Saturday, May 18, 2024

ಪ್ರಾಯೋಗಿಕ ಆವೃತ್ತಿ

ಟಿಪ್ಪುಜಯಂತಿ | ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ

ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ಆಚರಿಸಲಾಗುವ ಟಿಪ್ಪುಜಯಂತಿಯನ್ನು  2015 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ವಾರ್ಷಿಕ ಕಾರ್ಯಕ್ರಮವಾಗಿ ಪ್ರಾರಂಭಿಸಲಾಗಿತ್ತು. ನಂತರ ಕರ್ನಾಟಕದ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು 18 ನೇ ಶತಮಾನದ ಮೈಸೂರು ದೊರೆ ಟಿಪ್ಪು ಸುಲ್ತಾನ್ ಜಯಂತಿ ಆಚರಿಸದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸರ್ಕಾರವು ಆದೇಶ ಈ ಹಿಂದೆ ನೀಡಿತ್ತು.

ಸಕಾರದ ಆದೇಶ ಸಂಖ್ಯೆ ಕಸಂವಾ/96ಕಸಧ/2019.ಬೆಂಗಳೂರು ದಿನಾಂಕ:30-07-2019 ರ ಸರ್ಕಾರದ ಆದೇಶದಂತೆ ಕರ್ನಾಟಕ ರಾಜ್ಯಾದಂತ ಕನ್ನಡ ಸಂಸ್ಕೃತಿ ಇಲಾಖೆಯ ವತಿಯಿಂದ ಆಚರಣೆ ಮಾಡಲಾಗುತ್ತಿದ್ದ ಟಿಪ್ಪುಜಯಂತಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿತ್ತು. ನಂತರ 2019 ಮತ್ತು 2020 ನೇ ಸಾಲಿನಲ್ಲಿ ಕೋವಿಡ್-19 ಮಾರ್ಗಸೂಚಿಯಂತೆ  ಯಾವುದೇ ಜಯಂತಿಯ ಆಚರಣೆಗೆ ಅವಕಾಶವಿರಲಿಲ್ಲ.

ಟಿಪ್ಪುಜಯಂತಿಯನ್ನು ಇಂದು  ದಿ:10-11-2023 ರಂದು ಗಂಜಾಂನ ಗುಂಬಜ್‌ನಲ್ಲಿ ಟಿಪ್ಪುವಕ್ಫ್  ಎಸ್ಟೇಟ್ ವತಿಯಿಂದ ಟಿಪ್ಪುಜಯಂತಿ ಕಾರ್ಯಕ್ರಮ ನಡೆಯುತ್ತಿದ್ದು.  ಖಾಸಗಿಯಾಗಿ ಆಚರಿಸುವ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಮೈಸೂರು ಮತ್ತು ಅಕ್ಕಪಕ್ಕದ ತಾಲ್ಲೂಕು ಜಿಲ್ಲೆಗಳಿಂದ ಬರುವ ಮುಸ್ಲಿಂ ಯುವಕರು ಟಿಪ್ಪು ಅಭಿಮಾನಿಗಳು ಶ್ರೀರಂಗಪಟ್ಟಣಕ್ಕೆ ಬರುವ ಮುನ್ಸೂಚನೆ ಇರುವುದರಿಂದ ಶ್ರೀರಂಗಪಟ್ಟಣವು ಮತೀಯ ಸೂಕ್ಷ್ಮ ಪ್ರದೇಶವಾಗಿದ್ದು,  ಶ್ರೀರಂಗಪಟ್ಟಣದಲ್ಲಿ  ಯಾವುದೇ ರೀತಿಯಲ್ಲಿ ಪ್ರತಿಭಟನೆ, ಮೆರವಣಿಗೆ,  ಬ್ಯಾನರ್, ಬಂಟಿಂಗ್ಸ್, ಬಾವುಟಗಳು ಧ್ವನಿವರ್ದಕಗಳು, ಪಟಾಕಿಸುಡುವುದು ಡಿ.ಜೆ.ಅಳವಡಿಸಿಕೊಂಡು ಘೋಷಣೆ ಕೂಗದಂತ ಹಾಗೂ ಟಾಬ್ಲೊ, ಪ್ರಚೋದನಾತ್ಮಕ ಚಿತ್ರವಿರುವ ಟೀ ಶರ್ಟ್‌ಧರಿಸದಂತೆ  ಸಿ.ಆರ್.ಪಿ.ಸಿ. ಸಂಹಿತೆ 1973 ರ ಕಲಂ.144 ರ ಅನ್ವಯ  ಬೆಳಿಗೆ: 6-00 ಗಂಟೆಯಿಂದ ದಿನಾಂಕ: 10-11-2023 ರ ರಾತ್ರಿ 11.00 ಗಂಟೆಯವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ತಾಲ್ಲೂಕು ದಂಡಾಧಿಕಾರಿ ಪರಶುರಾಮ ಸತ್ತಿಗೇರಿ ಆದೇಶ ಹೊರಡಿಸಿದ್ದಾರೆ.

ನಿಷೇದಾಜ್ಞೆಯ ನಿಭಂದನೆಗಳು:

1. ಐದು ಅಥವಾ ಅದಕ್ಕಿಂತಲೂ ಹೆಚ್ಚು ಜನರು ಒಂದು ಕಡೆ ಸೇರಬಾರದು.

2 . ಯಾವುದೇ ರೀತಿಯ ಸಭೆ, ಸಮಾರಂಭ ಮತ್ತು ಮೆರವಣಿಗೆ ಇತ್ಯಾದಿಗಳನ್ನು ನಡೆಸಬಾರದು.

3. ನಿಷೇದಾಜ್ಞೆ ಜಾರಿಯಲ್ಲಿರುವ ಪ್ರದೇಶದಲ್ಲಿ ಯಾವುದೇ ರೀತಿಯ ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡಬಾರದು,

4. ಪ್ರತಿಭಟನೆ, ಮೆರವಣಿಗೆ, ಡ್ಯಾಲಿ, ಬ್ಯಾನರ್, ಬಂಟಿಂಗ್ಸ್, ಬಾವುಟಗಳು ಧ್ವನಿವರ್ದಕಗಳು, ಪಟಾಕಿಸುಡುವುದು, ಡಿ.ಜೆ.ಅಳವಡಿಸಿಕೊಂಡು ಘೋಷಣೆ ಕೂಗದಂತೆ ಹಾಗೂ ಟಾಬ್ಲೊ, ಪ್ರಚೋದನಾತ್ಮಕ ಚಿತ್ರವಿರುವ ಟೀ ಪರ್ಟ್‌ಧರಿಸದಂತೆ ನಿಷೇದಿಸಿದೆ

5. ಯಾವುದೇ ವಿನಾಶಕಾರಿಯಾದಂತಹ ವಸ್ತು ಅಥವಾ ಸ್ಫೋಟಕ ವಸ್ತುಗಳನ್ನು ತೆಗೆದುಕೊಂಡು ಹೋಗುವುದು ನಿಷೇಧಿಸಿದೆ.

6. ರಸ್ತೆ ತಡೆ ಚಳುವಳಿಯನ್ನು ನಿಷೇದಿಸಿದೆ.

7. ಈ ನಿಷೇದಾಜ್ಞೆಯ ಉದ್ದೇಶ ಶವ ಸಂಸ್ಕಾರ, ಮದುವೆ ಮತ್ತು ಪೋಲಿಸ್‌ ಉಪ ಅಧೀಕ್ಷಕರಿಂದ ನಿರ್ಧಿಷ್ಟ ಇನ್ನಿತರೆ ಸಮಾರಂಭಗಳಿಗೆ ಲಿಖಿತ ಅನುಮತಿ ಪಡೆದಿರುವುದಕ್ಕೆ ಅನ್ವಯಿಸುವುದಿಲ್ಲ.

ಸಮಾನ ಮನಸ್ಕರ ವೇದಿಕೆಯಿಂದ ಟಿಪ್ಪು ಜಯಂತಿ : 

ಮುಂದಿನ ತಿಂಗಳು ಡಿಸೆಂಬರ್ -1 ರಂದು ಟಿಪ್ಪು ಜಯಂತಿಯನ್ನು ಶ್ರೀರಂಗಪಟ್ಟಣದಲ್ಲೇ ಆಚರಿಸಲು ಸಮಾನ ಮನಸ್ಕರ ವೇದಿಕೆಯಿಂದ ತೀರ್ಮಾನಿಸಲಾಗಿದೆ ಎಂದು ವೇದಿಕೆಯ ಸಂಚಾಲಕರಾದ ವಕೀಲ ಲಕ್ಷ್ಮಣ್ ಚೀರನಳ್ಳಿ ನುಡಿ ಕರ್ನಾಟಕ ಡಾಟ್ ಕಾಂ ಗೆ ತಿಳಿಸಿದರು.

 

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!