ಮಂಡ್ಯ ನಗರದ ಸದ್ವಿದ್ಯಾ ಚಿಲ್ಡ್ರನ್ ಶಾಲೆಯಲ್ಲಿ ಕರಾಟೆ ಬೆಲ್ಟ್ ಪರೀಕ್ಷೆ ಹಾಗೂ ತರಬೇತಿ ಶಿಬಿರವನ್ನು ಇಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಸಂಸ್ಥೆಯ ಅಧ್ಯಕ್ಷರಾದ ಹರೀಶ್ ಕುಮಾರ್ ಅವರು ಉದ್ಘಾಟಿಸಿದರು. ಸಂಸ್ಥೆಯ ಟ್ರಸ್ಟಿಗಳಾದ ಶ್ರೀ ಪಣಿ ಮಾಲ ಸುನಿಲ್ ರವರು ಕರಾಟೆ ಬೆಲ್ಟ್ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬೆಲ್ಟ್ ಹಾಗೂ ಪ್ರಮಾಣ ಪತ್ರವನ್ನು ವಿವರಿಸಿದರು.
ಈ ಪರೀಕ್ಷೆಯಲ್ಲಿ ಒಂದನೇ ತರಗತಿಯಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತರಬೇತಿ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ಆತ್ಮ ರಕ್ಷಣಾ ಕಲೆ ಹಾಗೂ ಸ್ಪೋರ್ಟ್ಸ್ ಕರಾಟೆ ಫೈಟ್ ಹೇಳಿಕೊಡಲಾಯಿತು.
ಸಮಾರಂಭದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ಹಾಗೂ ಬೆಲ್ಟ್ ಹಾಗೂ ಪ್ರಮಾಣ ಪತ್ರ ನೀಡಲಾಯಿತು. ತರಬೇತಿಯಲ್ಲಿ ವಿವಿಧ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯನಿಯಾದ ಗೀತಾ ರವರು ಕರಾಟೆ ತರಬೇತುದಾರರಾದ ಕರಾಟೆ ಲೋಕೇಶ್ ಮೊದಲಿಯಾರ್. ತರಬೇತುದಾರರಾದ ಬಸವಸಾಗರ್ , ಹಂಸಪ್ರಿಯಾ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.




