ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಪುತ್ರ ಚಿತ್ರನಟ ಸಚಿನ್ ಚಲುವರಾಯಸ್ವಾಮಿ ಅವರು ಜಿಲ್ಲೆಯ ಭವಿಷ್ಯದ ಯುವ ನಾಯಕರಾಗಿ ಹೊರಹೊಮ್ಮಲಿ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಹೆಚ್.ಬಿ.ವಿಜಯ್ ಕುಮಾರ್ ಆಶಿಸಿದರು.
ಚಿತ್ರನಟ ಸಚಿನ್ ಚಲುವರಾಯ ಸ್ವಾಮಿ ಅವರ ಹುಟ್ಟು ಹಬ್ಬದ ಅಂಗವಾಗಿ ನಗರದ ಮಿಮ್ಸ್ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಅವರು ಮಾತನಾಡಿದರು.
ಚಿತ್ರನಟ ಸಚಿನ್ ಚಲುವರಾಯ ಸ್ವಾಮಿ ಅವರಿಗೆ ಭಗವಂತ ಆಯಸ್ಸು ಕೊಟ್ಟು ಕರುಣಿಸುವ ಮೂಲಕ ಚಿತ್ರನಟನಾಗಿ ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದರು.
ಮುಡಾ ಅಧ್ಯಕ್ಷ ನಯೀಮ್ ಮಾತನಾಡಿ , ಸಚಿನ್ ಚಲುವರಾಯಸ್ವಾಮಿ ಅವರಿಗೆ ಚಲನಚಿತ್ರ ರಂಗದಲ್ಲಿ ದೇವರು ಹೆಚ್ಚಿನ ಶಕ್ತಿ ಆರೋಗ್ಯ ಕೊಟ್ಟು ಕಾಪಾಡಲಿ ಎಂದರು. ಮಂಡ್ಯ ಜಿಲ್ಲೆಯ ಯುವಕರಿಗೆ ತಮ್ಮ ಕೈಲಾದ ನೆರವು, ಅಭಿವೃದ್ದಿಗೆ ಶ್ರಮಿಸಿ ಶಕ್ತಿ ತುಂಬುವ ಕೆಲಸ ಮಾಡುತಿದ್ದಾರೆ, ಇದೆ ರೀತಿ ಸಮಾಜಮುಖಿಯಾಗಿ ಜನ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸಲಿ ನಮ್ಮ ಮಂಡ್ಯ ಜಿಲ್ಲೆಯ ಎಲ್ಲ ಯುವ ಸಮೂಹ ಅವರ ಪರ ಇರುತ್ತೇವೆ ಎಂದು ಶುಭಕೋರಿದರು.
ಈ ಸಂದರ್ಭದಲ್ಲಿ ಮಂಡ್ಯ ತಾಲ್ಲೂಕು ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುನೀಲ್ ಕುಮಾರ್,ನಿತಿನ್ ಸೇರಿದಂತೆ ಯುವ ಕಾಂಗ್ರೆಸ್ ಸಮಿತಿಯ ಮುಖಂಡರುಗಳು ಹಾಜರಿದ್ದರು.




