ಆಕಾಶದೆತ್ತರಕ್ಕೆ ಏರಿರುವ ಅಗತ್ಯ ವಸ್ತುಗಳ ಬೆಲೆಯ ಮಧ್ಯೆ ಜನತೆಗೆ ಮತ್ತೊಂದು ಆಘಾತ ಕೊಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಿದ್ಧವಾಗಿದೆ. ಸಾಮಾನ್ಯ ಬಳಕೆಯ ಔಷಧಿಗಳ ಬೆಲೆಯನ್ನು 12%ಕ್ಕೂ ಅಧಿಕವಾಗಿ ಹೆಚ್ಚಿಸಲು ಔಷಧ ಕಂಪನಿಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಹೈರಾಣಾಗಿರುವ ಜನತೆಯ ಮೇಲೆ ಮತ್ತೊಂದು ಹೊರೆ ಹೊರಿಸಲಿದೆ ಎಂದು ಜೆಡಿಎಸ್ ಕಿಡಿಕಾರಿದೆ.
ಆಕಾಶದೆತ್ತರಕ್ಕೆ ಏರಿರುವ ಅಗತ್ಯ ವಸ್ತುಗಳ ಬೆಲೆಯ ಮಧ್ಯೆ ಜನತೆಗೆ ಮತ್ತೊಂದು ಆಘಾತ ಕೊಡಲು @BJP4India ನೇತೃತ್ವದ ಕೇಂದ್ರ ಸರ್ಕಾರ ಸಿದ್ಧವಾಗಿದೆ. ಸಾಮಾನ್ಯ ಬಳಕೆಯ ಔಷಧಿಗಳ ಬೆಲೆಯನ್ನು 12%ಕ್ಕೂ ಅಧಿಕವಾಗಿ ಹೆಚ್ಚಿಸಲು ಔಷಧ ಕಂಪನಿಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಹೈರಾಣಾಗಿರುವ ಜನತೆಯ ಮೇಲೆ ಮತ್ತೊಂದು ಹೊರೆ. 1/3 pic.twitter.com/mtdhPhnhDU
— Janata Dal Secular (@JanataDal_S) March 30, 2023
“>
ನೋವು ನಿವಾರಕ, ಆ್ಯಂಟಿ ಬಯಾಟಿಕ್, ಉರಿಯೂತ ನಿವಾರಕ ಔಷಧಿ ಸೇರಿದಂತೆ ಜನಸಾಮಾನ್ಯರು ಹೆಚ್ಚು ಬಳಸುವ 800ಕ್ಕೂ ಹೆಚ್ಚು ಔಷಧಿಗಳ ಬೆಲೆ ಏಪ್ರಿಲ್ ತಿಂಗಳಿಂದ ಏರಿಕೆಯಾಗಲಿದೆ. ಕಳೆದ ವರ್ಷವೂ 10% ಕ್ಕಿಂತ ಹೆಚ್ಚು ಏರಿಸಲಾಗಿತ್ತು. ಮೊಟ್ಟಮೊದಲ ಬಾರಿ ಈ ಪ್ರಮಾಣದಲ್ಲಿ ಸಾಮಾನ್ಯ ಔಷಧಿಗಳ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಜೆಡಿಎಸ್ ಸರಣಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದೆ.
ಯಾರೂ ಕೂಡ ಬದುಕಲು ಬಿಡಬಾರದು ಎಂಬ ದುಷ್ಟ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಂಗಿದೆ. ಬಳಕೆಯ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಜನತೆಯ ಜೇಬು ಖಾಲಿಯಾಗಿ, ಬಡವರು ಇನ್ನಷ್ಟು ಬಡವರಾಗಿ, ಹಸಿವಿಗೆ ದೂಡಲ್ಪಡುತ್ತಿದ್ದಾರೆ. ಇಷ್ಟು ವಿಕೃತ ಜನದ್ರೋಹಿ ಮನಸ್ಥಿತಿ ದೇಶದ ಇತಿಹಾಸದಲ್ಲೇ ಯಾವ ಸರ್ಕಾರಕ್ಕೂ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.




