ಡಾ. ಭೀಮ್‌ರಾವ್ ಯಶವಂತರಾವ್ ಅಂಬೇಡ್ಕರ್ (ಡಾ. ಅಂಬೇಡ್ಕರ್ ರವರ ಮೊಮ್ಮಗ) ಪ್ರಥಮ ಬಾರಿಗೆ ಮೈಸೂರಿಗೆ ಆಗಮನ
ರಾಜ್ಯ ಮಟ್ಟದ ಬೌದ್ಧ ಮಹಾ ಸಮ್ಮೇಳನವು ಮೈಸೂರಿನ ಲಲಿತ ಮಹಲ್ ಅರಮನೆ ಮೈದಾನದಲ್ಲಿ ಇದೇ ಫೆ.26ರಂದ ನಡೆಯಲಿದೆ ಎಂದು ಮಂಡ್ಯ ಭಾರತೀಯ ಬೌದ್ಧ ಮಹಾಸಭಾ ಆಧ್ಯಕ್ಷ ಬಿ. ಅಂದಾನಿಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಉಪಾಸಕ-ಉಪಾಸಕಿಯರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಈ ಸಭೆಯ ಘನ ಅಧ್ಯಕ್ಷತೆಯನ್ನು ಬಿ.ಎಸ್.ಐ ಸಂಸ್ಥೆಯ ರಾಷ್ಟ್ರೀಯ ಕಾರ್ಯಧ್ಯಕ್ಷರಾದ ಗೌರವಾನ್ವಿತ

ಆಯುಷ್ಮಾನ್ ಡಾ. ಭೀಮ್‌ರಾವ್ ಯಶವಂತರಾವ್ ಅಂಬೇಡ್ಕರ್ (ಡಾ. ಅಂಬೇಡ್ಕರ್ ರವರ ಮೊಮ್ಮಗ) ವಹಿಸಿಲಿದ್ದಾರೆ. ಜೊತೆಗೆ ಬಿ.ಎಸ್.ಐ ಸಂಸ್ಥೆಯ ಟ್ರಸ್ಟಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವಿಶ್ವಪ್ರಸಿದ್ಧ ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಪ್ರಥಮ ಬಾರಿಗೆ, ಬಾಬಾ ಸಾಹೇಬ್ ಅಂಬೇಡ್ಕರ್ ಸಂಸ್ಥಾಪಿತ ಭಾರತೀಯ ಬೌದ್ಧ ಮಹಾಸಭಾದ ಕರ್ನಾಟಕ ರಾಜ್ಯ ಶಾಖೆ, ಮೈಸೂರು, ಜಿಲ್ಲಾ ಶಾಖೆ ಮತ್ತು ಬೌದ್ಧ ಸಂಘಟನೆಗಳ ಒಕ್ಕೂಟ, ಎಲ್ಲಾ ದಲಿತ ಸಂಘಟನೆಗಳ ಸಹಕಾರದೊಂದಿಗೆ ಹಾಗೂ ಎಲ್ಲಾ ಪ್ರಗತಿಪರ ಸಂಘಟನೆಗಳ, ಸಹಯೋಗದೊಂದಿಗೆ ಈ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆಯನ್ನು ಡಾ.ಭೀಮ್ ರಾವ್ ಯಶವಂತರಾವ್ ಅಂಬೇಡ್ಕರ್ ಮಾಡುವ ಮೂಲಕ ಕಾರ್ಯಕ್ರಮವು ಬೆಳಗ್ಗೆ 9.30ಕ್ಕೆ ಪುರಭವನ (ಟೌನ್ ಹಾಲ್) ಮೈಸೂರಿನಲ್ಲಿ ಜರುಗಲಿದೆ. ನಂತರ ಧಮ್ಮ ನಡಿಗೆ ಪಥ ಸಂಚಲನವು ರಾಷ್ಟ್ರೀಯ ಹಾಗೂ ರಾಜ್ಯದ ಸಮತಾ ಸೈನಿಕ ದಳ (SSD)ದಿಂದ ನಡೆಯಲಿದೆ. ಪಥ ಸಂಚಲನದ ನೇತೃತ್ವವನ್ನು ಎಸ್.ಕೆ.ಭಂಡಾರೆ, ಅಶೋಕ್ ಕದಮ್, ಡಿ.ಎನ್.ಆಚಾರ್ಯ, ಜಗನ್ನಾಥ್ ಕಾಂಬಳೆ ಹಾಗೂ ಪೂಜ್ಯ ಭಿಕ್ಖು ಸಂಘದ ನೇತೃತ್ವದಲ್ಲಿ ನಡೆಯಲಿದೆ ಎಂದು ತಿಳಿಸಿದರು. ಬೆಳಿಗ್ಗೆ 11.30 ಕ್ಕೆ ವೇದಿಕೆ ಕಾರ್ಯಕ್ರಮ: ತಿಸರಣ-ಪಂಚಶೀಲ-ಮೈತ್ರಿ ಧ್ಯಾನ ಮತ್ತು ಮುಖ್ಯ ಅತಿಥಿಗಳ ಹಾಗೂ ಅಧ್ಯಕ್ಷರ ನುಡಿಗಳನ್ನಾಡಲಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ಬುದ್ಧ ಧಮ್ಮ ಕೃತಿಗಳ ಬಿಡುಗಡೆಯ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದ ಸಲಹೆ, ಸಹಕಾರಕ್ಕಾಗಿ ಆ.ಡಾ.ಜಗನ್ನಾಥ್ ಅಧ್ಯಕ್ಷರು, ಬಿಎಸ್ಐ, ಮೈಸೂರು ಜಿಲ್ಲೆ ಮೊ.9490572550, ಆ. ಪ್ರದೀಪ್ ಕುಮಾರ್ ಎಂ. ಕಾರ್ಯದರ್ಶಿ, ಬಿಎಸ್ಐ ಮೈಸೂರು ಜಿಲ್ಲೆ ಮೊ.9740630049, ಆ. ಬಾಲಚಂದ್ರನ್ ಎಸ್. ಖಜಾಂಚಿಗಳು ಬಿಎಸ್ಐ, ಮೈಸೂರು ಜಿಲ್ಲೆ 9663178727, ಆ. ಮಲ್ಲಿಕಾರ್ಜನ ಎಸ್. ಭಾಲ್ಕೆ ರಾಜ್ಯಾಧ್ಯಕ್ಷರು, ಬಿಎಸ್ಐ 9880962200, ಆ.ಮಹೇಂದ್ರ ಜೆ.ಮಂಕಾಳೆ, ರಾಜ್ಯ ಉಪದಾಧ್ಯಕ್ಷರು, (ಪ್ರಚಾರ) 8277436475, ಆ.ಶಿವರಾಜ್ ಎಂ.ಸಿ. ರಾಜ್ಯ ಪ್ರಧಾನ ಕಾರ್ಯದಶಿ, ಬಿಎಸ್ಐ 9900694436 ಇವರನ್ನು ಸಂಪರ್ಕಿಸಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ಹೆಚ್.ಕೆ. ಚಂದ್ರಹಾಸ್, ಪ್ರಧಾನ ಕಾರ್ಯದರ್ಶಿ ಹೆಚ್.ಪಿ ನಾರಾಯಣಸ್ವಾಮಿ, ಸಂಘಟನಾ ಕಾರ್ಯದರ್ಶಿ ಸಾನಂದ, ಚೋಕನಳ್ಳಿ ಜಯರಾಮ್, ಖಜಾಂಚಿ ಸಿದ್ದಯ್ಯ, ಸಂಘಟನೆಯ ಪೋಷಕರಾದ ಸಿದ್ದಯ್ಯ, ಉಪಸ್ಥಿತರಿದ್ದರು.




