Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ರೈತರ ಹೋರಾಟಕ್ಕೆ ಮಣಿದ ಜಿಲ್ಲಾಡಳಿತ: ಟ್ರಯಲ್ ಬ್ಲಾಸ್ಟಿಂಗ್ ಮುಂದೂಡಿಕೆ

ಕೆ.ಆರ್.ಎಸ್ ಅಣೆಕಟ್ಟೆಯ 20 ಕಿ.ಮೀ ವ್ಯಾಪ್ತಿಯ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟಿಂಗ್ ನಡೆಸುವುದನ್ನು ವಿರೋಧಿಸಿ ರೈತಸಂಘದ ಕಾರ್ಯಕರ್ತರು ಮಂಗಳವಾರ ಕೆ.ಆರ್.ಎಸ್ ನಲ್ಲಿ ಗೋ ಬ್ಯಾಗ್ ಚಳವಳಿ ನಡೆಸಿದ್ದರಿಂದ ಜಾರ್ಖಂಡ್ ಬಂದಿದ್ದ ತಂಡವು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ಸಾಯಿತು.

ಟ್ರಯಲ್ ಬ್ಲಾಸ್ಟ್ ಮಾಡದಂತೆ ರೈತರು ಪಟ್ಟು ಹಿಡಿದರು, ಅವರನ್ನು ಮನವೊಲಿಸಲು ಮಂಡ್ಯ ಜಿಲ್ಲಾಡಳಿತದ ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದ್ರೂ ಹೋರಾಟಗಾರರು ಸೊಪ್ಪು ಹಾಕಲಿಲ್ಲ, ಬೇಬಿಬೆಟ್ಟ ಟ್ರಯಲ್ ಬ್ಲಾಸ್ಟ್‌ಗೆ ಕೋರ್ಟ್ ಆದೇಶವೇ  ಇಲ್ಲ. ಹೈಕೋರ್ಟ್ ಆದೇಶ ನೆಪವೊಡ್ಡಿ ಟ್ರಯಲ್ ಬ್ಲಾಸ್ಟ್ ಜಿಲ್ಲಾಡಳಿತ ಮುಂದಾಗಿದೆ, ಟ್ರಯಲ್ ಬ್ಲಾಸ್ಟ್ ನಡೆಸುವಂತೆ ಆದೇಶವೇ ಇಲ್ಲ ಎಂದು ರೈತರು ಕಿಡಿಕಾರಿದರು.

ಗಣಿಮಾಲೀಕರ ಲಾಭಿಗೆ ಮಣಿದು ನಕಲಿ ಆದೇಶ ಪತ್ರವನ್ನು ಸೃಷ್ಟಿಸಲಾಗಿದೆ, ವಕೀಲರು ಕಾಲಾವಕಾಶ ಕೇಳಿದ್ದ ಪತ್ರವನ್ನೇ ಆದೇಶ ಪ್ರತಿ ಎಂದು ಅಧಿಕಾರಿಗಳು ಬಿಂಬಿಸಿದ್ದಾರೆ ಎಂದು ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಟ್ರಯಲ್ ಮಾಡಲು ಡ್ಯಾಂ ಸೇಫ್ಟೀ ಸಮಿತಿಗೆ ಅಧಿಕಾರ ನೀಡಿದ್ದ ಹೈಕೋರ್ಟ್. ಡ್ಯಾಂ ಸೇಫ್ಟಿ ಸಮಿತಿ ಸಲಹೆ ಪಡೆದು ಮುಂದಿನ ನಿರ್ಧಾರ ತೆಗದುಕೊಳ್ಳಿ ಎಂದು ತಿಳಿಸಿದೆ, ಈ ವೇಳೆ ಡ್ಯಾಂ ಸೇಫ್ಟಿ ಸಮಿತಿ ನಿರ್ಧಾರ ಮಾಡಲು 6 ತಿಂಗಳು ಸಮಯ ನೀಡುವಂತೆ ಅಡ್ವೋಕೇಟ್ ಜನರಲ್ ಮನವಿ ಮಾಡಿದ್ಧಾರೆ. ಇದನ್ನೇ ಹೈಕೋರ್ಟ್ ಟ್ರಯಲ್ ಬ್ಲಾಸ್ಟಿಂಗ್ ನಡೆಸಲು ಆದೇಶಿಸಿದೆ ಎಂದು ಜಿಲ್ಲಾಡಳಿತದ ತಪ್ಪಾಗಿ ಅರ್ಥೈಹಿಸಿಕೊಂಡಿದೆ ಎಂದು ರೈತರು ಕಿಡಿಕಾರಿದರು.

ಈ ಸಂದರ್ಭದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಕೆಂಪೂಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!