Monday, November 23, 2026

ಪ್ರಾಯೋಗಿಕ ಆವೃತ್ತಿ

ಕಾಲುವೆಗೆ ಉರುಳಿ ಬಿದ್ದ ಸ್ಕೂಟರ್ : ಇಬ್ಬರು ವಿದ್ಯಾರ್ಥಿಗಳ ದುರ್ಮರಣ

ಮಂಡ್ಯ ತಾಲ್ಲೂಕಿನ ಕಮ್ಮನಾಯಕನಹಳ್ಳಿ ಗ್ರಾಮದ ಬಳಿಯ ಅಭೀಬ್ ಪ್ಯಾಕ್ಟರಿ ರಸ್ತೆಯಲ್ಲಿರುವ ಏರಿಯಿಂದ ಸ್ಕೂಟರ್ ಆಯ ತಪ್ಪಿ ಕಾಲುವೆಗೆ ಬಿದ್ದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಭಾನುವಾರ ಬೆಳಿಗ್ಗೆ ಜರುಗಿದೆ.

ಮಂಡ್ಯದ ಗುತ್ತಲು ಬಡಾವಣೆಯ ಇಂದಿರಾ ಕಾಲೋನಿಯ 18 ವರ್ಷದ ಪ್ರಜ್ವಲ್ ಎನ್ ಹಾಗೂ 12 ವರ್ಷದ ವರುಣ್ ಎಂಬುವವರೇ ಮೃತಪಟ್ಟ ದುರ್ದೈವಿಗಳು.

ಈ ಕುರಿತು ಪ್ರಜ್ವಲ್ ತಂದೆ ನಾರಾಯಣಸ್ವಾಮಿ ದೂರು ನೀಡಿದ್ದು, ಮನೆಯಿಂದ ತಾನು ಇಲ್ಲದ ವೇಳೆ ಮಗ ಸುಜುಕಿ ಅಕ್ಸಿಸ್ ಸ್ಕೂಟರ್ ತೆಗೆದುಕೊಂಡು ಹೋಗಿ ಈ ಅವಘಡ ಸಂಭವಿಸಿದೆ ಎಂದಿದ್ದಾರೆ.

ಸ್ಥಳಕ್ಕೆ ಎಎಸ್ಪಿ ಸಿ.ಇ.ತಿಮ್ಮಯ್ಯ, ಡಿವೈಎಸ್ಪಿ ಓಂಪ್ರಕಾಶ್, ಪೊಲೀಸ್ ಇನ್ಸ್‌ಪೆಕ್ಟರ್ ಸಿದ್ದಪ್ಪ ಹೆಚ್.ಆರ್ ಹಾಗೂ ಪಿಎಸ್’ಐ ಕುಮಾರ್ ಎಂ.ಎನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಈ ಕುರಿತು ಮಂಡ್ಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿ, ತನಿಖೆ ಮುಂದುವರಿದಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ