ಮಾಜಿ ಸಿ.ಎಂ. ಹೆಚ್.ಡಿ.ಕುಮಾರಸ್ವಾಮಿ ಕುಟುಂಬದವರನ್ನು ಬಿಟ್ರೆ ಬೇರೆ ಯಾರನ್ನು ಬೆಳೆಯೋಕೆ ಬಿಟ್ಟಿಲ್ಲ ಎಂದು ಸಚಿವ ನಾರಾಯಣಗೌಡ ವಾಗ್ಧಾಳಿ ನಡೆಸಿದರು.
ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಅವರು, ಅವರು ಜೆಡಿಎಸ್ ಪಕ್ಷದಲ್ಲಿ ಯಾರನ್ನು ಬೆಳೆಯೋಕೆ ಬಿಟ್ಟಿಲ್ಲ, ಬಿಡೋದು ಇಲ್ಲ. ಬೆಳೆಯೋಕೆ ಬಿಟ್ಟಿದ್ರೆ ವಿಶ್ವಾನಾಥ್, ಶಿವಲಿಂಗೇಗೌಡ, ರಾಮಸ್ಚಾಮಿ, ಬಿ ವೈ ದತ್ತಾ, ನಾನು ಯಾಕೆ ಪಕ್ಷ ಬಿಡ್ತಿದ್ವಿ ? ಇವರು ಬೆಳೆಯುವ ನಾಯಕರಿಗೆ ಟಾರ್ಗೆಟ್ ಇಟ್ರೆ ನಾವು ಎಷ್ಟು ದಿನ ಕಾಯೋದು…ನಮ್ಮ ಕ್ಷೇತ್ರ ಅಭಿವೃದ್ಧಿ ಮಾಡದಿದ್ರೆ ಜನರು ಸುಮ್ಮನಿರ್ತಾರಾ?.. ಅದಕ್ಕಾಗಿ ಎಲ್ಲರೂ ಪಕ್ಷ ಬಿಡೋ ತೀರ್ಮಾನ ತೆಗೆದು ಕೊಂಡಿದ್ದಾರೆ ಎಂದರು.
ಜೆಡಿಎಸ್ ನಿಂದ ರಾಜ್ಯ ಸೇರಿದಂತೆ ನಮ್ಮ ಕ್ಷೇತ್ರಕ್ಕೆ ಏನ್ ಕೊಡುಗೆ. ಪಾಪ ಈಗ ಪಕ್ಷ ಬಿಟ್ಟ ದೇವರಾಜಣ್ಣ ಆಗಿನಿಂದ ಪಕ್ಷದ ಪೋಸ್ಟರ್ ಅಂಟಿಸಿದ್ರು. ಈಗ ಅವ್ರಿಗೆ ಪಕ್ಷದ ಟಿಕೆಟ್ ಕೊಡದೆ ಚಿಪ್ಪು ಕೊಟ್ಟಿದ್ದಾರೆ. ಇವ್ರು ಒಬ್ಬ ನಾಯಕನ್ನು ತುಳಿಯಲು ಮತ್ತೊಬ್ಬನನ್ನು ಬೆಳೆಸ್ತಾರೆ. ಅವನು ಬೆಳೆಯುತ್ತಿದ್ದಂತೆ ಮತ್ತೊಬ್ಬನನ್ನು ತಂದು ತುಳಿತಾರೆ. ಇವರು ಯಾರನ್ನು ಬೆಳೆಯೋಕೆ ಬಿಟ್ಟಿಲ್ಲ. ಬೇಕಾದ್ರೆ, ಈಗಿನ ಮೇಲುಕೋಟೆ ಶಾಸಕ ಪುಟ್ಟರಾಜು ರವರ ಅಂತರಂಗದ ಅಳಲನ್ನು ಕೇಳಿ…ಅವರ ಅಂತರಂಗದಲ್ಲಿ ಅಳಲನ್ನು ಮಿಷಿನ್ ಹಾಕಿ ಕೇಳಬೇಕು. ಪುಟ್ಟರಾಜಣ್ಣ ಈಗ ಬಾಯಲ್ಲಿ ಹೇಳಲ್ಲ ಅವ್ರ ಹಾರ್ಟಿಗೆ ಮಿಷನ್ ಹಾಕಬೇಕು ಎಂದು ಕುಮಾರಸ್ವಾಮಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.




