ವರದಿ : ನ.ಲಿ.ಕೃಷ್ಣ ಸಾಮಾಜಿಕ ಕಾರ್ಯಕರ್ತರು.
ಮಂಡ್ಯದ ಟ್ರಾಫಿಕ್ ಪೊಲೀಸರ ವಿರುದ್ದ ಎಸ್ ಪಿ ಗೆ ದೂರು
ಸಾಕ್ಷಿಯಾಗಿ ನನ್ನ ಹಾಗೂ ಟ್ರಾಫಿಕ್ ಪೊಲೀಸ್ ರಾಜು ನಡುವಿನ ಸಂಭಾಷಣೆಯ ಧ್ವನಿ ಸುರುಳಿ
ಎರಡು ನೂರು ಲಂಚ ಪಡೆದ ಟ್ರಾಫಿಕ್ ಪೊಲೀಸ್ ರಾಜು : ಆನಂದ್ ಆರೋಪ
ಸಂಚಾರಿ ನಿಯಾಮವಳಿಗಳ ಪಾಲನೆ ಮಾಡುತ್ತಾ ಸಂಚಾರಿ ಸುವ್ಯವಸ್ಥೆಗೆ ಶ್ರಮಿಸಬೇಕಾದ ಪೊಲೀಸರು ಪ್ರಯಾಣಿಕರಿಂದ ಹಣ ಸುಲಿಗೆ ಮಾಡುತ್ತಾ ಸರ್ಕಾರಕ್ಕೆ ವಂಚಿಸುತ್ತಿದ್ದಾರೆ ಎಂದು ಆರ್. ಟಿ. ಐ. ಕಾರ್ಯಕರ್ತ ಮದ್ದೂರು ಆನಂದ್ ಎಸ್ಪಿ ಯವರಿಗೆ ದೂರು ಸಲ್ಲಿಸಿದ್ದಾರೆ.
ದಿ 13-2-2022 ರಂದು ಮದ್ಯಾಹ್ನ 12: 30 ರ ಸಮಯದಲ್ಲಿ ನಂದಾ ಸರ್ಕಲ್ ಬಳಿ ಮದ್ದೂರಿನಿಂದ ಮಂಡ್ಯಕ್ಕೆ ಹೋಗುವಾಗ ಸಂಚಾರಿ ಪೊಲೀಸ್ ರಾಜು ಮತ್ತಿತರು ನನ್ನ ಗಾಡಿ ತಡೆದು ದಾಖಲಾತಿಗಳನ್ನು ಕೇಳಿದ್ದರ ಮೇರೆಗೆ ನಾನು ನನ್ನಲ್ಲಿದ್ದ ಎಲ್ಲಾ ದಾಖಲಾತಿಗಳನ್ನು ನೀಡಿ ಕಣ್ ತಪ್ಪಿನಿಂದ ಡಿಎಲ್ ಕೊಂಡೊಯ್ಯದ ಕಾರಣ ಗಾಡಿ ನಿಲ್ಲಿಸಿ ಮನೆಗೆ ಹೋಗಿ ಡಿಎಲ್ ತರುವುದಾಗಿ ಹೇಳಿದರು ಕೂಡಾ ಕೇಳದೆ, ನನ್ನನ್ನು ಹಣ ನೀಡಲು ಒತ್ತಾಯಿಸಿ, ನನ್ನಿಂದ ಎರಡು ನೂರು ಪಡೆದ ಟ್ರಾಪಿಕ್ ಪೊಲೀಸ್ ರಾಜು ರವರು ಹಣಕ್ಕೆ ರಸೀದಿ ನೀಡದೆ ನನಗೆ ಹಾಗೂ ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ಆನಂದ್ ದೂರಿದ್ದಾರೆ.
ಈ ಕುರಿತು ಎಸ್ಪಿಯವರಿಗೆ ಹಾಗು ಅಡಿಷನಲ್ ಎಸ್ಪಿ ಅವರಿಗೆ ದೂರು ಸಲ್ಲಿಸಿರುವ ಆನಂದ್ ಅವರು ಆ ದಿನ ಮಂಡ್ಯದ ನಂದಾ ಸರ್ಕಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಚಾರಿ ಪೊಲೀಸ್ ರಾಜು ಹಾಗು ಮೇಲಾಧಿಕಾರಿ ಮತ್ತು ಸಿಬ್ಬಂದಿ ಒಳಗೊಂಡಂತೆ, ಒಟ್ಟು ತಂಡದ ಮೇಲೆ ಲಂಚ ವಸೂಲಿ ಅಧಿಕಾರ ದುರುಪಯೋಗ ಅಧಿಕಾರ ನಿರ್ಲಕ್ಷ್ಯ ಕುರಿತು ಕಾನೂನು ಕ್ರಮ ಜರುಗಿಸಬೇಕು ಎಂದು ಆನಂದ್ ಆಗ್ರಹಿಸಿದ್ದಾರೆ.

ಆ ದಿನ ನನ್ನಿಂದಷ್ಟೆ ಅಲ್ಲದೆ ಇತರೆ ಪ್ರಯಾಣಿಕರಿಂದಲೂ ಇದೆ ಮಾದರಿಯಲ್ಲಿ ರಶೀದಿ ನೀಡದೆ ಲಂಚ ವಸೂಲಿಸಲಾಗಿದೆ ಎಂದಿರುವ ಆನಂದ್ ಈ ಕೂಡಲೆ ಈ ಪೊಲೀಸರ ಮೇಲೆಶಿಸ್ತುಕ್ರಮ ಜರುಗಿಸಬೇಕೆಂದು ಮತ್ತು ನನ್ನಿಂದ (ಆನಂದ್) ಸಂಚಾರಿ ಪೊಲೀಸ್ ರಾಜು ಲಂಚ ಪಡೆದಿರುವುದಕ್ಕೆ ಸಾಕ್ಷಿಯಾಗಿ ನನ್ನ ಹಾಗು ರಾಜು ನಡುವಿನ ಸಂಭಾಷಣೆಯ ಧ್ವನಿ ಸುರುಳಿ ದೂರಿನೊಂದಿಗೆ ಎಸ್ಪಿ ಅವರಿಗೆ ನೀಡಿರುವುದಾಗಿ ತಿಳಿಸಿದ್ದಾರೆ.




