Saturday, November 21, 2026

ಪ್ರಾಯೋಗಿಕ ಆವೃತ್ತಿ

‘ಉರೀಗೌಡ, ನಂಜೇಗೌಡನನ್ನು ಬಿಟ್ಟು ಹೊಲ ಉಳುವ ಬೋರೇಗೌಡನನ್ನು ನೋಡಿ’ ; ಬಿಜೆಪಿ ನಾಯಕರಿಗೆ ಹೆಚ್.ಡಿ.ಕುಮಾರಸ್ವಾಮಿ ಟಾಂಗ್

ಉರೀಗೌಡ, ನಂಜೇಗೌಡ ವಿಚಾರ ಇಟ್ಟುಕೊಂಡು ಆಟ ಆಡುವುದನ್ನು ಬಿಟ್ಟು ಇಲ್ಲಿ ಸಮಸ್ಯೆಗಳಿಂದ ಸಾಯ್ತ ಇದ್ದಾನಲ್ಲ ಹೊಲ ಉಳುವ ಬೋರೇಗೌಡನನ್ನು ನೋಡಲಿ. ರಾಜ್ಯದಲ್ಲಿ ಆಲಿಕಲ್ಲು ಮಳೆ ಬಿದ್ದು ಜನ ಸಾಯುತ್ತಿದ್ದಾರೆ. ಮೊದಲು ಅದರ ಕಡೆ ಗಮನ ನೀಡಲಿ, ಅವರಿಗೆ ಪರಿಹಾರ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.

ಮಂಡ್ಯ ತಾಲೂಕಿನ ವಿ.ಸಿ ಫಾರಂನ ಹೆಲಿಪ್ಯಾಡ್‌ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಏನು ಕೆಲಸ ಇಲ್ಲ. ವಾಸ್ತವತೆಯನ್ನು ನೋಡಬೇಕೊ ಅಥವಾ ಕಾಲ್ಪನಿಕ ವಿಚಾರಗಳಿಗೆ ಪ್ರಾಸಸ್ಥ್ಯ ಕೊಡಬೇಕಾ? ಸಿನಿಮಾ ಯಾವನು ಮಾಡುತ್ತಾನೋ ಅದು ಅವನಿಗೆ ಸೇರಿದ್ದು. ಸಿನಿಮಾ ಕಥೆ ಏನು ಸತ್ಯವಲ್ಲ. ಕಾಲ್ಪನಿಕ ವಿಚಾರ ಇಟ್ಟುಕೊಂಡು ಮಾಡುತ್ತಾರೆ. ನಾನು ಚುನಾವಣೆ ನಡೆಸಬೇಕು. ಬಿಜೆಪಿಯವರು ಮಂಡ್ಯದಲ್ಲಿ ಉರೀಗೌಡ, ನಂಜೇಗೌಡರ ಪ್ರತಿಮೆ ಇಲ್ಲದಿದ್ದರೆ ದೊಡ್ಡ ದೇವಸ್ಥಾನವನ್ನೇ ನಿರ್ಮಾಣ ಮಾಡಿಕೊಳ್ಳಲಿ. ಈ ವಿಚಾರದಿಂದ ಚುನಾವಣೆಯಲ್ಲಿ ಯಾವುದೇ ವರ್ಕೌಟ್ ಆಗಲ್ಲ. ಈಗಿನ ಜನರ ಕಷ್ಟ ನೋಡದೆ, ಹಳೆ ಕಥೆ ಇಟ್ಟುಕೊಂಡು ಬಂದರೆ ಜನರು ಮತ ಹಾಕುತ್ತಾರಾ ಎಂದ ಅವರು, ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರೀಗೌಡ, ನಂಜೇಗೌಡ ಕುತ್ತಿಗೆ ಕುಯ್ದರು ಎಂದು ಏನಾದರೂ ಇದಿಯಾ. ಇಲ್ಲ ಯುದ್ದ ಮಾಡಿ ತಲೆ ತೆಗೆದಿದ್ದರು ಎಂದಿದೆಯೇ ಎಂದು ಪ್ರಶ್ನಿಸಿದರು.

ಪಕ್ಷದ ನಾಯಕನಿಗೆ ಸ್ಪರ್ಧೆ ಮಾಡುವುದಕ್ಕೆ ಕ್ಷೇತ್ರವೇ ಸಿಗುತ್ತಿಲ್ಲ

ಜೆಡಿಎಸ್ ಪುಟ್ಕೋಸಿ ಪಕ್ಷ ಎಂಬ ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಚುನಾವಣೆ ಆದ ಬಳಿಕ ಯಾವುದು ಪುಟ್ಕೋಸಿ ಪಕ್ಷವೆಂದು ಜನರೇ ಹೇಳುತ್ತಾರೆ. ಇವರೆಲ್ಲರನ್ನು ಜನರು ಎಲ್ಲಿಗೆ ಕಳುಹಿಸುತ್ತಾರೆ ಎನ್ನುವುದು ಗೊತ್ತಾಗುತ್ತದೆ. ಅವರ ಪಕ್ಷದ ನಾಯಕನಿಗೆ ಸ್ಪರ್ಧೆ ಮಾಡುವುದಕ್ಕೆ ಕ್ಷೇತ್ರವೇ ಸಿಗುತ್ತಿಲ್ಲ. ಒಬ್ಬ ಶಾಸಕಾಂಗ ಪಕ್ಷದ ನಾಯಕನನ್ನ ಎಲ್ಲಿ ನಿಲ್ಲಿಸಬೇಕೆಂದು ಸ್ಪಷ್ಟತೆ ಸಿಕ್ಕಿಲ್ಲ. ಅಂತಹವರು ನಮ್ಮ ಪಕ್ಷದ ಬಗ್ಗೆ ಮಾತನಾಡ್ತಾರಾ?. ಮೊದಲು ಅವರ ಪುಟ್ಕೋಸಿ ಹೇಗಿದೆ ಎಂದು ನೋಡಿಕೊಳ್ಳಲೆಂದು ತಿರುಗೇಟು ನೀಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ