Thursday, November 19, 2026

ಪ್ರಾಯೋಗಿಕ ಆವೃತ್ತಿ

KSOU : ಪ್ರಥಮ ಬಾರಿಗೆ ದ್ವಿ ಪದವಿಗೆ ಅವಕಾಶ: ಪ್ರೊ.ಶರಣಪ್ಪ ವಿ.ಹಲಸೆ

ಎಲ್ಲರಿಗೂ ಉನ್ನತ ಶಿಕ್ಷಣ ಸಿಗಬೇಕೆನ್ನುವ ಉದ್ದೇಶ ದ ಉದ್ದೇಶವಾಗಿದ್ದು, ಯು.ಜಿ.ಸಿ. ನಿಯಮಾವಳಿಯಂತೆ ಈ ವರ್ಷದಿಂದ ಪ್ರಥಮ ಬಾರಿಗೆ ದ್ವಿಪದವಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ತಿಳಿಸಿದರು.

ಮಂಡ್ಯ ನಗರದ ಕೆರೆ ಅಂಗಳದ ವಿವೇಕಾನಂದ ಬಡಾವಣೆಯಲ್ಲಿರುವ  KSOU  ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ದ್ವಿ ಪದವಿ ಪಡೆಯುವ ಅವಕಾಶ ಕಲ್ಪಿಸಲಾಗಿದ್ದು, ಪದವಿ ಪಡೆಯಲಿಚ್ಚಿಸುವವರು ಇದರು ಸದುಪಯೋಗ ಪಡೆದು ಕೊಳ್ಳಬೇಕು ಎಂದರು.

ಕೆಎಸ್‌ಓಯುನಲ್ಲಿ ನಾನಾ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ಆಟೋ/ಕ್ಯಾಬ್ ಚಾಲಕರು, ಅವರ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ಶೇ.30ರಷ್ಟು ರಿಯಾಯಿತಿ ಸಿಗಲಿದೆ. ಕೆಎಸ್‌ಆರ್‌ಟಿಸಿ ಚಾಲಕರಿಗೆ ಶೇ.25ರಷ್ಟು ವಿನಾಯಿತಿ ನೀಡಲಾಗುತ್ತದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಮೃತಪಟ್ಟಿರುವ ಪೋಷಕರ ಮಕ್ಕಳು, ತೃತೀಯ ಲಿಂಗಿಗಳು ಹಾಗೂ ಪೂರ್ಣವಾಗಿ ಅಂಧತ್ವ ಹೊಂದಿರುವ ವಿದ್ಯಾರ್ಥಿಗಳಿಗೆ (ಬಿ.ಎಡ್, ಎಂಬಿಎ ಹೊರತುಪಡಿಸಿ) ಪ್ರವೇಶಾತಿ ಶುಲ್ಕದಲ್ಲಿ ಶೇ.100ರಷ್ಟು ವಿನಾಯಿತಿ ಪಡೆಯಬಹುದು ಎಂದರು.

ಆನ್ ಲೈನ್ ಮುಖಾಂತರ ಈ-ಲರ್ನಿಂಗ್ ಸಾಮಾಗ್ರಿಗಳನ್ನು ಪಡೆಯುವ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ.15% ರಿಯಾಯಿತಿ ನೀಡಲಾಗಿದೆ. ಎಸ್‌ಸಿ/ಎಸ್ಟಿ ಹಾಗೂ ಓಬಿಸಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಅವಕಾಶ ಕಲ್ಪಿಸಲಾಗಿದೆ. ಎಂಬಿಎವಮತ್ತು ಹೊಸ ವಿಜ್ಞಾನ ಕೋರ್ಸುಗಳನ್ನು ಪ್ರಾರಂಭಿಸಲಾಗಿದೆ ಎಂದರು‌.

ಪ್ರವೇಶಾತಿ ಪ್ರಕ್ರಿಯೆ ಮತ್ತು ಅಂಕಪಟ್ಟಿಯು ಡಿಜಿಟಲೀಕರಣವಗಿದೆ. ಆನ್‌ಲೈನ್ ಮೂಲಕವೇ ಪ್ರವೇಶಾತಿ ಪ್ರಕ್ರಿಯೆ ನಡೆಸಲಾಗುವುದು.

KSOU ಗೆ ಅಭ್ಯರ್ಥಿಗಳ ಪ್ರವೇಶಾತಿ ಪ್ರಮಾಣ ಹೆಚ್ಚಿಸಲು ತಾವೇ ಖುದ್ದಾಗಿ ರಾಜ್ಯದ ಎಲ್ಲ KSOU ಪ್ರಾದೇಶಿಕ ಕೇಂದ್ರಗಳಿಗೆ ಭೇಟಿ ನೀಡಿ, ಪರಿಶೀಲಿಸುತ್ತಿದ್ದೇನೆ. ಪ್ರವೇಶಾತಿ ಪಡೆದಿರುವ ಹಾಗೂ ಪ್ರವೇಶ ಬಯಲು ಬರುವ ಅಭ್ಯರ್ಥಿಗಳೊಂದಿಗೆ ಸಮಾಲೋಚಿಸುತ್ತಿದ್ದೇವೆ. ವಿವಿಯ ಶೈಕ್ಷಣಿಕ ಸವಲತ್ತುಗಳು ಮತ್ತು ನವ ಮಾದರಿಯ ಪ್ರವೇಶಾತಿ ಆಯಾಮಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ ಎಂದರು.

ಪ್ರತಿ ವರ್ಷ ಕೆಎಸ್‌ಒಯು ಜನವರಿಯಿಂದ ಮಾರ್ಚ್ ಅಂತ್ಯದವರಿಗೆ ಮೊದಲ ಅವಧಿಯಲ್ಲಿ ಹಾಗೂ ಜುಲೈನಿಂದ ಸೆಪ್ಟಂಬರ್‌ವರೆಗೆ 2ನೇ ಅವಧಿಯಲ್ಲಿ ಪ್ರವೇಶಾತಿ ಪ್ರಕ್ರಿಯೆ ನಡೆಸುತ್ತಿದೆ. ಅದರಂತೆ ಜನವರಿ-ಮಾರ್ಚ್ ಅವಧಿಯ 2022-23ನೇ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ. ಈ ವರ್ಷ ಜನವರಿ-ಮಾರ್ಚ್ ಅವಧಿಯಲ್ಲಿ 12ರಿಂದ 15 ಸಾವಿರ ಅಭ್ಯರ್ಥಿಗಳ ಪ್ರವೇಶಾತಿ ನಡೆಸಲು ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಸಂಪೂರ್ಣ ಪಾರದರ್ಶಕತೆಗೆ ಅನುಗುಣವಾಗಿ ಆನ್‌ಲೈನ್ ಮೂಲಕ ಶುಲ್ಕ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿಗಳು ತಾವಿರುವ ಜಿಲ್ಲೆಯಲ್ಲೇ ಶೈಕ್ಷಣಿಕ ಪ್ರಯೋಜನ ಪಡೆಯಲು ರಾಜ್ಯದ 24 ಪ್ರಾದೇಶಿಕ ಕೇಂದ್ರಗಳಿಗೂ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಲಾಗಿದೆ. 1046 ಕಲಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಕೆಎಸ್‌ಒಯುನಲ್ಲಿ ಒಟ್ಟು 64 ಕೋರ್ಸ್ ಗಳಿಗೆ ಪ್ರವೇಶಾತಿ ನಡೆಯುತ್ತಿದೆ ಎಂದು ತಿಳಿಸಿದರು.

10 ಕೋರ್ಸ್ಗಳ ಆರಂಭಕ್ಕೆ ಚಿಂತನೆ
ಸೈಬರ್ ಸೆಕ್ಯೂರಿಟಿ, ಅರ್ಥ್ಸೈನ್ಸ್ ಬಿಎಸ್ಸಿ, ಬಯೋ ಇನ್ಪರ್ಮೇಟೀವ್, ಎಂಎಸ್‌ಡಬ್ಯ್ಲೂ ಟೂರಿಸಿಂ ಸೇರಿದಂತೆ ಹತ್ತು ಹೊಸ ಕೋರ್ಸ್ಗಳ ಆರಂಭಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಚಿಂತನೆ ನಡೆಸಿದೆ. ಶೀಘ್ರದಲ್ಲೇ ಇವುಗಳಿಗೆ ಅನುಮತಿ ಪಡೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಆಧುನಿಕ ಮತ್ತು ತಾಂತ್ರಿಕ ಶಿಕ್ಷಣ ವ್ಯವಸ್ಥೆಯು ವಿವಿಯ ಹೆಗ್ಗಳಿಕೆ. ವಿವಿಯ ಪ್ಲೇಸ್‌ಮೆಂಟ್ ಮುಖಾಂತರ ನಿಯಮಿತವಾಗಿ ಉದ್ಯೋಗ ಮೇಳ ಮೇಳಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಗೋಷ್ಠಿಯಲ್ಲಿ KSOU ರಿಜಿಸ್ಟರ್ ಪ್ರೊ.ಕೆ.ಎಲ್.ಎನ್.ಮೂರ್ತಿ, ಸ್ಟಡಿ ಸೆಂಟರ್ ಡೀನ್ ಪ್ರೊ.ರಾಮನಾಥನ್ ನಾಯ್ಡು, ಹಣಕಾಸು ಅಧಿಕಾರಿ ಡಾ.ಎ.ಖಾದರ್ ಪಾಷಾ, ಪ್ರಾದೇಶಿಕ ಕೇಂದ್ರದ ನಿರ್ದೇಶಕಿ ಆರ್.ಮಿಲನ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ