Thursday, September 19, 2024

ಪ್ರಾಯೋಗಿಕ ಆವೃತ್ತಿ

ಫೆ.27ರಂದು ಮಕ್ಕಳಿಗೆ ಫ್ಯಾಷನ್ ಶೋ

ವಿಶ್ವಜ್ಞಾನಿ ಸೇವಾ ಟ್ರಸ್ಟ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಫೆ.27ರಂದು ಸಂಜೆ 4 ಗಂಟೆಗೆ ಮಂಡ್ಯನಗರದ ಕಲಾಮಂದಿರದಲ್ಲಿ ಮಕ್ಕಳಿಗೆ ಫ್ಯಾಷನ್ ಶೋ ಮತ್ತು ಮಿಸ್ಟರ್ ಅಂಡ್ ಮಿಸ್ ಕರ್ನಾಟಕ 2023 ಗ್ರಾಂಡ್ ಫಿನಾಲೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಗೌರವಾಧ್ಯಕ್ಷ ತಾಳಶಾಸನ ಮೋಹನ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಕಾಶ ವಂಚಿತ ಅಂಗನವಾಡಿ ಮಕ್ಕಳಿಗೆ ಮತ್ತು ವಯಸ್ಕ ಯುವಕ ಯುವತಿಯರಿಗೆ ಸ್ಪರ್ಧಾತ್ಮಕ ವ್ಯವಸ್ಥೆಯಲ್ಲಿ ಖಾಸಗಿ ಶಾಲೆಯ ಮಕ್ಕಳಿಗೆ ಸರಿಸಮನಾಗಿ ಎಲ್ಲಾ ಕ್ಷೇತ್ರದಲ್ಲೂ ಸಮಾಜದ ಮುಖ್ಯವಾಹಿನಿಗೆ ಮಕ್ಕಳು ಬರಬೇಕು ಎಂಬ ಉದ್ದೇಶದಿಂದ ಫ್ಯಾಷನ್ ಬರ್ಡ್ಸ್ ಮಾಡಲ್ ಮ್ಯಾನೆಜ್‌ಮೆಂಟ್ ಜತೆಗೂಡಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಅಸಕ್ತಿಯುಳ್ಳ ಮಕ್ಕಳು ಮಾತ್ರ ಉಚಿತವಾಗಿ ಫೆ.25ರೊಳಗೆ -ಹೆಸರು ನೊಂದಾಯಿಸಿಕೊಳ್ಳಲು ದೂ. 9742004434, 9164392640 9164676650 ಕ್ಕೆ ಕರೆ ಮಾಡಬಹುದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ವಿಶ್ವಜ್ಞಾನಿ ಸೇವಾ ಟ್ರಸ್ಟಿನ ವ್ಯವಸ್ಥಾಪಕ ನಿರ್ದೇಶಕಿ ಪವಿತ್ರ, ಫ್ಯಾಷನ ಬರ್ಡ್ಸ್  ಮಾಡೆಲ್ ಮ್ಯಾನೇಜ್ ಮೆಂಟ್ ಸಂಯೋಜಕರಾದ ಸುದೀಪ್, ಸುನಿತಾ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!