Thursday, November 19, 2026

ಪ್ರಾಯೋಗಿಕ ಆವೃತ್ತಿ

ಉತ್ತಮ ಶಿಕ್ಷಣ ನೀಡುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿರುವ ಸಾಹಿತಿ ಡಾ.ಮ.ರಾಮಕೃಷ್ಣ : ಮಧು ಜಿ. ಮಾದೇಗೌಡ

ವರದಿ : ಅನುಪಮ ಸತೀಶ್

ಮದ್ದೂರು ತಾಲ್ಲೂಕು  ಭಾರತೀಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸಾಹಿತಿ ಡಾ.ಮ.ರಾಮಕೃಷ್ಣ 60ರ ಸಂಭ್ರಮಾಚರಣೆ  ಸಮಾರಂಭವು ಜರುಗಿತು.

ಸಾಹಿತಿ ಡಾ.ಮ.ರಾಮಕೃಷ್ಣ ದಂಪತಿಯನ್ನು  ಭಾರತೀ ಎಜುಕೇಷನ್ ಟ್ರಸ್ಟ್ ನ  ಅಧ್ಯಕ್ಷ ಮಧು ಜಿ. ಮಾದೇಗೌಡ ಅಭಿನಂದಿಸಿ ಬೀಳ್ಕೊಟ್ಟರು.

ನಂತರ ಮಧು ಜಿ. ಮಾದೇಗೌಡ ಅವರು ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿರುವ ಸಾಹಿತಿ ಡಾ.ಮ.ರಾಮಕೃಷ್ಣ ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಆಶಿಸಿದರು.

ನಮ್ಮ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ಉತ್ತಮ ಆಡಳಿತ ನಡೆಸಿ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ. ಇವರು ನಿವೃತ್ತಿಗೊಳ್ಳುತ್ತಿರುವುದು ನಮಗೂ ಬೇಸರ ತಂದಿದೆ ಎಂದರು.

ಮೈಸೂರಿನ ಪ್ರಸಿದ್ದಿ ಸಾಹಿತಿ ಡಾ.ರಾಗೌ ಅವರು ಮಾಮರ ಅಭಿನಂದನಾ ಗ್ರಂಥವನ್ನು ಬಿಡುಗಡೆಗೊಳಿಸಿ ಮಾತನಾಡಿ, ಸಾಹಿತಿ ಮ.ರಾಮಕೃಷ್ಣರವರನ್ನು ನನ್ನ ಶಿಷ್ಯನಾಗಿ ಪಡೆದಿದ್ದು ಬಹಳ ಹೆಮ್ಮೆ ತಂದಿದೆ. ಅವರ ಚಿಂತನೆ, ಆಲೋಚನೆಗಳು, ಸಮಾಜಕ್ಕೆ ಒಳಿತು ಉಂಟುಮಾಡುವಂತಹ ಬೆಳವಣಿಗೆಯಾಗಿದೆ ಎಂದರು.

ನಿವೃತ್ತ ಪ್ರಾಂಶುಪಾಲ ಮ.ರಾಮಕೃಷ್ಣದಂಪತಿ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ದಿ.ಜಿಮಾದೇಗೌಡರು ಈ ವಿದ್ಯಾಸಂಸ್ಥೆಯಲ್ಲಿ ಕೆಲಸ ಮಾಡಲು ಅವಕಾಶ ಕೊಟ್ಟಿದ್ದು ನನ್ನ ದೊಡ್ಡ ಪುಣ್ಯ ಎಂದರು. ತನ್ನ ಸ್ನೇಹಿತ ಧನರಾಜ್ ಅವರನ್ನು ನೆನೆದು ಭಾವುಕರಾದರು.

ನಿವೃತ್ತಿಗೊಂಡ ಹಿನ್ನೆಲೆಯಲ್ಲಿ ಮ.ರಾಮಕೃಷ್ಣ ಅವರನ್ನು ಅಧ್ಯಾಪಕ, ಅಧ್ಯಾಪಕೇತರರು, ಸಿಬ್ಬಂದಿಗಳು, ವಿದ್ಯಾಥರ್ಿಗಳು ಅಭಿನಂದಿಸಿ ಗೌರವಿಸಿದರು.

ಇದೇ ವೇಳೇ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625 ಕ್ಕೆ 620 ಅಂಕ ಪಡೆದ ಮಾದಹಳ್ಳಿ ಪಲ್ಲವಿ ಅವರಿಗೆ ಮಾ.ರಾಮಕೃಷ್ಣ ಅವರು 10 ಸಾವಿರ ಪ್ರೋತ್ಸಾಹ ಧನ ನೀಡಿ ಅಭಿನಂದಿಸಿದರು.

ವೇದಿಕೆಯಲ್ಲಿ ಸಂಸ್ಕೃತಿ ಚಿಂತಕ ಮತ್ತು ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ , ಕರ್ನಾಟಕ ಸಂಘದ ಜಿಲ್ಲಾಧ್ಯಕ್ಷ ಪ್ರೊ.ಜಯಪ್ರಕಾಶ್ಗೌಡ, ಸಾಹಿತಿ ಕೂಡಲೂರು ವೆಂಕಟಪ್ಪ, ಬಿಇಟಿ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಸಿದ್ದೇಗೌಡ, ಟ್ರಸ್ಟಿಗಳಾದ ಚಂದೂಪುರ ಪಾಪಣ್ಣ, ಜಯರಾಮು, ಮುದ್ದೇಗೌಡ ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ