ಅಡುಗೆ ಅನಿಲ LPG (ದ್ರವೀಕೃತ ಪೆಟ್ರೋಲಿಯಂ ಅನಿಲ) ಬೆಲೆಯನ್ನು ಬುಧವಾರದಂದು ಪ್ರತಿ ಸಿಲಿಂಡರ್ಗೆ 50 ರೂ.ಗಳಷ್ಟನ್ನು ಕೇಂದ್ರದ ಬಿಜೆಪಿ ಸರ್ಕಾರ ಹೆಚ್ಚಳ ಮಾಡಿದೆ.
ಸುಮಾರು ಎಂಟು ತಿಂಗಳ ನಂತರ ದರ ಹೆಚ್ಚಳ ಮಾಡಲಾಗಿದೆ. ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳಲ್ಲಿ ಬಳಸುವ ವಾಣಿಜ್ಯ ಎಲ್ಪಿಜಿ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 350.5 ರೂ.ಗಳಷ್ಟು ಹೆಚ್ಚಿಸಲಾಗಿದೆ.
2018 ರಲ್ಲಿ ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು “ನಿರುದ್ಯೋಗಕ್ಕಿಂತ ಪಕೋಡಾ ಮಾರಾಟ ಮಾಡುವುದು ಉತ್ತಮ” ಎಂದು ಹೇಳಿದ್ದರು. ಈಗ “ವಾಣಿಜ್ಯ ಎಲ್ಪಿಜಿ ಸಿಲಿಂಡರ್ನ ಬೆಲೆ 2,118 ರೂ.ಗಳಾಗಿದ್ದು, ಪ್ರತಿ ಸಿಲಿಂಡರ್ಗೆ 350 ರೂ. ಹೆಚ್ಚಿಸಲಾಗಿದೆ. ಈಗ, ವಿದ್ಯಾವಂತ ನಿರುದ್ಯೋಗಿ ಯುವಕರು ಪಕೋಡ ಮಾಡುವುದು ಕೂಡ ಕಷ್ಟವಾಗಲಿದೆ ಎಂದು ವಿರೋಧ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ದ ಚಾಟಿ ಬೀಸಿವೆ. ಇತ್ತೀಚಿನ ಬೆಲೆ ಏರಿಕೆಯೊಂದಿಗೆ ದೇಶೀಯ ಎಲ್ಪಿಜಿ ಸಿಲಿಂಡರ್ನ ಬೆಲೆ ಪ್ರಸ್ತುತ ₹ 1,117 ಆಗಲಿದೆ.




