✍️ ಚೇತನ್ ಕಾಗೇಪುರ
ಹವಾಮಾನ ಬದಲಾವಣೆ ಎಂಬುದು ಈಗ ಎಲ್ಲೆಲ್ಲೂ ಸುದ್ದಿಯಲ್ಲಿರುವ ವಿಚಾರ. ಜಾಗತಿಕ ತಾಪಮಾನ ಏರುತ್ತಿರುವ ವಿಷಯ ಈಗ ಬಹುಪಾಲು ಎಲ್ಲರ ಗಮನಕ್ಕೂ ಬಂದಿದೆ. ಬೇಸಿಗೆಯ ಬಿಸಿಲು ಈ ಸಲ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸ್ವಲ್ಪ ಬೇಗನೆ ಅನುಭವಕ್ಕೆ ಬರುತ್ತಿದೆ.
ಫಾಸಿಲ್ ಇಂಧನದ ಬಳಕೆ ಅಂದರೆ ಪೆಟ್ರೋಲ್ , ಡೀಸೆಲ್, ಲಿಕ್ವಿಡ್ ಪೆಟ್ರೋಲಿಯಂ ಗ್ಯಾಸ್ ಮುಂತಾದ ಇಂಧನಗಳ ಬಳಕೆ ನಿಲ್ಲಿಸಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಮಾನವನ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಜಗತ್ತಿನ ಶೇ. 80 ರಷ್ಟು ಶಕ್ತಿಯ ಮೂಲ ಫಾಸಿಲ್ ಇಂಧನವೇ ಆಗಿದೆ, ಹಾಗಾಗಿ ಮುಖ್ಯವಾದ ಶಕ್ತಿಯ ಮೂಲವಾದ ಈ ಫಾಸಿಲ್ ಇಂಧನವನ್ನು ನಿಲ್ಲಿಸಿ ಇಂಗಾಲದ ಡೈ ಆಕ್ಸೈಡ್ ವಾತಾವರಣಕ್ಕೆ ಸೇರುವ ಪ್ರಮಾಣ ಕಡಿಮೆಮಾಡುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಹಲವು ಪ್ರಯೋಗಗಳು ಮತ್ತು ಹುಡುಕಾಟ ಜಗತ್ತಿನಾದ್ಯಂತ ವಿಜ್ಞಾನಿಗಳಲ್ಲಿ ನಿರಂತರವಾಗಿದ್ದು ಅದರಲ್ಲಿ ಫಿನ್ನ್ಲ್ಯಾಂಡ್ ದೇಶವು ಹೊಸ ತಂತ್ರಜ್ಞಾನವನ್ನು ಕಂಡುಕೊಳ್ಳುವ ಹಾದಿಯಲ್ಲಿದೆ, ಅದು ಪ್ರಪಂಚದ ಮೊದಲ ಮರಳಿನ ಬ್ಯಾಟರಿ.
ಈ ತಂತ್ರಜ್ಞಾನದಲ್ಲಿ ನವೀಕರಿಸಬಹುದಾದ ಶಕ್ತಿಯ ಮೂಲವನ್ನು ಬಳಿಸಿಕೊಳ್ಳಲಾಗುತ್ತಿದ್ದು, ಫಿನ್ಲ್ಯಾಂಡ್ ದೇಶದ ಶೇ. 70 ರಷ್ಟು ಶಕ್ತಿಯ ಮೂಲ ನವೀಕರಿಸಬಹುದಾದದ್ದಾಗಿದೆ. ಇಲ್ಲಿ ಫಿನ್ನ್ ಲ್ಯಾನ್ಡ್ ಸಂಶೋಧಕರು ಬಿಸಿ ನೀರಿನ ಬೇಸ್ ಬದಲಿಗೆ ಮರಳನ್ನು ಬಳಸಿದ್ದಾರೆ. ಮರಳನ್ನ7 600℃ ತಾಪಮಾನದವವರೆಗೆ ಬಿಸಿ ಮಾಡಲಾಗುವುದು, ಆದರೆ ನೀರಿನ ಕುಡಿಯುವ ಬಿಂದು 100℃ ಆಗಿರುತ್ತದೆ.
ನವೀಕರಿಸಬಹುದಾದ ಮೂಲವನ್ನು ಬಳಸಿಕೊಂಡು ಎಲೆಕ್ಟ್ರಿಕಲ್ ಗಾಳಿ ಬಿಸಿಮಾಡುವ ಸಾಧನದ ಸಹಾಯದಿಂದ ಗಾಳಿಯನ್ನು 600℃ ವರೆಗೆ ಬಿಸಿಮಾಡಿ ನಂತರ ಪೈಪ್ ನ ಮೂಲಕ ಬಿಸಿ ಗಾಳಿಯನ್ನು ಬ್ಲೋವರ್ ಯಂತ್ರದ ಸಹಾಯದಿಂದ ಮರಳು ಸಂಗ್ರಹ ಚೈಂಬರ್ ಗೆ ವರ್ಗಾಹಿಸಲಾಗುತ್ತದೆ ಯಾವಾಗ ಮರಳು 600℃ ತಾಪಮಾನ ಮುಟ್ಟುವುದೋ ಆಗ ಬ್ಯಾಟರಿ ಚಾರ್ಜ್ ಆಗಿದೆಯೆನ್ನಲಾಗುವುದು.
ನಂತರ ಗಾಳಿ ಬೀಸುವ ಫ್ಯಾನ್ ಗಳನ್ನು ಬಳಸಿ ಗಾಳಿಯನ್ನು ಕೊಳವೆಯ ಮೂಲಕ ಬ್ಯಾಟರಿ ಕೇಸಿಂಗ್ ಒಳಗೆ ನುಸುಳಿಸಲಾಗುತ್ತದೆ. ಒಮ್ಮೆ ಗಾಳಿ 200 -500℃ ಮುಟ್ಟಿತೆಂದರೆ ಅದನ್ನು ಗಾಳಿ ಯಿಂದ ನೀರಿಗೆ ವರ್ಗಾಹಿಸಿ ನೀರನ್ನು ಬಿಸಿಗೊಳಿಸಲಾಗುವುದು, ನಂತರ ಬಿಸಿಯಾದ ನೀರನ್ನು district network ಗೆ ವರ್ಗಾಯಿಸಲಾಗುವುದು ಇಲ್ಲಿಂದ ಬೇಕಾದ ಕಡೆಗೆ ಅಂತಿಮ ಬಳಕೆಗೆ ವರ್ಗಾಹಿಸಲಾಗುವುದು ಎನ್ನುತ್ತಾರೆ ಮರಳಿನ ಬ್ಯಾಟರಿ ಅಭಿವೃದ್ಧಿಪಡಿಸಿದ ಸಂಶೋಧಕರು.
ಒಟ್ಟಿನಲ್ಲಿ ಭೂಮಿಯಮೇಲೆ ಮಾನವನ ಉಳಿವಿಗೆ ಇಂಥಹ ಹೊಸ ಆವಿಷ್ಕಾರಗಳು ಅನಿವಾರ್ಯವಾಗಿದೆ.




