✍️ ಶಿವಸುಂದರ್
ಜಸ್ಟ್ ಆಸ್ಕಿಂಗ್
” ಬಿಜೆಪಿಯ ಉರಿನಂಜುಗಳೇ….
ನಿನ್ನೆ ನಿಮ್ಮ ಪಿತಾಮಹ ಅಮಿತ್ ಷಾ ಅವರು ಹೇಳಿರುವುದು ಒಂದೋ KMF ಕೇಸರೀಕರಿಸುತ್ತೇವೆ ಅಥವಾ ನಿರ್ನಾಮ ಮಾಡುತ್ತೇವೆ ಎಂದಲ್ಲವೇ?”
ನಿನ್ನೆ ಬಿಜೆಪಿಯ ಗೃಹಮಂತ್ರಿ ಹಾಗೂ ಸಹಕಾರ ಮಂತ್ರಿ ಅಮಿತ್ ಷಾ ಅವರು ಗುಜರಾತಿನಲ್ಲಿ Indian Dairy Association ನ- IDA- 49 ನೇ ಸಮ್ಮೇಳನದಲ್ಲಿ ಮಾತನಾಡುತ್ತಾ:
- ಕೇಂದ್ರದ ಸಹಕಾರ ಇಲಾಖೆಯ ವತಿಯಿಂದ ದೇಶದ ಎಲ್ಲಾ 2 ಲಕ್ಷ ಪಂಚಾಯತಿಗಳಲ್ಲೂ ಪ್ರತ್ಯೇಕ ಗ್ರಾಮೀಣ ಡೈರಿಯನ್ನು ಸ್ಥಾಪಿಸುವುದಾಗಿಯೂ.
- ಹಾಗೂ ಹಾಲಿನ ಉತ್ಪನ್ನಗಳನ್ನು ರಫ್ತ್ತು ಮಾಡುವ ಸಲುವಾಗಿ ಕೇಂದ್ರದಿಂದ ನಿಯಂತ್ರಿತವಾಗುವ Multi State Cooperative Society for Exports- – MSCS- ಬಹುರಾಜ್ಯ ರಫ್ತು ಸಹಕಾರಿ ಸಂಘವನ್ನು ಈಗಾಗಲೇ ಸ್ಥಾಪಿಸಲಾಗಿದೆಯೆಂದೂ ..
- ಕೇಂದ್ರದಿಂದ ಸ್ಥಾಪಿಸಲಾಗುವ ಗ್ರಾಮೀಣ ಡೈರಿಗಳನ್ನು ಈ ಕೇಂದ್ರ ನಿಯಂತ್ರಿತ MSCS ಜೊತೆಗೆ – integrate- ಒಟ್ಟುಗೂಡಿಸಲಾಗುವುದು ಅರ್ಥಾತ್ ಅಧೀನಗೊಳಿಸಲಾಗುವುದು – ಎಂದು ಘೋಷಿಸಿದ್ದಾರೆ.
ಹೆಚ್ಚಿನ ವಿವರಗಳನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಓದಬಹುದು :
ಕರ್ನಾಟಕದಲ್ಲಿ ಹೈನೋದ್ಯಮವನ್ನೇ ನೆಚ್ಚಿಕೊಂಡಿರುವ 25 ಲಕ್ಷ ರೈತಾಪಿಯ ಮೇಲೆ, ಅವರೆಲ್ಲರೂ ಕಟ್ಟಿರುವ ಸ್ವತಂತ್ರ-ಸ್ವಾಭಿಮಾನಿ – ಬಲಿಷ್ಠ KMF ಮೇಲೆ ಇದರ ಪರಿಣಾಮವೇನಾಗಬಹುದು ಯೋಚಿಸಿದ್ದೀರಾ , ಉರಿನಂಜುಗಳೇ ?
ಬಿಜೆಪಿಯ ಈ ದೀರ್ಘಕಾಲೀನ ಹುನ್ನಾರದ ತಾತ್ಪರ್ಯವಿಷ್ಟೇ :
ಒಂದೋ ..
KMF ಅನ್ನು ಕೇಂದ್ರದ ಬಿಜೆಪಿ ನಿಯಂತ್ರಿತ ರಫ್ತ MSCS- ಬಹುರಾಜ್ಯ ರಫ್ತು ಸಹಕಾರಿ ಸಂಘ – ಗೆ ಅಧೀನಗೊಳಿಸಲಾಗುವುದು ಅಥವಾ ವಿಲೀನಗೊಳಿಸಲಾಗುವುದು.
ಅಥವಾ
KMF ಗೆ ಪರ್ಯಾಯವಾಗಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕೇಂದ್ರದ ಬಲದೊಂದಿಗೆ ಬಿಜೆಪಿ ಡೈರಿಗಳನ್ನು ಸ್ಥಾಪಿಸಿ KMF ಅನ್ನು ನಿರ್ನಾಮ ಮಾಡುವ ಪ್ರಯತ್ನ ಮಾಡಲಾಗುವುದು ..
ಅರ್ಥಾತ್ KMF ಕೇಸರೀಕರಣವಾಗಬೇಕು ಇಲ್ಲವೇ ನಾಶವಾಗಬೇಕು .. !!
ಎರಡೂ ಕೂಡ ಅಷ್ಟು ಸುಲಭವೇನಲ್ಲ…
ಆದರೂ ಬಿಜೆಪಿಯ ಉರಿನಂಜುಗಳ ಉದ್ದೇಶವಂತೂ KMF ನಾಶವೇ ಅಲ್ಲವೇ?
ಜಸ್ಟ್ ಆಸ್ಕಿಂಗ್




