Friday, November 20, 2026

ಪ್ರಾಯೋಗಿಕ ಆವೃತ್ತಿ

ಪ್ರಧಾನಿ ಮೋದಿ ಸ್ವಾಗತಕ್ಕಾಗಿ ಮರಗಳ ಕಡಿತ ಖಂಡನೀಯ : ಪೂರ್ಣಿಮ

ಮಂಡ್ಯ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸುವುದಕ್ಕಾಗಿ ಬೇಸಿಗೆಯಲ್ಲಿ ನೂರಾರು ಜನರಿಗೆ ನೆರಳು ನೀಡುತ್ತಿದ್ದ ಮರಗಳನ್ನು ಕಡಿದಿರುವುದು ತೀವ್ರ ಖಂಡನೀಯ ಎಂದು ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಪೂರ್ಣಿಮ ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳನ್ನು ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ಅವರು, ಮೋದಿ ಅವರ ರೋಡ್ ಶೋ ಗೆ ಅನುಕೂಲ ಮಾಡಿ ಕೊಡುವುದಕ್ಕಾಗಿ ರಸ್ತೆ ಬದಿಯ ನೂರಾರು ಮರಗಳನ್ನು ಜಿಲ್ಲಾಡಳಿತ ಕಡಿದಿರುವುದು ಅವೈಜ್ಞಾನಿಕವಾಗಿದೆ. ಈ ಮರಗಳಿಂದ ಮೋದಿ ಆಗಮನಕ್ಕೆ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಆದರೂ ಪರಿಸರವನ್ನು ಹಾಳುಗೆಡವಲು ಜಿಲ್ಲಾಡಳಿತ ಮುಂದಾಗಿದ್ದು, ತೀವ್ರ ಖಂಡನೀಯ ಎಂದಿದ್ದಾರೆ.

ಈ ಹಿಂದೆ ಮಂಡ್ಯ ನಗರದಲ್ಲಿ ಪೌರಕಾರ್ಮಿಕನ ಮೇಲೆ ಮರದ ಕೊಂಬೆಯೊಂದು ಬಿದ್ದು ಆತ ಸಾವನ್ನಪ್ಪಿದಾಗ ಒಣಗಿದ ಕೊಂಬೆಗಳನ್ನು ತೆರಲು ಮಾಡಲು ಮುಂದಾಗದ ಜಿಲ್ಲಾಡಳಿತ  ಈಗ ಮೋದಿ ಆಗಮನಕ್ಕೆ ಇಷ್ಟೊಂದು ಅಸ್ಥೆ ವಹಿಸುತ್ತಿರುವುದು ಖಂಡನೀಯ. ಅಂದರೆ ಜನಸಾಮಾನ್ಯರ ಪ್ರಾಣಕ್ಕೆ ಬೆಲೆ ಇಲ್ಲವೇ ? ಎಂದು ಅವರು ಪ್ರಶ್ನಿಸಿದ್ದಾರೆ.

ಈ ಹಿಂದೆ ಮಾಜಿ ಯೋಧನೊಬ್ಬ ಮಂಡ್ಯದ ರಸ್ತೆ ಗುಂಡಿಗೆ ಬಲಿಯಾದಾಗ ರಸ್ತೆ ಗುಂಡಿಗಳನ್ನು ಮುಚ್ಚಲು ಮುಂದಾಗದ ಜಿಲ್ಲಾಡಳಿತ, ಈಗ ಮೋದಿ ಬರುತ್ತಾರೆಂಬ ಕಾರಣಕ್ಕಾಗಿ ರಸ್ತೆಗಳಿಗೆ ತೇಪೆ ಹಾಕುವ ಕೆಲಸಕ್ಕೆ ಮುಂದಾಗಿರುವುದು ಖಂಡನೀಯ. ಅಂದರೆ ಮಾಜಿ ಸೈನಿಕನ ಪ್ರಾಣಕ್ಕೆ ಬೆಲೆ ಇಲ್ಲವೇ ? ಈ ಪ್ರಶ್ನೆಗಳಿಗೆ ಜಿಲ್ಲಾಡಳಿತ ಉತ್ತರ ನೀಡಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ಕಾಂಗ್ರೆಸ್   ಟ್ಟೀಟ್

ಮಂಡ್ಯದಲ್ಲಿ ಮೋದಿ ರೋಡ್ ಶೋ ನಡೆಸುವ ಒಂದು ರಸ್ತೆಗೆ ಮಾತ್ರ ಡಾಂಬಾರು ಭಾಗ್ಯ, ಜನ ಓಡಾಡುವ ರಸ್ತೆಗೆ ಗುಂಡಿ ಭಾಗ್ಯ! ಮೋದಿ ಬರುವುದು ನಕಲಿ ಶೋ ನಡೆಸಲು ಎನ್ನುವುದನ್ನು ಸರ್ಕಾರ ತೋರಿಸಿಕೊಟ್ಟಿದೆ ಎಂದು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿದೆ. 

“>

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ