Wednesday, November 18, 2026

ಪ್ರಾಯೋಗಿಕ ಆವೃತ್ತಿ

ಮೋದಿ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಗ್ರಾಮ ಪಂಚಾಯತಿಗಳಿಗೆ ಸೂಚನೆ : ಸಿಐಟಿಯು ಆರೋಪ


  • ಮೋದಿ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದರೆ ಜನರೇ ಸ್ವಯಂ ಪ್ರೇರಿತ ಹೋಗಬೇಕಲ್ಲವೇ ?

  • ಜಿ.ಪಂ.,ತಾ.ಪಂ. ಹಾಗೂ ಗ್ರಾ.ಪಂ.ಗಳಿಗೆ ಸುತ್ತೋಲೆ ಹೊರಡಿಸಿ ಆಡಳಿತ ಯಂತ್ರ ದುರುಪಯೋಗ

ಹೆದ್ದಾರಿ ಉದ್ಘಾಟನೆಯೆನ್ನುವುದು ಒಂದು ನೆಪದಲ್ಲಿ ಬಿಜೆಪಿ ಚುನಾವಣೆ ಪ್ರಚಾರ ಸಭೆ ನಡೆಸುತ್ತಿದೆ, ಇಡೀ ಜಿಲ್ಲಾಡಳಿತವನ್ನೇ, ಬಿಜೆಪಿ ಪ್ರಚಾರಕ್ಕೆ ಬಳಕೆ ಮಾಡುತ್ತಿದೆ ಎಂದು CITU ನಾಯಕಿ ಸಿ.ಕುಮಾರಿ ಆರೋಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಬರ್ತಾರೆಂದು, ಮಂಡ್ಯನಗರದ ಮರಗಳನ್ನ ಕಡಿದು ಮಂಡ್ಯದ ಪರಿಸರವನ್ನು ಹಾಳು ಮಾಡಿದ್ದಾರೆ, ಇದು ಅತ್ಯಂತ ಪರಿಸರ ವಿರೋಧಿ ನಡೆಯಾಗಿದೆ. ಇನ್ನು ತರಾತುರಿಯಲ್ಲಿ, ದಿಢೀರ್ ರಸ್ತೆಗಳಿಗೆ ಡಾಂಬರ್, ಬಾಕಿ ಉಳಿದಿದ್ದ ಹೈವೇ ಕಾಮಗಾರಿಗಳ ಕೆಲಸ ಹಗಲು ರಾತ್ರಿ ನಡಿತಾ ಇದೆ. ಎಲ್ಲಿ ಯಾವಾಗ, ಮುರಿದು ಬೀಳುತ್ತೋ ಗೊತ್ತಿಲ್ಲ ?

ಜನರನ್ನು ತರಲು, ಊಟ ಮತ್ತು ವಾಹನ ವ್ಯವಸ್ಥೆ

ಪ್ರತಿ ಗ್ರಾಮ ಪಂಚಾಯತ್ ಗಳಿಂದ ಜನರನ್ನು ತರಲು, ಊಟ ಮತ್ತು ವಾಹನ ವ್ಯವಸ್ಥೆ ಮಾಡಿಸಿ ಕರೆದಿದ್ದಾರೆ ವಿನಾ ಸ್ವ ಇಚ್ಚೆಯಿಂದ ಜನ ಬರುತ್ತಿ,ಲ್ಲ ಕಾರಣ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದು, ದುಬಾರಿ ಗ್ಯಾಸ್ ಪೆಟ್ರೋಲ್, ಡೀಸೆಲ್, ಉದ್ಯೋಗ ನಷ್ಟ, ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವ ನಿರುದ್ಯೋಗ ಸರ್ಕಾರಿ ಸ್ವಾಮ್ಯದ ಮೈಷುಗರ್ ಕಾರ್ಖಾನೆಯನ್ನು ಆಧುನಿಕರಣಗೊಳಿಸಿ ಸರಿಯಾಗಿ ಸುಸ್ಥಿರಗೊಳಿಸದೆ ಇರುವುದು, pssk ಯನ್ನು 40 ವರ್ಷ ಗುತ್ತಿಗೆಗೆ ನೀಡಿ ರೈತ ಕಾರ್ಮಿಕರ ಅಭಿವೃದ್ದಿಯನ್ನು ವಿಕಾರಗೊಳಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ದೂರಿದ್ದಾರೆ.

ಕಾರ್ಮಿಕ ವಿರೋಧಿ ಬಿಜೆಪಿ 

ಮಹಿಳಾ ವಿರೋಧಿ, ದಲಿತ ವಿರೋಧಿ, ಕಾರ್ಮಿಕ ವಿರೋಧಿ, ರೈತವಿರೋಧಿ, ಅಲ್ಪಸಂಖ್ಯಾತ ವಿರೋಧಿ ಒಟ್ಟರೆ ಜೀವವಿರೋಧಿ, ಬಿಜೆಪಿ. ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡದ ಕಾರಣ ಜನ ಸೇರಲ್ಲ ಎನ್ನುವ ಭಯದಿಂದ, ಇಡೀ ಸರ್ಕಾರಿ ಯಂತ್ರವನ್ನೆ ಬಳಸಿ, ಗ್ರಾಮ ಪಂಚಾಯತ್ ಮೂಲಕ, ಜನರನ್ನು ಸಭೆಗೆ ತರುವ ಪ್ರಯತ್ನ ಮಾಡುತ್ತಿದೆ. ಒಟ್ಟಾರೆ ಮುಂದಿನ ಚುನಾವಣೆಗೆ ಜನರ ಸೇರಿಸಿ ಭಾಷಣ ಮಾಡಬೇಕು ಎನ್ನುವುದಷ್ಟೇ ಬಿಜೆಪಿಯವರ ಉದ್ದೇಶವಾಗಿದೆ  ಎಂದು ಕಿಡಿಕಾರಿದ್ದಾರೆ.

ವಸತಿ ಶಾಲೆಗೆ ಪ್ರವೇಶ ಪರೀಕ್ಷೆಗೆ ಅಡ್ಡಿ

ಮಂಡ್ಯ ಜಿಲ್ಲಾಧಿಕಾರಿಗಳು ಬಿಜೆಪಿಯ ಅಣತಿಯಂತೆ ವರ್ತಿಸುತ್ತಿರುವುದನ್ನು CITU ತೀವ್ರವಾಗಿ ಖಂಡಿಸುತ್ತದೆ. 12-03-2023 ರಂದು ಆರನೇ ತರಗತಿಯ ಮಕ್ಕಳಿಗೆ ವಸತಿ ಶಾಲೆಗೆ ಪ್ರವೇಶ ಪರೀಕ್ಷೆ ಇದೆ. ಆ ದಿನ ಹೆದ್ದಾರಿ ಬಂದ್ ಕೂಡ ಮಾಡಲಿಕ್ಕೆ ಜಿಲ್ಲಾಡಳಿತ ಈಗಾಗಲೇ ಹೆದ್ದಾರಿಯ ವಾಹನ ರೂಟ್ ಬದಲಾಯಿಸಿದೆ, ಆದರೆ ಆರನೇ ತರಗತಿ ಮಕ್ಕಳು ಯಾರೆಲ್ಲ ವಸತಿ ಶಾಲೆ ಪ್ರವೇಶ ಪರೀಕ್ಷೆಗೆ ಸಿದ್ದಗೊಂಡಿರುವವರು, 9ಗಂಟೆ ಒಳಗೆ ಪೋಷಕರು ಮಕ್ಕಳನ್ನ ಕರೆ ತರಬೇಕು ಎಂದಿದ್ದೀರಿ ಹೆದ್ದಾರಿ ತುಂಬಾ ಟೈಟ್ ಸೆಕ್ಯೂರಿಟಿ ಇರುವಾಗ, ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಈ ವಿಚಾರದಲ್ಲಿ ಇಡೀ ಜಿಲ್ಲಾಡಳಿತವೇ ಒಂದು ಸ್ಪಷ್ಟತೆಗೆ ಬರಲಾರದೆ ಗೊಂದಲದಲ್ಲಿದೆ ಎನ್ನುವುದು ಸ್ಪಷ್ಟ. ಮಕ್ಕಳಿಗೂ ತೊಂದರೆ, ಸಾಮಾನ್ಯ ಜನರ ಓಡಾಟಕ್ಕೆ ದೊಡ್ಡ ರೀತಿಯ ತೊಂದರೆಯನ್ನು ಕೊಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ. ಮಂಡ್ಯ ನಗರದಲ್ಲಿ ಕಳೆದ ನಾಲ್ಕು ದಿನದಿಂದಲೇ, ಮುಖ್ಯ ರಸ್ತೆಯ ಬೀದಿಬದಿ ಅಂಗಡಿಗಳನ್ನು ಒಂದು ವಾರಕಾಲ ತೆರವುಗೊಳಿಸಿರುವುದನ್ನು CITU ಮಂಡ್ಯ ಜಿಲ್ಲಾ ಸಮಿತಿಯು ಅತ್ಯಗ್ರವಾಗಿ ಖಂಡಿಸುತ್ತದೆ. ಸುಗಮವಾಗಿ ಪರೀಕ್ಷೆ ಬರೆಯಲು ಸೂಕ್ತ ವ್ಯವಸ್ಥೆ ಮಾಡಬೇಕೆಂದು CITU ಮಂಡ್ಯಜಿಲ್ಲಾ ಸಮಿತಿಯು ಆಗ್ರಹಿಸುತ್ತದೆ ಎಂದಿದ್ದಾರೆ.

ಕೋಮು ರಾಜಕಾರಣಕ್ಕೆ ಸುಮಲತಾ

ಸ್ವಾಭಿಮಾನದ ಹೆಸರಲ್ಲಿ ಗೆದ್ದ ಸುಮಲತಾ ಅಂಬರೀಶ್ ಪಕ್ಷೇತರವಾಗಿ ಗೆಲ್ಲುವಾಗಲೆ ಬಿಜೆಪಿಯ ಬೆಂಬಲ ಪಡೆದಿದ್ದು ಜಗತ್ ಜಾಹೀರಾಗಿದೆ. ಈಗ ಅವರು ಅಧಿಕೃತವಾಗಿ ಬಿಜೆಪಿಗೆ ಬೆಂಬಲದ ಘೋಷಣೆ ಮಾಡಿರುವುದು  ಅಭಿವೃದ್ಧಿಗೋಸ್ಕರ ಎನ್ನುವುದು ನೆಪವಷ್ಟೇ, ಜಿಲ್ಲೆಯಲ್ಲಿ ಕೋಮು ರಾಜಕಾರಣ ಮಾಡಲಿಕ್ಕೆ ಸುಮಲತಾರ ರಾಜಕಾರಣವನ್ನೆ ಬಲಿತೆಗೆದುಕೊಳ್ಳುವ ಹುನ್ನಾರ ನಡೆದಿದೆ. ಸ್ವಾರ್ಥ ಲಾಭಕ್ಕಾಗಿ ಬಿಜೆಪಿ ಸೇರಿರುವ ಸುಮಲತಾರನ್ನು ಸೋಲಿಸುವ ಪ್ರಜ್ಞೆ ಮಂಡ್ಯ ಜನತೆಗೆ ಇದೆ ಎನ್ನುವುದನ್ನ ಮರೆಯುವ ಆಗಿಲ್ಲ, ಬಿಜೆಪಿಗೆ ಸೋಲು ಖಚಿತ ಎಂದು ಅವರು ಹೇಳಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ