Monday, May 20, 2024

ಪ್ರಾಯೋಗಿಕ ಆವೃತ್ತಿ

ಪುರಸಭೆ ವ್ಯಾಪ್ತಿಯ ನೀರು ಮತ್ತು ಆಸ್ತಿ ತೆರಿಗೆ ಹೆಚ್ಚಳಕ್ಕೆ ಸರ್ವ ಸದಸ್ಯರ ವಿರೋಧ

ವರದಿ : ಪ್ರಭು ವಿ ಎಸ್

ಸರ್ಕಾರದ ಆದೇಶದಂತೆ ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ದರ ಮತ್ತು ಆಸ್ತಿ ತೆರಿಗೆ ಹೆಚ್ಚಳಕ್ಕೆ ಸರ್ವ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಮದ್ದೂರು ಪುರಸಭೆ ಎಸ್ ಎಂ ಕೃಷ್ಣ ಸಭಾಂಗಣದಲ್ಲಿ ಅಧ್ಯಕ್ಷ ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು. ಸಭೆಯಲ್ಲಿ ಸರ್ಕಾರದ ಆದೇಶದ ಅನ್ವಯ ಆಸ್ತಿ ತೆರಿಗೆಯನ್ನು ಶೇ. 3 ರಿಂದ ಶೇ. 5 ರಷ್ಟು ಮತ್ತು ನೀರಿನ ದರ ಹೆಚ್ಚಳ ಮಾಡಲು ಮುಖ್ಯಾಧಿಕಾರಿ ಅಶೋಕ್ ವಿಷಯ ಮಂಡನೆ ಮಾಡಿದರು ಇದಕ್ಕೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ‌ಸೇರಿದಂತೆ ಎಲ್ಲ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿ ಸದಸ್ಯ ಎಂ.ಐ. ಪ್ರವೀಣ್ ಮಾತನಾಡಿ ಈ ಹಿಂದೆ ಅಧಿಕಾರಿಗಳ ಆಡಳಿತವಿದ್ದ ಸಂದರ್ಭದಲ್ಲಿ ನೀರಿನ ದರವನ್ನು ಶೇ,100 ರಷ್ಟು ಹೆಚ್ಚು ಮಾಡಲಾಗಿದೆ ಇದೆ ಜನರಿಗೆ ಹೆಚ್ಚು ವರೆಯಾಗಿದೆ. ವಾಟರ್ ಬೋರ್ಡ್ ಕಾಮಗಾರಿ ನಗರದಲ್ಲಿ ನಡೆಯುತ್ತಿದ್ದು ಎಲ್ಲಾ ಮುಗಿದ ನಂತರ ಪರಿಷ್ಕರಿಸಲು ತೀರ್ಮಾನಿಸಲಾಯಿತು.

ಪುರಸಭೆ ವ್ಯಾಪ್ತಿಯ ಆಸ್ತಿ ತೆರಿಗೆ ಪರಿಷ್ಕರಣೆಗೆ ಸಹ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಹಿಂದೆ 3 ವರ್ಷಕ್ಕೆ ಒಮ್ಮೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲಾಗುತ್ತೀತು, ಸರ್ಕಾರ ವರ್ಷಕ್ಕೊಮ್ಮೆ ದರ ಪರಿಷ್ಕರಣೆಗೆ ಸಾರ್ವಜನಿಕರ ವಿರೋಧವಿದ್ದು ಜನಪ್ರತಿನಿಧಿಗಳು ಉತ್ತರಿಸಲಾಗದ ಪರಿಸ್ಥಿತಿಯಾಗಿದೆ ಈ ಕಾರಣದಿಂದ ಆಸ್ತಿ ತೆರಿಗೆ ಪರಿಷ್ಕರಣೆಗೆ ಸದಸ್ಯರು ವಿರೋಧ ವ್ಯಕ್ತಪಡಿಸಿದರು.

ಜೊತೆಗೆ ಮದ್ದೂರು ಪುರಸಭೆ “ಬಿಎಂಐಸಿ” ವ್ಯಾಪ್ತಿಗೆ ಒಳಪಟ್ಟಿರುವ ಕಾರಣ ನೂತನ ಮನೆ ನಿರ್ಮಾಣಕ್ಕೆ ಪರವಾನಿಗೆ ನೀಡಲು ಸಾಧ್ಯವಾಗದ ಕಾರಣ ಸಾರ್ವಜನಿಕರು ಡಬಲ್ ಆಸ್ತಿತೆರಿಗೆ ಕಟ್ಟುತ್ತಿದ್ದು ಆ ಕಾರಣದಿಂದ ಆಸ್ತಿ ತೆರಿಗೆ ಹೆಚ್ಚುವರಿ ಮಾಡಲು ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಕಸ ವಿಲೇವಾರಿ ಸಂಬಂಧ ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಲು ಕ್ರಮ

ಹೊರಗುತ್ತಿಗೆ ಅದರ ಮೇಲೆ ಕಸ ನಿರ್ವಹಣೆ ವಾಹನಗಳ ಚಾಲಕರನ್ನು ಪುರಸಭೆ ಕೆಲಸಕ್ಕೆ ನಿಯೋಜನೆ ಗೊಳಿಸಲಾಗಿದೆ ಚಾಲಕರ ಮುಷ್ಕರದಿಂದ ವಾರ್ಡ್ ಗಳಲ್ಲಿ ಕಸ ನಿರ್ವಹಣೆಗೆ ತೊಂದರೆಯಾಗಿದ್ದು ವಾಹನಗಳಿಗೆ ಚಾಲಕನನ್ನು ಒದಗಿಸಲು ಗುತ್ತಿಗೆದಾರನಿಗೆ ನೋಟಿಸ್ ನೀಡಲು ಸಭೆ ತೀರ್ಮಾನಿಸಲಾಯಿತು.

ಸಭೆ ವೇಳೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ ಆರ್ ಪ್ರಸನ್ನ ಕುಮಾರ್, ಉಪಾಧ್ಯಕ್ಷ ಸುಮಿತ್ರ, ಸದಸ್ಯರಾದ ಬಿ ಸಿ ಸರ್ವಮಂಗಳ, ಎಸ್ ಮಹೇಶ್, ಬಸವರಾಜು,ಆದಿಲ್ ಅಲಿ ಖಾನ್, ವನಿತಾ,ಪ್ರಮೀಳಾ, ಪ್ರಿಯಾಂಕ, ಲತಾ,ಸೇರಿದಂತೆ ನಾಮನಿರ್ದೇಶಿತ ಸದಸ್ಯರಾದ ಮ ನ ಪ್ರಸನ್ನ ಸೇರಿದಂತೆ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!