Sunday, November 22, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ : ನಿಖಿಲ್ ಕುಮಾರಸ್ವಾಮಿ

2024ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲ್ಲ. ಮಂಡ್ಯದಿಂದ ನಮ್ಮ ಕಾರ್ಯಕರ್ತನೋರ್ವನನ್ನು ಸ್ಪರ್ಧೆ ಮಾಡಿಸುತ್ತೇನೆ. ಕಾರ್ಯಕರ್ತನನ್ನು ನಾವೆಲ್ಲರೂ ಸೇರಿ ಗೆಲ್ಲಿಸುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಮಂಡ್ಯನಗರದ ಬಂದೀಗೌಡ ಬಡಾವಣೆಯಲ್ಲಿ ನೂತನ ಜೆಡಿಎಸ್ ಕಚೇರಿಯನ್ನು ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಚುನಾವಣೆಗಳಲ್ಲಿ ಮಂಡ್ಯದಿಂದ ಸ್ಪರ್ಧೆ ಇಲ್ಲ, ನಾನು ಸದ್ಯ ರಾಮನಗರದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಜನರ ಇಚ್ಛೆಯಂತೆ ನಾನು ರಾಮನಗರದಲ್ಲಿ‌ ಸ್ಪರ್ಧೆ ಮಾಡ್ತಾ ಇದೀನಿ. ಮಂಡ್ಯದಲ್ಲೂ‌ ಜನರ ಇಚ್ಛೆ ಇದೆ. ಮಂಡ್ಯದ ಜನರಿಗೆ ನಾನು ಅಭಾರಿಯಾಗಿದ್ದೇನೆ ಎಂದರು.

ನಿಖಿಲ್ ಇಮ್ಮೇಚುರ್ ಎಂದಿದ್ದ ಸಂಸದೆ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆ ಮಹಾತಾಯಿ ಬಗ್ಗೆ ನಾನು ಎಂದೂ ಮಾತನಾಡಲ್ಲ. ಈ‌ ಹಿಂದೆ ಚುನಾವಣೆಯಲ್ಲೂ ನಾನು ಮಾತನಾಡಿಲ್ಲ. ಈಗಲೂ ಸಹ ಅವರ ಬಗ್ಗೆ ನಾನು ಮಾತನಾಡಲ್ಲ ಎಂದು ತಿಳಿಸಿದರು.

ರಮ್ಯಾ ಸ್ಪರ್ಧೆ ಇಲ್ಲ 

ಚನ್ನಪಟ್ಟಣದಿಂದ ರಮ್ಯಾ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಚನ್ನಪಟ್ಟಣದಿಂದ ರಮ್ಯಾ ಸ್ಪರ್ಧೆ ಎನ್ನುವುದು ಮಾಧ್ಯಮಗಳ ಸೃಷ್ಟಿ. ಸಿನಿಮಾ ರಂಗದಲ್ಲಿ ರಮ್ಯಾ ಅವರು ನನಗೆ ಆತ್ಮೀಯರು. ನನ್ನ ಪ್ರಕಾರ ಅವರು ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಲ್ಲ. ಇದು ಕೇವಲ ಸೃಷ್ಟಿ ಅಷ್ಟೇ ಎಂದರು.

ನೀವು ಆ ಸಂಬಂಧ ರಮ್ಯಾ ಜೊತೆ ಮಾತನಾಡಿದ್ರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಸಿದ ಅವರು, ರಮ್ಯಾ ನಡುವೆ ಒಳ್ಳೆ ಬಾಂಡಿಂಗ್ ಇದೆ. ಸಿನಿಮಾ ಬಿಟ್ಟು ಬೇರೆ ವಿಚಾರ ನಾವು ಮಾತಾಡಲ್ಲ‌.

ಚನ್ನಪಟ್ಟಣ ಚರ್ಚೆ ಸಂಬಂಧವು ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ