Monday, November 23, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಕ್ರಿಶ್ಚಿಯನ್ ಕಾಲೋನಿಯ ಬೆಸ್ಕಾಂ ಉದ್ಯೋಗಿ ದೀಪಕ್ ನೇಣು ಬಿಗಿದು ಆತ್ಮಹತ್ಯೆ

ಮಂಡ್ಯದ ಸುಭಾಷ್ ನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿ ಬೆಸ್ಕಾಂ ಉದ್ಯೋಗಿ ದೀಪಕ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಚನ್ನಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದೀಪಕ್ (33 ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಮೂಲತಃ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸಿಂಗನಲ್ಲೂರು ಗ್ರಾಮದ ನಿವೃತ್ತ ಪ್ರಾಧ್ಯಾಪಕ ಸುಂದರ್ ರವರ ಪುತ್ರ ದೀಪಕ್, ಬೆಸ್ಕಾಂನಲ್ಲಿ ಪ್ರಥಮ ದರ್ಜೆ ಗುಮಾಸ್ತರಾಗಿದ್ದ ಕೆಲಸ ಮಾಡುತ್ತಿದ್ದರು. ಇವರ ಪತ್ನಿ ಪ್ರಿಯಾ ಕೂಡ ಚೆಸ್ಕಾಂನ ಮಂಡ್ಯ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು ತಿಳಿದು ಬಂದಿದೆ. ದೀಪಕ್ ಗೂ ಕೂಡ ಮಂಡ್ಯಕ್ಕೆ ವರ್ಗಾವಣೆಗೊಂಡಿತ್ತು. ಆದರೆ ಕರ್ತವ್ಯಕ್ಕೆ ನಿಯೋಜನಗೊಂಡಿರಲಿಲ್ಲ.

ದಂಪತಿಗೆ ಒಂದು ವರ್ಷದೊಳಗಿನ ಮಗು ಇದೆ. ಕ್ರಿಶ್ಚಿಯನ್ ಕಾಲೋನಿ ಆರನೇ ಕ್ರಾಸ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪತ್ನಿ ಜೊತೆ ಕಳೆದ ರಾತ್ರಿ ಕೊಠಡಿಯಲ್ಲಿ ಮಲಗಿದ್ದ ಈತ ಮಧ್ಯರಾತ್ರಿ ಸಮಯದಲ್ಲಿ ಹಾಲ್ ಗೆ ಬಂದು ಮಗುವಿನ ತೊಟ್ಟಿಲು ತೂಗಲು ಕಟ್ಟಿದ್ದ ಹಗ್ಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ

ಪತ್ನಿಯ ಕಿರುಕುಳ

ದೀಪಕ್ ಡೆತ್ ನೋಟೊಂದನ್ನು ಬರೆದಿಟ್ಟಿದ್ದು, ಇದರಲ್ಲಿ ತನ್ನ ಪತ್ನಿ ಪ್ರಿಯಾ ನೀಡುತ್ತಿದ್ದ ಮಾನಸಿಕ ಹಾಗೂ ದೈಹಿಕ ಕಿರುಕುಳವೇ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಬರೆದಿದ್ದಾರೆಂದು ತಿಳಿದು ಬಂದಿದೆ. ಶವವನ್ನು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಇಡಲಾಗಿದ್ದು, ಮಂಡ್ಯ ಪಶ್ಚಿಮ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ