ವರದಿ : ಅನುಪಮ ಸತೀಶ್
ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಲೆಂದು ಮಧುಗಿರಿ ತಾಲ್ಲೂಕಿನಿಂದ ಮಲೈಮಹದೇಶ್ವರ ಬೆಟ್ಟಕ್ಕೆ ಮೂವರು ಜೆಡಿಎಸ್ ಕಾರ್ಯಕರ್ತರು ಪಾದಯಾತ್ರೆ ಕೈಗೊಂಡಿದ್ದಾರೆ.
ಮಧುಗಿರಿ ತಾಲ್ಲೂಕಿನ ಶ್ರಾವಂಡನಹಳ್ಳಿ ಎಸ್.ಎ.ಅಶೋಕ್, ಜಗದೀಶ್ ಹಾಗೂ ಮೂರ್ತಿ ಅವರು ಹೆಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿ, ಮಧುಗಿರಿ ಶಾಸಕ ವೀರಭದ್ರಯ್ಯ ಮತ್ತೊಮ್ಮೆ ಶಾಸಕರಾಗಲಿ, ಗೌರಿಬಿದನೂರಿನ ಜೆಡಿಎಸ್ ಅಭ್ಯರ್ಥಿ ನರಸಿಂಹಮೂರ್ತಿ ಅವರು ಶಾಸಕರಾಗಲಿ ಎಂದು ಬಯಸಿ ಮಧುಗಿರಿ ತಾಲ್ಲೂಕಿನ ಶ್ರಾವಂಡನಹಳ್ಳಿಯಿಂದ ಮಲೈಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ, ಈ ಪಾದಯಾತ್ರಿಗಳನ್ನು ಭಾರತೀನಗರದಲ್ಲಿ ಜೆಡಿಎಸ್ ಕಾರ್ಯಕರ್ತರು ಸ್ವಾಗತಿಸಿ ಅಭಿನಂದಿಸಿ ಬೀಳ್ಕೊಟ್ಟರು.
ಯುಗಾದಿ ಹಬ್ಬದ ಮಾರನೆಯ ದಿನದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದು, ದಾರಿಯುದ್ದಕ್ಕೂ ನಮ್ಮ ಪಾದಯಾತ್ರೆಗೆ ಹಲವರು ಶುಭ ಹಾರೈಸುತ್ತಿರುವುದು ನಮಗೆ ಸಂತಸ ತಂದಿದೆ ಎಂದು ಪಾದಯಾತ್ರೆಗಳು ಹರ್ಷ ವ್ಯಕ್ತಪಡಿಸಿದರು.
ಎಚ್.ಡಿ.ಕುಮಾರಸ್ವಾಮಿ ತಮ್ಮ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. ಇದುವರೆವಿಗೂ ಅಂತಹ ಆಡಳಿತವನ್ನು ಯಾವ ಮುಖ್ಯಮಂತ್ರಿಗಳು ನೀಡಿಲ್ಲ. ಲಾಟರಿ, ಸಾರಾಯಿ ನಿಷೇಧ, ಬಡವರಿಗೆ, ನಿರ್ಗತಿಕರಿಗೆ ಸಹಾಯ ಮಾಡುತ್ತ ಉತ್ತಮ ಆಡಳಿತ ನೀಡಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಇವರು ಆಯ್ಕೆಗೊಂಡರೆ ರಾಜ್ಯ ಅಭಿವೃದ್ದಿಗೊಳ್ಳುತ್ತದೆ ಎಂಬ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಂಡಿರುವುದಾಗಿ ಎಸ್.ಎ.ಅಶೋಕ್ ತಿಳಿಸಿದರು.
ಕೆ.ಎಂ.ದೊಡ್ಡಿಯಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ ಅವರ ನೇತೃತ್ವದಲ್ಲಿ ಈ ಮೂವರು ಜೆಡಿಎಸ್ ಅಭಿಮಾನಿಗಳನ್ನು ಅಭಿನಂದಿಸಿ ನಿಮ್ಮ ಪಾದಯಾತ್ರೆ ಯಶಸ್ವಿಗೊಳ್ಳಲಿ ಎಂದು ಶುಭಹಾರೈಸಿ ಬೀಳ್ಕೊಟ್ಟರು. ನಂತರ ಕೆ.ಎಂ.ದೊಡ್ಡಿಯ ಶ್ರೀವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಾದಯಾತ್ರೆಯನ್ನು ಮುಂದುವರೆಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ವೆಂಕಟೇಶ್, ಮುಖಂಡರಾದ ಕೆಂಚೇಗೌಡರ ಶ್ರೀನಿವಾಸ್, ರಘು ವೆಂಕಟೇಗೌಡ, ಕರಡಕೆರೆ ಯೋಗೇಶ್, ಗುಡಿಗೆರೆ ಬಸವರಾಜು, ಕೆ.ಪಿ.ದೊಡ್ಡಿ ಶಿವರಾಮು, ಅಣ್ಣೂರು ಪ್ರಕಾಶ, ವಿನು, ಕೆ.ಟಿ.ಸುರೇಶ, ಶ್ರೀನಿವಾಸ, ಆಲಭುಜನಹಳ್ಳಿ ಬಾಬು ಸೇರಿದಂತೆ ಹಲವರಿದ್ದರು.




