ನಾಗಮಂಗಲ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸದಸ್ಯ ವರದರಾಜ್ ಅವಿರೋಧವಾಗಿ ಆಯ್ಕೆಯಾದರು.
ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಚನ್ನಪ್ಪರವರ ರಾಜೀನಾಮೆ ಹಿನ್ನಲೆಯಲ್ಲಿ ಇಂದು ನಡೆದ ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ಅವಿರೋಧವಾಗಿ ಜೆಡಿಎಸ್ ಪಕ್ಷದ ತೊಳಲಿ ವರದರಾಜ್ (ದುಗ್ಗ) ಸದಸ್ಯರೆಲ್ಲರ ಒಮ್ಮತ ಅಭಿಪ್ರಾಯದಿಂದ ಅಧಿಕಾರ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು,ಪಟ್ಟಣದಲ್ಲಿನ ಎಲ್ಲ ವಾರ್ಡ್ಗಳಲ್ಲಿ ಕುಡಿಯುವ ನೀರು, ಬೀದಿ ದೀಪಗಳು, ಹಾಗೂ ಚರಂಡಿಗಳ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಲಾಗುವುದು. ತಾಲೂಕಿನ ಶಾಸಕರ ಸಹಕಾರ ಹಾಗೂ ಪುರಸಭೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಬೆಂಬಲದಿಂದ ನಾನು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಪುರಸಭೆಯ ಅಧ್ಯಕ್ಷೆ ಆಶಾ ವಿಜಯ್ ಕುಮಾರ್, ಉಪಾಧ್ಯಕ್ಷ ಜಾಫರ್, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಚನ್ನಪ್ಪ,ಆರೋಗ್ಯ ನಿರೀಕ್ಷಕ ಮೂರ್ತಿ, ಲಿಂಗೇಗೌಡ, ನಾಗೇಶ್, ಸಂತೋಷ್ ಮಾಜಿ ಜಿ.ಪಂ.ಸದಸ್ಯ ಹೂವಿನಹಳ್ಳಿ ಚಂದ್ರು, ಮಂಜ, ಪುರಸಭಾ ಸದಸ್ಯರುಗಳು, ಇಲಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.




