Friday, November 20, 2026

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಸೇರ್ಪಡೆ ನಿರ್ಧಾರ ಪ್ರಕಟಿಸಿದ ಎಲ್. ಆರ್. ಶಿವರಾಮೇಗೌಡ

ಮೂರ್ನಾಲ್ಕು ದಿನಗಳಲ್ಲಿ ಭಾರತೀಯ ಜನತಾ ಪಕ್ಷವನ್ನು ನಾನು ಹಾಗೂ ನನ್ನ ಪುತ್ರ ಸೇರ್ಪಡೆಗೊಳ್ಳುತ್ತೇವೆ ಎಂದು ನಾಗಮಂಗಲದ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಪ್ರಕಟಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾಗಮಂಗಲದಲ್ಲಿ ಕಾಂಗ್ರೆಸ್ ನಿಂದ ಮೂಲತಃವಾಗಿ ರಾಜಕೀಯಕ್ಕೆ ಬಂದವನು ನಾನು, ಅನಿವಾರ್ಯ ಕಾರಣಗಳಿಂದ ಜೆಡಿಎಸ್ ಪಕ್ಷಕ್ಕೂ ಕೂಡ ಹೋಗಿದ್ದೇನೆ. 40 ವರ್ಷದಲ್ಲಿ ನಾನು ನಾಗಮಂಗಲ ತಾಲ್ಲೂಕಿನ ಯಾವುದೇ ವ್ಯಕ್ತಿಗೆ ತೊಂದರೆ ಕೊಟ್ಟಿಲ್ಲ. ಬೇಜಾರ್ ಮಾಡಿಲ್ಲ, ಭಾರತೀಯ ಜನತಾ ಪಕ್ಷ ಇಡೀ ದೇಶಕ್ಕೆ ತುಂಬಾ ಅವಶ್ಯಕವಾಗಿ ಬೇಕಾಗಿರುವ ಪಕ್ಷ ಇದನ್ನ ಉನ್ನತ ಮಟ್ಟಕ್ಕೆ ಬೆಳೆಸುವ ನಿಟ್ಟಿನಲ್ಲಿ ಪಕ್ಷ ಸಂಘಟನೆ ಮಾಡುತ್ತಾ ಬಂದೆ, ಆದರೇ ಅವಕಾಶದ ಕೊರತೆಯಿಂದಾಗಿ ಸಂಘಟನೆ ವಿರಳವಾಯಿತು ಎಂದರು.

ಪ್ರಧಾನಿ ನರೇಂದ್ರ ಮೋದಿ ಇಡೀ ದೇಶವನ್ನ ಕಳಂಕ ರಹಿತವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. 224ಕ್ಷೇತ್ರಗಳಲ್ಲಿ ಕಮಲ ಅರಳಿಸಬೇಕು ಎಂಬ ನಿಟ್ಟಿನಲ್ಲಿ ಅಮಿತ್ ಶಾ,  ನರೇಂದ್ರ ಮೋದಿ, ಬಸವರಾಜ್ ಬೊಮ್ಮಾಯಿ, ಮುನಿರತ್ನ ಸೇರಿದಂತೆ ಇನ್ನು ಹಲವಾರು ಬೆಜೆಪಿ ನಾಯಕರು ಇಡೀ ದೇಶದಾದ್ಯಂತ ಸಂಚಾರ ನಡೆಸುತ್ತಿದ್ದಾರೆ, ಅದೇ ರೀತಿ ಮಂಡ್ಯ ಜಿಲ್ಲೆಯಲ್ಲೂ ಕೂಡ ನಾನು ಬಿಜೆಪಿ ಪಕ್ಷ ಬೆಳೆಸುವ ಪ್ರಯತ್ನ ಮಾಡುತ್ತೇನೆ ಎಂದರು.

ಮಂಡ್ಯ ಹಾಗೂ ನಾಗಮಂಗಲ ತಾಲ್ಲೂಕಿನಲ್ಲಿ 2 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಿಕೊಡಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನ ಕೇಳಿದ ಸಂದರ್ಭದಲ್ಲಿ ಅವರು ಸ್ಪಂದಿಸದೇ, ಈಗ ಜನರಿಗೆ ಊಟ ಹಾಕಿ, ಕಣ್ಣೀರು ಹಾಕಿ ಓಟು ಕೇಳೋ ಹುನ್ನಾರ ಮಾಡಿದರೆಂದು ದೂರಿದರು.

ಸಚಿವ ಮುನಿರತ್ನ ಮಾತನಾಡಿ, ನಾಗಮಂಗಲ ಅಂದ್ರೆ ಶಿವರಾಮೇಗೌಡ, ಶಿವರಾಮೇಗೌಡ ಅಂದ್ರೆ ನಾಗಮಂಗಲ. ಎರಡು ಬಾರಿ ಅಧಿಕಾರ ಪಡೆದು ತಮ್ಮ ಶಕ್ತಿ ಎಷ್ಟು ಎಂಬುದನ್ನ ತಿಳಿದಿದ್ದೇನೆ. ಭಾರತೀಯ ಜನತಾ ಪಕ್ಷಕ್ಕೆ ಬಂದ ಯಾರನ್ನು ಕೈ ಬಿಡುವ ಪಕ್ಷ ನಮ್ಮದಲ್ಲ ಅದಕ್ಕೆ ಉದಾಹರಣೆ 18 ಜನರು ಕೂಡ ಏಕಕಾಲದಲ್ಲಿ ಬಿ ಜೆ ಪಿ ಪಕ್ಷ ಸೇರ್ಪಡೆಗೊಂಡೇವು. ಇಲ್ಲಿ ನಮಗೆ ಉನ್ನತವಾದ ಗೌರವ, ಅಭಿಮಾನ ಸಿಕ್ಕಿದೆ ಎಂದರು.

ಈ ಸಂದರ್ಭದಲ್ಲಿ ಎಲ್.ಆರ್.ಶಿವರಾಮೇಗೌಡರ ಪುತ್ರ  ಚೇತನ್ ಗೌಡ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ