ಕೆ ಆರ್ ಪೇಟೆ ತಾಲ್ಲೂಕು ಕಸಬಾ ಹೋಬಳಿ ಕತ್ತರಘಟ್ಟ ಗ್ರಾಮದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ನಡೆದ ಪೌತಿಖಾತಾ ಆಂದೋಲನ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ತಾಲ್ಲೂಕು ದಂಡಾಧಿಕಾರಿ ನಿಸರ್ಗ ಪ್ರಿಯ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಈ ಕಾರ್ಯಕ್ರಮದ ಉದ್ದೇಶವೇನೆಂದರೆ ರೈತರು ತಾಲ್ಲೂಕು ಕಚೇರಿಗೆ ಸುಖಾ ಸುಮ್ಮನೆ ಅಲೆಯಬಾರದು. 60ವರ್ಷ ತುಂಬಿದ ವೃದ್ದರಿಗೆ ಸರ್ಕಾರ ನೀಡುವ ಪಿಂಚಣಿ ಸೌಲಭ್ಯವನ್ನು ಸಂಬಂಧಿಸಿದ ಕಚೇರಿಯಲ್ಲಿ ಅರ್ಜಿ ಹಾಕಿ ಪಡೆಯುವುದು. ತೋಟಗಾರಿಕೆ, ಕೃಷಿಇಲಾಖೆಗಳಲ್ಲಿ ಹಾಗೂ ಬ್ಯಾಂಕ್ ಗಳಲ್ಲಿ ಅಥವಾ ಇನ್ನಿತರ ಸಂಸ್ಥೆಗಳಲ್ಲಿ ಸಾಲ ಪಡೆಯಬೇಕಾದರೆ ಆರ್ ಟಿ ಸಿ ಬಹಳ ಮುಖ್ಯ. ದಾಖಲೆಗಳನ್ನು ಸರಿಪಡಿಸಲು ಕ್ರಮವಹಿಸಲಾಗುವುದು. ಆದ್ದರಿಂದ ಆರ್ ಟಿ ಸಿ ಹಳೆಯದಿದ್ದರೆ ಹೆಸರು ತಿದ್ದುಪಡಿ ಮಾಡಿಸಿ ಕೊಳ್ಳುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ರೈತರು ಬೇರೆ ಬೇರೆ ಸೌಲಭ್ಯಗಳನ್ನು ಪಡೆಯಬೇಕಾದರೆ ಜಮೀನಿನ ದಾಖಲೆಗಳು ಸರಿಯಿದ್ದಲ್ಲಿ ನೀವು ಪಡೆಯಬಹುದು. ಅದ್ದರಿಂದ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ರೈತರಿಗೆ ಅನುಕೂಲವಾಗಲೆಂದು ಪಹಣಿ ತಿದ್ದುಪಡಿಗೆ ಬೇಕಾದ ದಾಖಲೆಗಳಾದ ಚಾಲ್ತಿ ಆರ್.ಟಿ.ಸಿ, ಎಂ.ಆರ್.ಐ ಎನ್ ಹೆಚ್, ಆಕಾರ್ ಬಂದ್,ಕೈಬರಹದ ಪಹಣಿಗಳು, ಆರ್ ಆರ್ ಇಂಡೆಕ್ಸ್, ಪೌತಿ ವಾರಸು ಖಾತೆಗೆ ಬೇಕಾದ ದಾಖಲೆಗಳಾದ ಚಾಲ್ತಿ ಆರ್ ಟಿ ಸಿ, ಎಂ ಆರ್, ಐ ಎನ್ ಹೆಚ್, ಮರಣ ಪ್ರಮಾಣ ಪತ್ರ, ವಂಶವೃಕ್ಷ, ಅರ್ಜಿ ಮತ್ತು ಪೋಡಿ ಇಂಡೀಕರಣಕ್ಕೆ ಬೇಕಾದ ದಾಖಲೆಗಳಾದ ಅರ್ಜಿ, ಚಾಲ್ತಿ ಅರ್ ಟಿ ಸಿ, ಆಕಾರ್ ಬಂದ್, ಎಡ ಬಲ ಪ್ರತಿ, ಹಳೆಯ ಕರಪತ್ರದಂತೆ ಖಾತೆ ಮಾಡಲು ಸಲ್ಲಿಸಬೇಕಾದ ದಾಖಲೆಗಳಾದ ಅರ್ಜಿ, ದೃಢೀಕೃತ ಕ್ರಯಪತ್ರ, ಕ್ರಯ ಆದಾಗಿನಿಂದ ಇಲ್ಲಿಯವರೆಗೆ ಇ ಸಿ, ಚಾಲ್ತಿ ಆರ್ ಟಿ ಸಿ ಹೀಗೆ ದಾಖಲೆಗಳನ್ನು ಸರಿಮಾಡಿಸಿಕೊಂಡು ಇಂತಹ ಸಂದರ್ಭದಲ್ಲಿ ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಹರಿಹರಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಂದ್ರಮ್ಮ, ಗ್ರಾ.ಪಂ.ಉಪಾಧ್ಯಕ್ಷ ಬಲರಾಮೇಗೌಡ, ಗ್ರಾ.ಪಂ.ಸದಸ್ಯ ಪರಮೇಶ್,ವಿಜಯಮ್ಮ, ಚಂದ್ರಶೇಖರ್, ಮಹೇಶ ಚೆನ್ನೇಗೌಡ, ಸ್ಮಾಮಣ್ಣ, ರಂಗಣ್ಣ ಸೇರಿದಂತೆ ಫಲಾನುಭವಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.




