ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಟಿಪ್ಪುವಿನ ರೀತಿ ಹೊಡೆದು ಹಾಕಬೇಕು ಎಂದು ಸಚಿವ ಆಶ್ವಥ್ ನಾರಾಯಣ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಡ್ಯದ ಸಾತನೂರು ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಯಲ್ಲಿ ಮಾತನಾಡುತ್ತ, ನಿಮಗೆ ಸಾವರ್ಕರ್ ಬೇಕಾ…? ಟಿಪ್ಪು..ಬೇಕಾ? ನೀವೆ ತೀರ್ಮಾನಿಸಿ, ಟಿಪ್ಪುವಿನ ಜಾಗಕ್ಕೆ ಮಾಜಿ ಸಿ.ಎಂ. ಸಿದ್ದರಾಮಯ್ಯನವರು ಬಂದು ಬಿಡ್ತಾರೆ, ಉರೀಗೌಡ ನಂಜೇಗೌಡ ಏನ್ ಮಾಡಿದರು ಟಿಪ್ಪುವಿಗೆ, ಅದೇ ರೀತಿ ಸಿದ್ದರಾಮಯ್ಯವರನ್ನು ಹೊಡೆದು ಹಾಕಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಟಿಪ್ಪುವನ್ನು ಹೊಡೆದುಹಾಕಿದಂತೆ ನನ್ನನ್ನೂ ಹೊಡೆದುಹಾಕಬೇಕು ಎಂದು ಸಚಿವ @drashwathcn ಜನರಿಗೆ ಕರೆನೀಡಿದ್ದಾರೆ. ಜನರನ್ನು ಯಾಕೆ ಪ್ರಚೋದಿಸುತ್ತೀರಿ ಸಚಿವರೇ? ನೀವೇ ಕೋವಿ ಹಿಡಿದುಕೊಂಡು ಬಂದು ಬಿಡಿ. 1/4
— Siddaramaiah (@siddaramaiah) February 15, 2023
“>
ಈ ಬಗ್ಗೆ ಮಾಜಿ ಸಿ.ಎಂ. ಸಿದ್ದರಾಮಯ್ಯ ಟ್ವೀಟ್ ಮಾಡಿ, ಟಿಪ್ಪುವನ್ನು ಹೊಡೆದು ಹಾಕಿದಂತೆ ನನ್ನನ್ನೂ ಹೊಡೆದುಹಾಕಬೇಕು ಎಂದು ಸಚಿವ ಜನರಿಗೆ ಕರೆ ನೀಡಿದ್ದಾರೆ. ಜನರನ್ನು ಯಾಕೆ ಪ್ರಚೋದಿಸುತ್ತೀರಿ ಸಚಿವರೇ? ನೀವೇ ಕೋವಿ ಹಿಡಿದುಕೊಂಡು ಬಂದು ಬಿಡಿ ಎಂದು ತಿಳಿಸಿದ್ದಾರೆ.
ನನ್ನ ಹತ್ಯೆಗೆ ಸಚಿವ ಆಶ್ವಥ್ ನಾರಾಯಣ್ ಕೊಟ್ಟ ಕರೆಯಿಂದ ನನಗೇನು ಆಶ್ಚರ್ಯವಾಗಿಲ್ಲ. ಗಾಂಧೀಜಿಯನ್ನು ಕೊಂದವರನ್ನೇ ಆರಾಧಿಸುತ್ತಿರುವ ಪಕ್ಷದ ನಾಯಕರಿಂದ ಕೊಲೆಗಡುಕತನವಲ್ಲದೆ, ಪ್ರೀತಿ, ಕರುಣೆ, ಸ್ನೇಹವನ್ನು ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಒಬ್ಬ ಸಚಿವ ಈ ರೀತಿ ಬಹಿರಂಗವಾಗಿ ಹತ್ಯೆಗೆ ಕರೆ ನೀಡಿದ ನಂತರವೂ ಅವರ ವಿರುದ್ಧ ಪೊಲೀಸರು ಕ್ರಮಕೈಗೊಂಡಿಲ್ಲ ಎಂದಾದರೆ ಈ ರಾಜ್ಯವನ್ನು ಆಳುವವರು ಜೀವಂತವಾಗಿಲ್ಲ, ಸರ್ಕಾರ ಸತ್ತುಹೋಗಿದೆ ಎಂದೇ ಲೆಕ್ಕ ಎಂದು ಸರ್ಕಾರವನ್ನು ಟೀಕಿಸಿದ್ದಾರೆ.
ಸಚಿವ ಅವರು ನೀಡಿರುವ ಹತ್ಯೆಯ ಕರೆಯ ಬಗ್ಗೆ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿ ಅವರ ಪ್ರತಿಕ್ರಿಯೆ ಏನು ಎನ್ನುವುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ. ಈ ರೀತಿ ಇರುವುದು ಮೌನ ಸಮ್ಮತಿಯ ಲಕ್ಷಣವೇ? ಎಂದು ಪ್ರಶ್ನಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾಜಿ ಸಿ.ಎಂ. ಸಿದ್ದರಾಮಯ್ಯ ಈ ಬಗ್ಗೆ ಮಾತನಾಡುತ್ತಾ ಅಶ್ವಥ್ ನಾರಾಯಣ್ ನೀವು ಮನುಷ್ಯರೋ… ರಾಕ್ಷಸಕರೋ… , ಟಿಪ್ಪು, ಬಸವಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಿಖ್ಖರನ್ನು, ಬೌದ್ದರನ್ನು ವಾಲ್ಮೀಕಿ, ಹಿಂದೂ, ಮುಸ್ಮಿಂ, ಕ್ರೈಸ್ತ ಎಲ್ಲರನ್ನು, ಎಲ್ಲಾ ಧರ್ಮವನ್ನು ಪ್ರೀತಿಸುತ್ತೇನೆ ಎಂದರು.
ತಮ್ಮ ಪಕ್ಷದ ಹಿರಿಯ ನಾಯಕನ ಬಗ್ಗೆ ಅಶ್ವಥ್ ನಾರಾಯಣ್ ಆಡಿರೋ ಮಾತುಗಳಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಕೂಡಾ ತಿರುಗೇಟು ನೀಡಿದ್ದಾರೆ. ಬಿಜೆಪಿ ನಾಯಕ ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಅಶ್ವಥ್ ನಾರಾಯಣ್ ಮಾನಸಿಕ ಖಿನ್ನತೆ ಮತ್ತು ಹತಾಸೆಯಿಂದ ಬಳಲುತ್ತಿದ್ದಾರೆ. ಅವರು ಹೀಗೆ ಮಾತನಾಡೋದಕ್ಕೆ ಅದೇ ಕಾರಣ. ಅವರಿಗೆ ಜನರ ಹಿತ ಬೇಕಿಲ್ಲ.
ಸೈದ್ಧಾಂತಿಕ ಭಿನ್ನಾಭಿಪ್ರಾಯ ಏನೇ ಇರಲಿ.. ರಾಜಕೀಯ ವೈಪೋಟಿಯೂ ಇರಲಿ.. ರಾಜಕೀಯ ಏಟು-ತಿರುಗೇಟು ನಡೆಯುತ್ತಿರಲಿ.. ಆದ್ರೆ ಅದೇ ರಾಜಕೀಯ ದ್ವೇಷಕ್ಕಾಗಿ ಹೊಡೆದು ಹಾಕ್ಕೇಕು ಎಂಬ ಹಂತಕ್ಕೆ ಯಾವ ರಾಜಕಾರಣಿಯೂ ಇಳಿಯಬಾರದು ಎನ್ನುವುದು ಜನ ಸಾಮಾನ್ಯರ ಮಾತಾಗಿದೆ.




