಮಾತನಾಡುವ ಧೈರ್ಯ 56 ಇಂಚಿನವರಿಗೆ ಇಲ್ಲದಿರುವುದು ದೇಶದ ದುರಂತ ಎಂದು ಪರೋಕ್ಷವಾಗಿ ಮೋದಿಯವರ ಆಡಳಿತವನ್ನು ಪ್ರಶ್ನಿಸಿದೆ.
ಚುನಾವಣೆಗಾಗಿ ‘ಕರ್ನಾಟಕ ಟೂರಿಸ್ಟ್’ ಆಗಿರುವ ಮೋದಿಯವರು ಕರೋನಾ ಸಂದರ್ಭದಲ್ಲಿ ರಾಜ್ಯಕ್ಕೆ ಮಾಡಿದ ದ್ರೋಹವನ್ನ ಜನ ಮರೆತಿಲ್ಲ. ಆಕ್ಸಿಜನ್ ಅನ್ಯಾಯ, ರೆಮಿಡಿಸಿವಿರ್ ಅನ್ಯಾಯ,ಲಸಿಕೆ ಅನ್ಯಾಯ, ಪರಿಹಾರದ ಅನ್ಯಾಯ ರಾಜ್ಯದ ಕೋವಿಡ್ ಮೃತರ ಸಮಾಧಿ ಮೇಲೆ ನಿಂತು ಚುನಾವಣಾ ಭಾಷಣ ಮಾಡುವ ಮೋದಿಯವರಿಗೆ ನಾಚಿಕೆಯಾಗಬೇಕು ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.




