Thursday, November 19, 2026

ಪ್ರಾಯೋಗಿಕ ಆವೃತ್ತಿ

ಏ.1ರಿಂದ ಔ‍ಷಧಿಗಳ ಬೆಲೆಯನ್ನು ಶೇ.12ರಷ್ಟು ಹೆಚ್ಚಳ ಮಾಡುತ್ತಿರುವ ಬಿಜೆಪಿ ಜನದ್ರೋಹಿ : ಜೆಡಿಎಸ್

ಆಕಾಶದೆತ್ತರಕ್ಕೆ ಏರಿರುವ ಅಗತ್ಯ ವಸ್ತುಗಳ ಬೆಲೆಯ ಮಧ್ಯೆ ಜನತೆಗೆ ಮತ್ತೊಂದು ಆಘಾತ ಕೊಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಿದ್ಧವಾಗಿದೆ. ಸಾಮಾನ್ಯ ಬಳಕೆಯ ಔಷಧಿಗಳ ಬೆಲೆಯನ್ನು 12%ಕ್ಕೂ ಅಧಿಕವಾಗಿ ಹೆಚ್ಚಿಸಲು ಔಷಧ ಕಂಪನಿಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಹೈರಾಣಾಗಿರುವ ಜನತೆಯ ಮೇಲೆ ಮತ್ತೊಂದು ಹೊರೆ ಹೊರಿಸಲಿದೆ ಎಂದು ಜೆಡಿಎಸ್ ಕಿಡಿಕಾರಿದೆ.

“>

ನೋವು ನಿವಾರಕ, ಆ್ಯಂಟಿ ಬಯಾಟಿಕ್, ಉರಿಯೂತ ನಿವಾರಕ ಔಷಧಿ ಸೇರಿದಂತೆ ಜನಸಾಮಾನ್ಯರು ಹೆಚ್ಚು ಬಳಸುವ 800ಕ್ಕೂ ಹೆಚ್ಚು ಔಷಧಿಗಳ ಬೆಲೆ ಏಪ್ರಿಲ್ ತಿಂಗಳಿಂದ ಏರಿಕೆಯಾಗಲಿದೆ. ಕಳೆದ ವರ್ಷವೂ‌ 10% ಕ್ಕಿಂತ ಹೆಚ್ಚು ಏರಿಸಲಾಗಿತ್ತು. ಮೊಟ್ಟಮೊದಲ ಬಾರಿ ಈ ಪ್ರಮಾಣದಲ್ಲಿ ಸಾಮಾನ್ಯ ಔಷಧಿಗಳ ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಜೆಡಿಎಸ್ ಸರಣಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದೆ.

ಯಾರೂ ಕೂಡ ಬದುಕಲು ಬಿಡಬಾರದು ಎಂಬ ದುಷ್ಟ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬಂದಂಗಿದೆ. ಬಳಕೆಯ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಜನತೆಯ ಜೇಬು ಖಾಲಿಯಾಗಿ, ಬಡವರು ಇನ್ನಷ್ಟು ಬಡವರಾಗಿ, ಹಸಿವಿಗೆ ದೂಡಲ್ಪಡುತ್ತಿದ್ದಾರೆ. ಇಷ್ಟು ವಿಕೃತ ಜನದ್ರೋಹಿ ಮನಸ್ಥಿತಿ ದೇಶದ ಇತಿಹಾಸದಲ್ಲೇ ಯಾವ ಸರ್ಕಾರಕ್ಕೂ ಇರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ