Thursday, November 19, 2026

ಪ್ರಾಯೋಗಿಕ ಆವೃತ್ತಿ

ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಲ್ಲ : ಕೆ.ಎಂ. ಪ್ರಸನ್ನಕುಮಾರ್

ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರ ಅಲ್ಲ, ಎಲ್ಲಾ ಸಮಸ್ಯೆಗಳಿಗೆ ಒಂದೊಂದು ಪರಿಹಾರ ಇದ್ದೆ ಇರುತ್ತದೆ, ಅದನ್ನು ಕಂಡುಕೊಳ್ಳುವ ಮತ್ತು ಇತರರಿಂದ ಬಗೆಹರಿಸಿಕೊಳ್ಳುವ ತೀರ್ಮಾನವನ್ನು ಮನಸ್ಸಿನಲ್ಲಿ ಮಾಡಿಕೊಳ್ಳಬೇಕು, ಮನಸ್ಸನ್ನು ದುರ್ಬಲವಾಗಲು ಬಿಡಬಾರದು ಎಂದು ಸಹಾಯಕ ಪ್ರಾಧ್ಯಾಪಕ ಕೆ.ಎಂ.ಪ್ರಸನ್ನಕುಮಾರ್ ಕಿವಿಮಾತು ಹೇಳಿದರು.

ಮಂಡ್ಯ ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಕಾಲೇಜಿನ ಎನ್.ಎಸ್.ಎಸ್.ಘಟಕಗಳು ಹಾಗೂ ನೆಲದನಿ ಬಳಗ ಮಂಗಲ ಗ್ರಾಮ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಪ್ರತಿಭಾವಂತ ಪುರಷ್ಕೃತೆ ದಿ.ಕು.ಶಾರದಾ ಶ್ರದ್ಧಾಂಜಲಿ ಹಾಗೂ ‘ಆತ್ಮಹತ್ಯೆ ಪಿಡುಗು; ಕಾರಣಗಳು ಮತ್ತು ಪರಿಹಾರಗಳು’ ಕುರಿತ ಅರಿವು ಕಾರ‍್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

nudikarnataka.com

ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕೆ ಬಿಡುತ್ತದೆ ಎಂಬ ಭ್ರಮೆಯಲ್ಲಿ ದಿಡೀರನೆ ತೆಗೆದುಕೊಳ್ಳುವ ಅತ್ಯಂತ ಕೆಟ್ಟ ನಿರ್ಧಾರವೇ ಆತ್ಮಹತ್ಯೆಯಾಗಿದೆ. ಆತ್ಮಹತ್ಯೆಗಳಿಗೆ ಅನೇಕ ಕಾರಣಗಳನ್ನು ನೋಡುತ್ತಾ ಬರುತ್ತೇವೆ, ವೈಯಕ್ತಿಕ, ಸಾಮಾಜಿಕ, ಕೌಟುಂಬಿಕ ಕಾರಣಗಳು ಆತ್ಮಹತ್ಯೆ ಕಾರಣವಾಗಿವೆ, ನಾವು ಸಮಸ್ಯೆಗಳಿಗೆ ಪರಿಹಾರ ಹುಡುಕಲು ಮುಂದಾಗಬೇಕೆ ಹೊರತರು ಕ್ಷಣ ಮಾತ್ರದ ಪರಿಹಾರದ ಭ್ರಮೆಯಲ್ಲಿ ಆತ್ಮಹತ್ಯೆ ನಿರ್ಧಾರಕ್ಕೆ ಬರಬಾರದು ಎಂದರು.

ನೆಲದನಿ ಬಳಗ ಅಧ್ಯಕ್ಷ ಲಂಕೇಶ್‌ ಮಂಗಲ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹದಿಹರಯದ ವಯಸ್ಸಿನವರಲ್ಲಿ ಆತ್ಮಹತ್ಯೆಗಳು ಕಡಿಮೆಯಾಗಿವೆ, ರೈತರ ಆತ್ಮಹತ್ಯೆಗಳು ಅಧಿಕವಾಗಿವೆ, ಹದಿಹರಯದವರ ಮನಸ್ಸು ಸೂಕ್ಷ್ಮವಾಗಿರುತ್ತದೆ, ದುಡುಕಿನ ನಿರ್ಧಾರಗಳು ಆತ್ಮಹತ್ಯೆಗೆ ದಾರಿಯಾಗಿ ಬಿಡುತ್ತವೆ, ಯಾವತ್ತೂ ಆತುರದ ನಿರ್ಧಾರಕ್ಕೆ ಬರಬಾರದು ಎಂದು ಸಲಹೆ ನೀಡಿದರು.

nudikarantaka.com

ಎನ್.ಎಸ್.ಎಸ್.ಘಟಕದ ವಿದ್ಯಾರ್ಥಿಗಳು ಸಾಮಾಜಿಕ ಪಿಡುಗುಗಳನ್ನು ಎದುರಿಸಿ ಪರಿಹಾರ ನೀಡುವ, ಸ್ಥೈರ್ಯ ತುಂಬುವ ಕೇಂದ್ರವಾಗಿರಬೇಕು. ಇಂತಹ ವಿದ್ಯಾರ್ಥಿಗಳೆ ಆತ್ಮಹತ್ಯೆಗೆ ಒಳಗಾಗುವುದು ಸಮಾಜಕ್ಕೆ ಆಗುವ  ನಷ್ಟವಾಗುತ್ತದೆ ಎಂಬುದನ್ನು ಅರಿಯಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ದಿ.ಕು.ಶಾರದಾ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಿದರು.

ಕಾರ‍್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಆರ್.ದಶರಥ, ಎನ್.ಎಸ್.ಎಸ್. ಕಾರ‍್ಯಕ್ರಮಾಧಿಕಾರಿ ಡಾ.ಕೆಂಪಮ್ಮ, ಡಾ. ಶಿವರಾಜು, ಪ್ರಾಧ್ಯಾಪಕ ರವೀಶ್, ಉಪನ್ಯಾಸಕರ ವೃಂದ ಸೇರಿದಂತೆ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ